Advertisement
ಹೆಬ್ರಿ ಸೀತಾನದಿ ಸೌಖ್ಯಯೋಗ ಟ್ರಸ್ಟ್ ಹಾಗೂ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ವಿವಿಧ ಸಂಘಟನೆಯ ಸಹಯೋಗದೊಂದಿಗೆ ಬೆಳಗ್ಗೆ 7ಕ್ಕೆ ಆರಂಭಗೊಳ್ಳಲಿದೆ. ಹೆಬ್ರಿ ಪರಿಸರ ಸೇರಿದಂತೆ ಶಿವಪುರ, ಕುಚ್ಚಾರು, ಮುದ್ರಾಡಿ, ಮುನಿಯಾಲು, ಚಾರ, ಸೋಮೇಶ್ವರ ಹಾಗೂ ಸುತ್ತಮುತ್ತಲಿನ 8ನೇ ತರಗತಿ ಮೇಲ್ಪಟ್ಟ ಸುಮಾರು 300 ವಿದ್ಯಾರ್ಥಿಗಳು ಹಾಗೂ 100ಕ್ಕೂ ಮಿಕ್ಕಿ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ.
ಸೈಕಲ್ ರ್ಯಾಲಿ ಹೆಬ್ರಿ ಬಸ್‌ಸ್ಟಾಂಡ್‌ನಿಂದ ಹೆಬ್ರಿ ಬಂಟರ ಸಭಾಭವನದವರೆಗೆ ಅನಂತರ ಹೆಬ್ರಿ ಬಸ್‌ತಂಗುದಾಣದಲ್ಲಿ ಸಮಾರೋಪಗೊಳ್ಳಲಿದೆ. ಸ್ಪರ್ಧೆ ಅಲ್ಲ ಜಾಗೃತಿ
ಸೈಕಲ್ ರ್ಯಾಲಿ ಸ್ಪರ್ಧೆ ಅಲ್ಲ ಇದು ಜಾಗೃತಿ. ಇತ್ತೀಚಿನ ಆಧುನಿಕ ಯುಗದಲ್ಲಿ ಜನರ ಆರೋಗ್ಯ ಸುಧಾರಿಸಲು ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ರ್ಯಾಲಿ ಆಯೋಜಿಸಲಾಗುತ್ತಿದೆ.
Related Articles
ಸೈಕಲ್ ಜಾಥಾದಲ್ಲಿ ಭಾಗವಹಿಸಿ ಹೆಸರು ನೋಂದಾಯಿಸುವ ಪ್ರತಿಯೊಬ್ಬರಿಗೂ
ಲಕ್ಕಿ ಕೂಪನ್ ನೀಡಲಾಗುತ್ತಿದ್ದು ವಿಜೇತರಾದ ಹತ್ತು ಜನರಿಗೆ ಒಬ್ಬರಿಗೆ ಒಂದರಂತೆ 10 ಸೈಕಲ್ ಬಹುಮಾನವಾಗಿ ಸಿಗಲಿದೆ.
Advertisement
ಸೈಕಲ್ ಕ್ಲಬ್ಸೈಕಲ್ ರ್ಯಾಲಿ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಸೈಕಲ್ ಬಳಸಿ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ವಾರಕ್ಕೆ ಒಮ್ಮೆಯಾದರೂ ಸೈಕಲ್‌ನಲ್ಲಿ ಚಲಿಸುವ ಉದ್ದೇಶದಿಂದ ಸೈಕಲ್ ಕ್ಲಬ್ ರಚನೆಯಾಗಲಿದ್ದು ಆಸಕ್ತರು ಹೆಸರು ನೊಂದಾಯಿಸುವಂತೆ ಕಾರ್ಯಕ್ರಮದ ನೇತೃತ್ವ ವಹಿಸಿದ ಸೀತಾನದಿ ವಿಠಲ ಶೆಟ್ಟಿ ತಿಳಿಸಿದ್ದಾರೆ. ಸ್ಕೇಟಿಂಗ್ ಪ್ರದರ್ಶನ
ಸೈಕಲ್ ರ್ಯಾಲಿ ಮತ್ತಷ್ಟು ಆಕರ್ಷಕವಾಗಿ ಮೂಡಿ ಬರಲು ಅಂಬಲಪಾಡಿ – ಉಡುಪಿ ಉಪಾಧ್ಯ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ಸೈಕಲ್ ರ್ಯಾಲಿ ಆರಂಭಗೊಳ್ಳುವ ವೇಳೆಯಲ್ಲಿ ಸ್ಕೇಟಿಂಗ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ 3 ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಬಾಲಕಿ ತನುಶ್ರಿ ಪಿತ್ರೋಡಿ ಅವರಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಎಲ್ಲರೂ ಆರೋಗ್ಯವಂತರಾಗಿ ಎನ್ನುವ ಧ್ಯೇಯ
ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂಬ ಧ್ಯೇಯ ಇಟ್ಟುಕೊಂಡು ಆರಂಭವಾದ ಸೌಖ್ಯಯೋಗ ಟ್ರಸ್ಟ್ ಪ್ರತಿ ವರ್ಷ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದು , ಈ ಬಾರಿ ಸೈಕಲ್ ಜಾಥಾ ಹಮ್ಮಿಕೊಂಡಿದೆ. ಆಧುನಿಕ ಜೀವನ ಶೈಲಿಯಿಂದ ಹೊರಬಂದು ದೇಹಕ್ಕೆ ವ್ಯಾಯಾಮ ನೀಡುವ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯವಂತಾಗಿ ಎನ್ನುವುದು ಈ ರ್ಯಾಲಿಯ ಉದ್ದೇಶ.
-ಸೀತಾನದಿ ವಿಠಲ ಶೆಟ್ಟಿ, , ಅಧ್ಯಕ್ಷ ರು, ಸೀತಾನದಿ ಸೌಖ್ಯಯೋಗ ಟ್ರಸ್ಟ್ , ಹೆಬ್ರಿ