Advertisement
ಹೌದು.. ಕಳೆದ ಎರಡು ವರ್ಷದಿಂದ ಜಿಲ್ಲೆಯು ಸಮೃದ್ಧವಾದ ಮಳೆಗೆ ಸಾಕ್ಷಿಯಾಗಿ ನಿರೀಕ್ಷೆಗೂ ಮೀರಿ ಮೀನುಗಾರಿಕೆ ನಡೆದು ಇಲಾಖೆಗೆ, ಮೀನುಗಾರರಿಗೆ ಹಾಗೂ ಜಿಲ್ಲೆಯ ಗ್ರಾಪಂಗಳಿಗೂ ಭರಪೂರ ಆದಾಯ ಹರಿದು ಬಂದಿತ್ತು. ಆದರೆ, ಈ ಬಾರಿ ಮಳೆಯ ಅವಕೃಪೆ ಕಾಣಿಸಿಕೊಂಡಿದ್ದು ಮೀನುಗಾರಿಕೆ ಹೊಡೆತ ಬೀಳುವ ಆತಂಕ ಎದುರಾಗಿದೆ.
Related Articles
Advertisement
ಕೆರೆ, ಕುಂಟೆಗಳಲ್ಲಿ ಕುಸಿದ ನೀರಿನ ಪ್ರಮಾಣ: ಜಿಲ್ಲೆಯ ಕೆರೆ, ಕುಂಟೆಗಳಲ್ಲಿ ಅದರಲ್ಲೂ ಕೃಷಿ ಇಲಾ ಖೆಯ ಕೃಷಿ ಹೊಂಡ, ಚೆಕ್ ಡ್ಯಾಂಗಳಲ್ಲಿ ಸಾಕುವ ಮೀನು ಮರಿಗಳಾದ ಕಟ್ಲಾ, ರೋಹು,ಮೃಗಾಲ್, ಸಾಮಾನ್ಯ ಗೆಂಡೆ, ಬೆಳ್ಳಿ ಗೆಂಡೆ, ಹಾಗೂ ಹುಲ್ಲು ಗೆಂಡೆ ಮೀನುಗಳು ಹೆಚ್ಚು ಹೆಸರುವಾಸಿ, ವಿಶೇಷವಾಗಿ ಮೀನುಗಾರಿಕೆ ಇಲಾಖೆ ನೆರವು, ಮಾರ್ಗ ದರ್ಶನದೊಂದಿಗೆ ಜಿಲ್ಲೆಯ ಬಹಳಷ್ಟು ರೈತರು ಮೀನುಗಾರಿಕೆಯಲ್ಲಿ ತೊಡಗಿದ್ದು ವೈಜ್ಞಾನಿಕವಾಗಿ ಹಾಗು ಆಧುನಿಕ ತಾಂತ್ರಿಕತೆ ಬಳಸಿಕೊಂಡು ಮೀನು ಮರಿಗಳ ಬಿತ್ತನೆ ಕಾರ್ಯ ಮಾಡಿ ಮೀನು ಉತ್ಪಾದನೆಯಲ್ಲಿ ತೊಡಗಿದ್ದಾರೆ. ನೂರಾರು ಕುಟುಂಬಗಳು ಕೂಡ ಮೀನುಗಾರಿಕೆ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಹಳಷ್ಟು ಕೆರೆ, ಕುಂಟೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯುತ್ತಯಿದ್ದು, ಮಳೆಯ ಕೊರತೆ ಹೀಗೆ ಮುಂದುವರೆದರೆ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆಂದು ಮೀನುಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ 13,119 ಮೆಟ್ರಿಕ್ ಟನ್ ಮೀನು ಉತ್ಪಾದನೆ:
ಸತತ ಎರಡು ವರ್ಷದಿಂದ ಉತ್ತಮ ಮಳೆ ಆಗಿದ್ದರ ಪರಿಣಾಮ ಕಳೆದ 2022-23ನೇ ಸಾಲಿನಲ್ಲಿ ಜಿಲ್ಲಾದ್ಯಂತ 13,119 ಮೆಟ್ರಿಕ್ ಟನ್‌ಷ್ಟು ಮೀನುಗಳ ಉತ್ಪಾದನೆ ಆಗಿದ್ದು ಅದರ ಒಟ್ಟಾರೆ ಮಾರುಕಟ್ಟೆ ಮೌಲ್ಯ10,605 ಲಕ್ಷ ರೂಗಳಾಗಿತ್ತು.
ಗ್ರಾಪಂಗಳಿಗೂ ಆದಾಯ ಖೋತಾದ ಆತಂಕ:
ಹೇಳಿ ಕೇಳಿ ಜಿಲ್ಲೆಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 1,341 ಕೆರೆಗಳಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ಮೀನುಗಾರಿಕೆಯಿಂದ ಗ್ರಾಪಂಗಳಿಗೆ ಹರಿದು ಬರುತ್ತದೆ. ಗ್ರಾಪಂಗಳು ಕೂಡ ತನ್ನ ವ್ಯಾಪ್ತಿಯಲ್ಲಿ ರುವ ಕೆರೆಗಳನ್ನು ಮೀನುಗಾರರಿಗೆ ಟೆಂಡರ್ ಮೂಲಕ ಗುತ್ತಿಗೆ ಕೊಟ್ಟು ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿವೆ. ಆದರೆ, ಮಳೆಯ ಕಣ್ಣಾಮುಚ್ಚಾಲೆಯಿಂದ ಮೀನುಗಾರಿಕೆಗೆ ಹೊಡೆತ ಬಿದ್ದು ಗ್ರಾಪಂಗಳಿಗೆ ಹರಿದು ಬರುತ್ತಿದ್ದ ಆದಾಯಕ್ಕೋ ಖೋತಾ ಬೀಳುವ ಆತಕ ಗ್ರಾಪಂಗಳಿಗೆ ಎದುರಾಗಿದೆ.
ಮಳೆಯ ಕೊರತೆಯಿಂದ ಕೆಲ ಕೆರೆಗಳಲ್ಲಿ ನೀರು ಸಂಗ್ರಹ ಕುಸಿದಿದೆ. ಆಗಾಗಿ ಮೀನು ಮರಿಗಳನ್ನು ಬಿಡಬೇಕಾ ಅಥವಾ ಬೇಡವಾ ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದೇವೆ. ಎರಡು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದ್ದರಿಂದ ಮೀನುಗಾರಿಕೆ ಚೆನ್ನಾಗಿ ನಡೆಯಿತು. ಈ ಬಾರಿ ಆರಂಭದಲ್ಲಿ ಮಳೆ ಕೊಟ್ಟಿದೆ.-ಶಿವರಾಜ್, ಮೀನುಗಾರಿಕೆ ನಡೆಸುವ ರೈತ.
– ಕಾಗತಿ ನಾಗರಾಜಪ್ಪ