Advertisement
ಪ್ರತಿಕೂಲ ಹವಾಮಾನದಿಂದಾಗಿ ಮೀನುಗಾರಿಕೆಗೆ ತೊಡಕಾಗಿದೆ. ಈ ಬಾರಿ ನಾಡದೋಣಿ ಮೀನುಗಾರರಿಗೆ ನಿರೀಕ್ಷಿದಷ್ಟು ಲಾಭ ಸಿಕ್ಕಿಲ್ಲ. ನಾಡದೋಣಿ ಮೀನುಗಾರಿಕೆ ಆರಂಭ ಈ ಬಾರಿ ನಿಗದಿತ ಸಮಯಕ್ಕಿಂತ ತಡವಾಗಿತ್ತು. ಆದಾದ ಬಳಿಕ ಕಡಲಿಗಿಳಿದ ಬಹುತೇಕ ದೋಣಿಗಳು ಮೀನು ಸಿಗದೆ ಹಿಂದೆ ಬಂದಿದ್ದವು. ಕಡಲಬ್ಬರದಿಂದಾಗಿ ಹೆಚ್ಚಿನ ನಾಡದೋಣಿಗಳು ಮೀನುಗಾರಿಕೆಗೆ ತೆರಳದ ಹಾಗೇ ಇವೆ. ತೆರಳಿದ ದೋಣಿಗಳು ಕೈ ಸುಟ್ಟು ಕೊಂಡಿವೆ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸುತ್ತಾರೆ.
ಕಳೆದ ಬಾರಿ ಜುಲೈ ಅಂತ್ಯದ ವೇಳಗೆ ಒಂದು ನಾಡದೋಣಿ ಮೀನುಗಾರರು ಸುಮಾರು 3ರಿಂದ 5 ಲಕ್ಷರೂ.ಗಳವರೆಗೆ ಲಾಭ ಪಡೆದುಕೊಂಡಿದ್ದರು. ಆದರೆ ಈ ಬಾರಿ ಅದೇ ಮೀನುಗಾರರು ಸುಮಾರು 50 ಸಾವಿರ ರೂ.ಗಳಷ್ಟೇ ಲಾಭ ಗಳಿಸಿದ್ದಾರೆ. ಕಳೆದ ಬಾರಿಯ ಲಾಭದ ಅರ್ಧ ಪಾಲು ಈ ಬಾರಿ ಪಡೆದುಕೊಂಡಿಲ್ಲ ಎಂಬುದು ಮೀನುಗಾರರ ಅಳಲು.
Related Articles
ಕಳೆದ ಬಾರಿಯೂ ಸಮುದ್ರ ಕೊಂಚ ಪ್ರಕ್ಷುಬ್ದಗೊಂಡಿದ್ದರಿಂದ ಸೆಪ್ಟಂಬರ್ ವರೆಗೆ ನಾಡದೋಣಿ ಮೀನುಗಾರಿಕೆಗೆ ಅನುಮತಿ ನೀಡಲಾಗಿತ್ತು. ಈ ಬಾರಿಯೂ ಇನ್ನಷ್ಟು ದಿನ ವಿಸ್ತರಣೆಗೆ ಮನವಿ ಮಾಡಲಾಗುವುದು ಎಂದು ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅವರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.
Advertisement
ಅಪಾರ ನಷ್ಟಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಈ ಬಾರಿ ನಾಡ ದೋಣಿ ಮೀನುಗಾರರಿಗೆ ನಷ್ಟ ಉಂಟಾಗಿದೆ. ಕೆಲವು ದೋಣಿಗಳು ಇನ್ನೂ ಸಮುದ್ರಕ್ಕೆ ಇಳಿದೆ ಇಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಲಿದೆ.
– ವಾಸುದೇವ ಬಿ.ಕೆ.,
ಮಂಗಳೂರು ನಾಡದೋಣಿ
ಮೀನುಗಾರರ ಸಂಘದ ಅಧ್ಯಕ್ಷ ಪ್ರಜ್ಞಾ ಶೆಟ್ಟಿ