Advertisement

ತಿಲಾರಿ ಘಾಟ್‌ ಪ್ರಪಾತಕ್ಕೆ ಕಾರು ಬಿದ್ದು ಐವರ ದುರ್ಮರಣ

06:25 AM Jul 09, 2018 | Team Udayavani |

ಬೆಳಗಾವಿ: ಪ್ರೇಕ್ಷಣೀಯ ಸ್ಥಳಗಳಿಗೆ ಸುತ್ತಾಡಲು ತೆರಳಿದ್ದ ನಗರದ ಶ್ರೀ ಭಕ್ತಿ ಮಹಿಳಾ ಸೊಸೈಟಿಯ ಐವರು ಸಿಬ್ಬಂದಿಯಿದ್ದ ಕಾರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಘಾಟ್‌ನ ಕೋದಾಳಿಯ ಪ್ರಪಾತಕ್ಕೆ ಬಿದ್ದು ಐವರೂ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

Advertisement

ಭಾನುವಾರ ಮಹಾರಾಷ್ಟ್ರದ ಘಾಟ್‌ಗಳನ್ನು ಸುತ್ತಾಡಲು ಹೋಗಿದ್ದ ಬೆಳಗಾವಿಯ ಪ್ರತಿಷ್ಠಿತ ಶ್ರೀ ಮಾತಾ ಸೊಸೈಟಿಯ ಅಂಗ ಸಂಸ್ಥೆಯಾದ ಭಕ್ತಿ ಸೊಸೈಟಿ ಸಿಬ್ಬಂದಿ ಶಿವಾಜಿನಗರದ ಪಂಕಜ ಉಫì ಜ್ಯೋತಿರ್ಲಿಂಗ ಸಂಪತ್‌ ಕಿಲ್ಲೇಕರ(30), ಬಾಳೇಕುಂದ್ರಿಯ ಮೋಹನ ಲಕ್ಷ್ಮಣ ರೇಡಕರ(40), ಜುನೆ ಬೆಳಗಾವಿಯ ಕಿಶನ್‌ ಮುಕುಂದ ಗಾವಡೆ(19), ಬೋಕನೂರ ಗ್ರಾಮದ ಯಲ್ಲಪ್ಪ ಪಾಟೀಲ(45) ಹಾಗೂ ಅಷ್ಟೇ ಗ್ರಾಮದ ನಾಗೇಂದ್ರ ಸಿದ್ದಪ್ಪ ಬಾಬುಗವಡೆ(29) ಮೃತಪಟ್ಟವರು.

ತಿಲಾರಿ ಘಾಟ್‌ ಅತ್ಯಂತ ಅಪಾಯಕಾರಿ ಸ್ಥಳವಾದ ಲಷ್ಕರ್‌ ಪಾಯಿಂಟ್‌ ನೋಡಲು ತೆರಳಿದ್ದರು. ಪ್ರಪಾತದ ರಸ್ತೆ ಪಕ್ಕದಲ್ಲಿ ಕಬ್ಬಿಣದ ಸಲಾಕೆಯಿಂದ ತಡೆಗೋಡೆ ನಿರ್ಮಿಸಲಾಗಿದ್ದು,ಸ್ವಲ್ಪ ಮುಂದೆ ಹೋದಂತೆ ಕೆಲವು ಕಡೆ ತಡೆಗೋಡೆಯೇ ಇಲ್ಲ. ಕಬ್ಬಿಣದ ತಡೆಗೋಡೆ ಇಲ್ಲದ ಸ್ಥಳದಲ್ಲಿಯೇ ಲಷ್ಕರ್‌ ಪಾಯಿಂಟ್‌ ಇದೆ. ಅಲ್ಲಿ ಚಲಿಸುತ್ತಿದ್ದಂತೆ ಕಾರಿನ ಬ್ರೆಕ್‌ ಹತ್ತುವುದಿಲ್ಲ. ಅಷ್ಟೊಂದು ಅಪಾಯಕಾರಿ ಸ್ಥಳ ಇದಾಗಿದೆ. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಇಬ್ಬರ 
ಮೃತದೇಹಗಳು ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿದ್ದು, ಒಬ್ಬನ ಮೃತದೇಹ ಕಾರಿನಿಂದ ಸ್ವಲ್ಪ ದೂರದಲ್ಲಿ ಹಾಗೂ ಇನ್ನಿಬ್ಬರ ಮೃತದೇಹಗಳು ಕಾರಿನ ಹೊರ ಭಾಗದಲ್ಲಿ ಬಿದ್ದಿವೆ. ಚಂದಗಡ ಹಾಗೂ ಖಾನಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ಮೃತದೇಹಗಳನ್ನು ಕಾರಿನಿಂದ ತೆಗೆಯಲು ಹಾಗೂ ಪ್ರಪಾತದಿಂದ ಮೇಲಕ್ಕೆ ತರಲು ಅಡಚಣೆ ಉಂಟಾಗುತ್ತಿದೆ.ಕೊಲ್ಲಾಪುರ ಜಿಲ್ಲೆಯ ಚಂದಗಡ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next