ಬೇಲೂರು: ಪಟ್ಟಣದ ಸಮೀಪ ವಿರುವ ಐತಿಹಾಸಿಕ ಬಿಷ್ಠಮ್ಮನ (ವಿಷ್ಣು ಸಮುದ್ರ) ಕೆರೆಯಲ್ಲಿ ದಿನನಿತ್ಯ ಸಾವಿ ರಾರು ಮೀನುಗಳು ಅನುಮಾನಸ್ಪದ ವಾಗಿ ಸಾವನ್ನಪ್ಪುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ನೀರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ನೀರಿಗೆ ಪರದಾಟ: ಈ ಭಾಗದ ಹಳ್ಳಿ ಗಳಾದ ಉತ್ಪಾತನಹಳ್ಳಿ, ಹಳೇ ಉತ್ಪಾತನ ಹಳ್ಳಿ ಗ್ರಾಮದ ಹರೀಶ, ಪುಟ್ಟಸ್ವಾಮಿ ಗೌಡು, ಕೋಳಿಚಂದ್ರು, ಗೋಪಾಲ ಸುದ್ದಿಗಾರರೊಂದಿಗೆ ಮಾತನಾಡಿ, ವಿಷ್ಣು ಸಮುದ್ರ ಕೆರೆಯಲ್ಲಿ ದಿನನಿತ್ಯ ಸಾರಾರು ಮೀನುಗಳು ಸಾಯುತ್ತಿರುವುದನ್ನು ಕಂಡು ನಮಗೆಲ್ಲಾ ಆತಂಕ ಶುರು ವಾಗಿದೆ. ಪ್ರತಿ ದಿನವೂ ಸತ್ತ ಮೀನನ್ನು ಗುತ್ತಿಗೆದಾರರು ಹೊರಗೆ ತೆಗೆಯುತ್ತಿ ದ್ದಾರೆ. ಕೆರೆಯ ದಡದಲ್ಲಿ ಸಾಂಕ್ರಾಮಿಕ ರೋಗ ಹರಡಿದರೆ ಯಾರು ಹೊಣೆ ಎನ್ನುತ್ತಾರೆ.
ತನಿಖೆ ನಡೆಸಲು ಆಗ್ರಹ: ಕೆರೆಯಲ್ಲಿ ದಿನನಿತ್ಯ ಮೀನುಗಳು ಅನುಮಾನಸ್ಪದ ವಾಗಿ ಸಾವನ್ನಪ್ಪುತ್ತಿರುವ ಬಗ್ಗೆ ನಮಗೆ ಅನುಮಾನವಿದ್ದು, ಕೂಡಲೇ ಮೀನು ಗಾರಿಕೆ ಇಲಾಖೆ ಮತ್ತು ತಾಲೂಕು ಆಡಳಿತ ತನಿಖೆಯನ್ನು ನಡೆಸಬೇಕಿದೆ. ಮೀನು ಬೇಗ ಬೆಳೆಯಲಿ ಎಂದು ಕೆರೆಯನ್ನು ಟೆಂಡರ್ ಪಡೆದಿರುವ ಗುತ್ತಿಗೆದಾರ ಕೆರೆಗೆ ಔಷಧಿ ಸಿಂಪಡಿಸುತ್ತಿರುವ ಬಗ್ಗೆ ಅನುಮಾನ ವಿದೆ. ಮೀನಿಗೆ ಆಹಾರ ನೀಡಲು ತ್ಯಾಜ್ಯವಸ್ತುಗಳನ್ನು ತಂದು ಹಾಕುತ್ತಿದ್ದಾರೆ. ತಾಲೂಕು ಆಡಳಿತ ಕೆರೆಯ ನೀರನ್ನು ಖಾಲಿ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ಬಿಷ್ಠಮ್ಮನ ಕೆರೆಯಲ್ಲಿ ಕಳೆದ 1 ವಾರದಿಂದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿವೆ. ಸತ್ತ ಮೀನುಗಳ ವಾಸನೆಯಿಂದ ಸುತ್ತಮುತ್ತ ಲಿನ ಗ್ರಾಮದ ಜನರು ಮೂಗುಮುಚ್ಚಿ ಓಡಾಡುವಂತಾಗಿದೆ. ಅಲ್ಲದೇ ಕೆರೆ ನೀರು ಕಲುಷಿತಗೊಳ್ಳುತ್ತಿದ್ದು ದನಕರು ಗಳಿಗೆ ನೀರು ಕುಡಿಸಲು ಮತ್ತು ಬಳಕೆ ಮಾಡಲು ಅಕ್ಕಪಕ್ಕದ ಗ್ರಾಮದ ಜನರು ಹಿಂಜರಿಯುತ್ತಿದ್ದಾರೆ.