Advertisement

ನಾಳೆಯಿಂದ ಮೀನುಗಾರಿಕೆ ಬಂದ್‌

12:28 PM May 31, 2019 | Suhan S |

ಪಣಜಿ: ಗೋವಾದಲ್ಲಿ ಜೂ.1 ರಿಂದ ಜು.31 ರ ವರೆಗಿನ 61 ದಿನಗಳ ಕಾಲ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತಿದ್ದು, ಈ ಕಾಲಾವಧಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಯಾವುದೇ ಮೀನುಗಾರಿಕಾ ಬೋಟ್‌ಗಳಿಗೆ ಪರವಾನಗಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಮೀನುಗಾರಿಕಾ ಬೋಟ್‌ಗಳು ದಡಕ್ಕೆ ಆಗಮಿಸುತ್ತಿವೆ.

Advertisement

ಮೀನುಗಳ ಸಂವರ್ಧನೆಗಾಗಿ ಮತ್ತು ಮಳೆಗಾಲದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ನೆಚ್ಚರಿಕೆಗಾಗಿ ಪ್ರತಿವರ್ಷ ಮಳೆಗಾಲದ ಆರಂಭದ 61 ದಿನ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. 1981 ರಿಂದ ಪ್ರತಿವರ್ಷ ರಾಜ್ಯದಲ್ಲಿ ಮಳೆಗಾಲದ ಸಂದರ್ಭದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. 2002 ಮತ್ತು 2003 ರಲ್ಲಿ ಈ ನಿರ್ಬಂಧದ ಕಾಲಾವಧಿಯನ್ನು 75 ದಿನಗಳಿಗೆ ಹೆಚ್ಚಳ ಮಾಡಲಾಗಿತ್ತು.

ಗೋವಾದಲ್ಲಿ ಮೀನುಗಾರಿಕಾ ಬೋಟ್‌ಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಓರಿಸ್ಸಾ ಮೂಲದ ಮೀನುಗಾರರು ಕೆಲಸ ನಿರ್ವಹಿಸುತ್ತಾರೆ. ಈ ನಿರ್ಬಂಧದ ಕಾಲಾವಧಿಯಲ್ಲಿ ಮೀನುಗಾರರು ತಮ್ಮ ಊರಿಗೆ ತೆರಳುತ್ತಾರೆ. ಜೂ.1 ರಿಂದ ರಾಜ್ಯದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಿರುವುದರಿಂದ ಸದ್ಯ ಈ ಮೀನುಗಾರರು ಮೀನಿನ ಬಲೆಗಳನ್ನು ಒಂದೆಡೆ ಜಮಾವಣೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next