ಕುಂದಾಪುರ: ಕಡಲ ಕೊರೆತದಿಂದ ಹಾನಿಯಾದ ಮರವಂತೆ ಪ್ರದೇಶಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ಪರಿಶೀಲನೆ ನಡೆಸಿದ್ದರು.
ತೌಖ್ತೇ ಚಂಡಮಾರುತದಿಂದ ಹಾನಿಗೊಳಗಾದ ಮರವಂತೆ ಕಡಲ ಪ್ರದೇಶಕ್ಕೆ ಭೇಟಿ ನೀಡಿದ ಅಶೋಕ್ ಜನರ ಅಹವಾಲನ್ನು ಸ್ವೀಕರಿಸದೇ ನಡೆದಿದ್ದಾರೆ ಎಂಬ ಮಾತು ಈಗ ಕೇಳಿ ಬರುತ್ತಿದ್ದು, ಕಂದಾಯ ಹಾಗೂ ಮೀನುಗಾರರ ಬೇಡಿಕೆ ಹೇಳಲು ಸಚಿವರ ಗಡಿಬಿಡಿ ಭೇಟಿಗೆ ಮೀನುಗಾರರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಜಿಲ್ಲಾಧಿಕಾರಿಗಳೇ ಕೋವಿಡ್ ವಿರುದ್ಧ ಹೋರಾಟದ ಯುದ್ಧ ಕಮಾಂಡರ್ ಗಳು: ಪ್ರಧಾನಿ ಮೋದಿ
ಕಡಲ್ಕೊರೆತದಿಂದಾಗಿ ಸಂಕಷ್ಟಕ್ಕೊಳಗಾದ ಜನರ ಅಹವಾಲು ಸ್ವೀಕರಿಸದೇ ತೆರಳಿದ ಸಚಿವವರ ವಿರುದ್ಧ ಇವರೇನು ಶೋಕಿ ಮಾಡುವುದಕ್ಕೆ ಬಂದಿದ್ದಾ? ನಮ್ಮ ಕಷ್ಟ ಕೇಳಲು ಸಚಿವರು ಬಂದದ್ದು ಅಲ್ಲವೇ..? ನಮಗೆ ಸಾಂತ್ವಾನ ಹೇಳುವ ಕನಿಷ್ಟ ಸೌಜನ್ಯತೆ ಇಲ್ಲವೇ ಎಂದು ಮೀನುಗಾರರು ಸಿಡಿದಿದ್ದಾರೆ.
ಇನ್ನುಮುಂದೆ ಯಾವುದೇ ಜನಪ್ರತಿನಿಧಿ ಬಂದರೂ ನಾವೂ ಹೋಗುವುದಿಲ್ಲ. ಜನರ ಅಹವಾಲನ್ನು ಸ್ವೀಕರಿಸದೇ ಹೋದರೇ ಬಂದು ಏನು ಪ್ರಯೋಜನೆವಿದೆ ಎಂದು ಕೇಳುವ ಮೂಲಕ ಮೀನುಗಾರರ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಮಂಡ್ಯ: ಊರಿಗೆ ಸೋಂಕು ಪ್ರವೇಶಿಸಿದಂತೆ ‘ನಾಡಮಾರಿ’ಗೆ ಕೋಳಿ ಬಲಿಕೊಟ್ಟು ರಸ್ತೆ ಮಧ್ಯೆ ಪೂಜೆ