ಮಂಗಳೂರು: ಈ ವರ್ಷದ ಮೀನುಗಾರಿಕೆ ಋತು ಅಂತ್ಯ ಗೊಳ್ಳಲು ಕೆಲವೇ ದಿನಗಳಿದ್ದು, ಒಟ್ಟು 3,166 ಕೋ.ರೂ. ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ- ಎರಡೂ ದೃಷ್ಟಿಯಿಂದ ಕುಸಿದು, ಸುಮಾರು 70 ಕೋ.ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ಋತುವಿನಲ್ಲಿ 3,236.99 ಕೋ.ರೂ. ಮೌಲ್ಯದ 2,92,061 ಟನ್ ಮೀನು ಹಿಡಿಯಲಾಗಿತ್ತು.
ಬಂಗುಡೆ, ಬೂತಾಯಿ ಕಡಿಮೆ
ಈ ಋತುವಿನಲ್ಲಿ ಬಂಗುಡೆ, ಬೂತಾಯಿ, ಕೊಡ್ಡಾಯಿ, ಅಂಜಲ್ ದೊರೆತಿರುವುದು ಕಡಿಮೆ. ಕಪ್ಪು ಬಣ್ಣದಕ್ಲಾಟಿ ಮೀನು ಸಿಕ್ಕಿದ್ದೇ ಹೆಚ್ಚು. ಜತೆಗೆ ಮದ್ಮಾಲ್, ಅರೆಣೆ ಸಿಕ್ಕಿವೆ ಎನ್ನುತ್ತಾರೆ ಮೀನುಗಾರರು. ಮೀನುಗಾರಿಕೆ ಇಲಾಖೆಯ ಮೂಲಗಳ ಪ್ರಕಾರ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಒಟ್ಟು 8,456 ಮೋಟರೀಕೃತ ನಾಡದೋಣಿ, 447 ಯಾಂತ್ರೀಕೃತ ದೋಣಿ ಮತ್ತು 8,999 ನಾಡದೋಣಿಗಳು ಕಾರ್ಯಾಚರಿಸುತ್ತಿವೆ.
ದೋಣಿ ನಿಲುಗಡೆ ಅಪಾಯಕಾರಿ!
Advertisement
ಕರಾವಳಿಯಲ್ಲಿ ಈ ವರ್ಷದ ಮೀನುಗಾರಿಕೆ ಋತು ಪೂರ್ಣಗೊಳ್ಳಲು ಇನ್ನು 1 ವಾರಕ್ಕೂ ಕಡಿಮೆ ಅವಧಿ ಬಾಕಿಇವೆ. ಈ ಬಾರಿ ಎರಡೂ ಜಿಲ್ಲೆಗಳಲ್ಲಿ ಮೀನಿನ ಪ್ರಮಾಣ ಮತ್ತು ಮೌಲ್ಯದಲ್ಲಿಆಗಿರುವ ಕುಸಿತ ಮೀನುಗಾರರಲ್ಲಿ ನಿರಾಶೆ ಮೂಡಿಸಿದೆ. ಹೀಗಾಗುವುದಕ್ಕೆ ಹೆಚ್ಚು ಬೇಡಿಕೆಯಿಲ್ಲದ ಒಂದೇ ಜಾತಿಯ ಮೀನು ಲಭ್ಯವಾಗಿರುವುದು ಮತ್ತು ನಾನಾ ಕಾರಣಗಳಿಗೆಬೋಟ್‌ಗಳು ಸಮುದ್ರಕ್ಕಿಳಿಯಲು ಸಾಧ್ಯವಾಗದಿರುವುದೇ ಕಾರಣ ಎನ್ನುವುದು ಮೀನು ಗಾರರ ಅಭಿಪ್ರಾಯ.
Related Articles
Advertisement
ಮಂಗಳೂರು ಮೀನುಗಾರಿಕೆ ಧಕ್ಕೆಯ ವ್ಯಾಪ್ತಿಯಲ್ಲಿ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸೇರಿ ಸುಮಾರು 2,000ಕ್ಕೂ ಅಧಿಕ ದೋಣಿಗಳಿವೆ. ಈಗಿನ ಧಕ್ಕೆ 600 ಮೀ. ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಹೆಚ್ಚು ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶ. ಉಳಿದವುಇತರೆಡೆ ಹೊಂದಾಣಿಕೆ ಮಾಡ ಬೇಕು. ಹೀಗಾಗಿ ಒಂದರ ಹಿಂದೆಇನ್ನೊಂದರಂತೆ 7 ಸಾಲು ನಿಲ್ಲುವ ಪರಿಸ್ಥಿತಿ ಇದೆ. ಇದರಿಂದ ಹಾನಿ ಆಗು ತ್ತಿದೆ ಎಂಬ ಗೋಳು ಕೇಳುವವರಿಲ್ಲ.
61 ದಿನ ರಜೆ
ಪಶ್ಚಿಮ ಕರಾವಳಿಯಲ್ಲಿ 2015ಕ್ಕಿಂತ ಹಿಂದೆ 57 ದಿನ (ಜೂ. 15ರಿಂದ ಆ.10) ಮೀನುಗಾರಿಕೆ ನಿಷೇಧವಿತ್ತು. 2015ರಲ್ಲಿ ಕೇಂದ್ರ ಸರಕಾರ ಪಶ್ಚಿಮ ಕರಾವಳಿಗೆ ಏಕರೂಪದ 61 ದಿನ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು. ಅದರಂತೆ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಷೇಧವಿದೆ
5 ಲಕ್ಷದ ಮೀನು- ಅಷ್ಟೇ ಖರ್ಚು!
ಮೀನುಗಾರ ಮುಖಂಡರೊಬ್ಬರ ಪ್ರಕಾರ, ಒಂದು ಬೋಟು ಕಡಲಿಗಿಳಿದರೆ ಕನಿಷ್ಠ 5 ಲಕ್ಷ ರೂ. ಮೌಲ್ಯದ ಮೀನು ತರಬಲ್ಲುದು. ಹಿಂದೆ ಮೀನುಗಾರರಿಗೆ ಸಂಬಳ ನೀಡುತ್ತಿದ್ದರೆ ಈಗ ಹಿಡಿದ ಮೀನಿನ ಶೇ.25ರಷ್ಟು ಮೊತ್ತವನ್ನು ಕಮಿಷನ್ ಆಗಿ ನೀಡಲಾಗುತ್ತದೆ. ಅಂದರೆ 5 ಲಕ್ಷ ರೂ. ಮೌಲ್ಯದ ಮೀನು ಹಿಡಿದಿದ್ದರೆ ಸುಮಾರು 1.15 ಲಕ್ಷ ರೂ. ಕಮಿಷನ್‌ಗೆ ವ್ಯಯವಾಗುತ್ತದೆ. 6ರಿಂದ 10 ದಿನಗಳ ಮೀನುಗಾರಿಕೆಗೆ ತೆರಳುವ ಟ್ರಾಲ್ ಬೋಟ್‌ಗಳಲ್ಲಿ ಒಮ್ಮೆಗೆ ಸುಮಾರು 4 ಲಕ್ಷ ರೂ. ಮೌಲ್ಯದ 6,000 ಲೀ.ನಷ್ಟು ಡೀಸೆಲ್ ಬೇಕು. ಜತೆಗೆ, 28,000 ರೂ. ಮೌಲ್ಯದ 450 ಬಾಕ್ಸ್ ಮಂಜುಗಡ್ಡೆಯೂ ಅಗತ್ಯ.
– ದಿನೇಶ್ ಇರಾ