ಹೊನ್ನಾವರದಲ್ಲಿ ಬೋಟ್ ಮುಳುಗಡೆ; ಇಬ್ಬರು ಮೀನುಗಾರರು ನಾಪತ್ತೆ
12:55 PM May 29, 2018 | Team Udayavani |
ಹೊನ್ನಾವರ : ಕಡಲ ತೀರದಿಂದ 15 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಗಾ ಬೋಟ್‌ವೊಂದು ಮಂಗಳವಾರ ಸಮದ್ರದಲ್ಲಿ ಮುಳುಗಡೆಯಾಗಿದ್ದು ,ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
Advertisement
ಎಂಜಲ್ ಹೆಸರಿನ ಬೋಟ್ ತಮಿಳುನಾಡು ಮೂಲದ ಬೋಟ್ ಎಂದು ತಿಳಿದು ಬಂದಿದೆ.
ಕೋಸ್ಟ್ ಗಾರ್ಡ್ ಸಿಬಂದಿಗಳು ರಕ್ಷಣಾ ಕಾರ್ಯ ನಡೆಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಮೆಕ್ನು ಚಂಡಮಾರುತದ ಅಬ್ಬರವಿದ್ದು ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.