Advertisement

ಮೇ 31ಕ್ಕೆ ಯಾಂತ್ರೀಕೃತ ಮೀನುಗಾರಿಕೆಗೆ ತೆರೆ

10:46 PM May 20, 2020 | Sriram |

ಮಲ್ಪೆ: ಸರಕಾರದ ಆದೇಶದಂತೆ ಈ ವರ್ಷವೂ ಮೇ 31ರಂದು ಯಾಂತ್ರೀಕೃತ ಮೀನುಗಾರಿಕೆ ಮುಕ್ತಾಯಗೊಳ್ಳಲಿದೆ.

Advertisement

ರವಿವಾರ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆದ ವಿವಿಧ ಮೀನುಗಾರರ ಸಂಘಟನೆಗಳ ಸಭೆಯಲ್ಲಿಯೂ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೀನುಗಾರಿಕೆಗೆ ತೆರಳುತ್ತಿರುವ ದೋಣಿಗಳು ಮೇ 31ರೊಳಗೆ ಮೀನುಗಾರಿಕೆಗೆ ಮುಗಿಸಿ ಬಂದರು ಸೇರಿಕೊಳ್ಳಲಿವೆ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ತಿಳಿಸಿದ್ದಾರೆ.

ಪ್ರತೀ ವರ್ಷ ಮಾರ್ಚ್‌, ಎಪ್ರಿಲ್‌, ಮೇ ತಿಂಗಳವರೆಗೆ ಮೀನುಗಾರಿಕೆಗೆ ಉತ್ತಮ ಸಂಪಾದನೆ ತಂದು ಕೊಡುವ ಸೀಸನ್‌. ಈ ಬಾರಿ ಕೊರೊನಾದಿಂದಾಗಿ ಋತುವಿನ ಕೊನೆಯ ಮೂರು ತಿಂಗಳು ಮೀನುಗಾರಿಕೆಯನ್ನು ಕೈ ಬಿಡಬೇಕಾಗಿ ಬಂದಿತ್ತು. ಶೇ. 15ರಷ್ಟು ಯಾಂತ್ರಿಕ ದೋಣಿಗಳು ಮೇ 14ರಿಂದ ಮೀನುಗಾರಿಕೆ ತೆರಳಿದ್ದು ಉಳಿದ ಬಹುತೇಕ ದೋಣಿಗಳು ಅವಧಿಯ ಮೂರು ತಿಂಗಳ ಮೊದಲೇ ಬಂದರಿನಲ್ಲಿ ಲಂಗರು ಹಾಕಿದೆ.

3 ತಿಂಗಳ ಡೀಸೆಲ್‌ ಸಬ್ಸಿಡಿ
ಪ್ರಾಕೃತಿಕ ವೈಪರೀತ್ಯಾ, ಕೋವಿಡ್‌-19 ಮಹಾಮಾರಿಗೆ ತತ್ತರಿಸಿದ ಮೀನುಗಾರರಿಗೆ ಸರಕಾರ ಮೂರು ತಿಂಗಳ ಡಿಸೇಲ್‌ ಸಹಾಯಧನವನ್ನು ಪಾವತಿಸದೇ ಬಾಕಿ ಇಟ್ಟಿರುವುದು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್‌ ಸೇರಿದಂತೆ ಒಟ್ಟು ಮೂರು ತಿಂಗಳ ಡಿಸೇಲ್‌ ಸಬ್ಸಡಿ ಬಾಕಿ ಇದ್ದು, ಅತೀ ಶೀಘ್ರದಲ್ಲಿ ಪಾವತಿಸುವಂತೆ ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ, ಸಚಿವ, ಸಂಸದರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next