Advertisement

ಬೇವಿನ ಮರಕ್ಕೆ ಕಾರು ಡಿಕ್ಕಿ: ಐವರು ಸಾವು

11:14 PM Feb 21, 2020 | Lakshmi GovindaRaj |

ಶಹಾಪುರ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆ ತಾಲೂಕಿನ ಗುಂಡಾಪುರ ಕ್ರಾಸ್‌ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

Advertisement

ಸುರಪುರ ತಾಲೂಕಿನ ನಗನೂರ ಗ್ರಾಮದ ಶರಣಬಸವ ಷಣ್ಮುಖಪ್ಪ ಅಂಗಡಿ (32), ಶರಣು ಓಂಕಾರಪ್ಪಗೌಡ ಕೂಡೂಗಿ (21),ಸುರಪುರ ತಾಲೂಕಿನ ಗೌಡಗೇರಾ ಗ್ರಾಮದ ವಿಶ್ವಾರಾಧ್ಯ ಬಸಯ್ಯ (25), ತಿರುಪತಿ ಹಣಮಂತ (28) ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆಂದು ಕಲಬುರಗಿಗೆ ಕಳುಹಿಸಲಾಗಿದ್ದ ಬೈಲಪ್ಪ ಸಾಹೇಬರಡ್ಡಿ ಗೌಡಗೇರಾ (30)ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಿಗಾಯಗೊಂಡ ಮಲ್ಲಪ್ಪ ಬಸಪ್ಪ ಗೌಡಗೇರಿ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಪುರ ನಗರಕ್ಕೆ ಕೆಲಸ ನಿಮಿತ್ತ ಆಗಮಿಸಿ ಮರಳಿ ಗ್ರಾಮಕ್ಕೆ ತೆರಳುವ ಸಂದರ್ಭ ಮಾರ್ಗಮಧ್ಯೆ ಈ ದುರ್ಘ‌ಟನೆ ನಡೆದಿದೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next