Advertisement

“ಸಬ್ಸಿಡಿ ಸೀಮೆಎಣ್ಣೆ’ವಿಸ್ತರಣೆಗೆ ಮೀನುಗಾರರ ಬೇಡಿಕೆ

01:47 AM Jul 07, 2020 | Sriram |

ಕುಂದಾಪುರ : ಆಳ ಸಮುದ್ರ ಮೀನುಗಾರರಿಗೆ ವರ್ಷದ 10 ತಿಂಗಳು ಡೀಸೆಲ್‌ ಸಬ್ಸಿಡಿ ನೀಡುತ್ತಿದ್ದು, ಅದೇ ರೀತಿ ನಾಡದೋಣಿ ಮೀನುಗಾರರಿಗೂ ಸರಕಾರ ಕೊಡುತ್ತಿರುವ ಸಬ್ಸಿಡಿ ಸೀಮೆಎಣ್ಣೆಯನ್ನು 9 ತಿಂಗಳ ಬದಲು 10 ತಿಂಗಳು ನೀಡಬೇಕು ಎನ್ನುವ ಬೇಡಿಕೆಯನ್ನು ಮೀನುಗಾರರು ಇಟ್ಟಿದ್ದಾರೆ.

Advertisement

ಇದರೊಂದಿಗೆ ಪರ್ಮಿಟ್‌ ಇರುವ ಎಲ್ಲ ದೋಣಿಗಳಿಗೂ ತಿಂಗಳಿಗೆ ತಲಾ 300 ಲೀ. ಸೀಮೆಎಣ್ಣೆಯನ್ನು ಕೊಡಬೇಕು ಎನ್ನುವ ಮನವಿಯನ್ನು ಕೂಡ ಮುಂದಿಟಿದ್ದಾರೆ.

ಸರಕಾರ ಪ್ರತಿ ವರ್ಷ ನಾಡದೋಣಿ ಮೀನುಗಾರರಿಗೆ ಸೆಪ್ಟಂಬರ್‌ನಿಂದ ಆರಂಭ ಗೊಂಡು ಮೇ ವರೆಗೆ 1 ಪರ್ಮಿಟ್‌ಗೆ ತಲಾ 300 ಲೀ. ಗಳಂತೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಕೊಡುತ್ತಿದೆ. ಆದರೆ ಪ್ರತಿ ವರ್ಷ ಆಗಸ್ಟ್‌ ನಿಂದ ಮೀನುಗಾರಿಕೆ ಆರಂಭವಾಗುತ್ತದೆ. ಬೋಟ್‌ಗಳಿಗೆ ಆಗಸ್ಟ್‌ನಿಂದಲೇ ಡೀಸೆಲ್‌ ಸಬ್ಸಿಡಿ ಕೊಡಲಾಗುತ್ತಿದೆ.

9 ಸಾವಿರಕ್ಕೂ ಅಧಿಕ ದೋಣಿ
ಮಂಗಳೂರಿನಿಂದ ಕಾರವಾರದವರೆಗಿನ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ 9,996 ದೋಣಿಗಳು, 27,118 ಮಂದಿ ನಾಡದೋಣಿ ಮೀನುಗಾರರಿದ್ದಾರೆ. ಈ ಪೈಕಿ ಉಡುಪಿಯಲ್ಲಿ 4,332 ನಾಡದೋಣಿಗಳ 15,148 ಮೀನುಗಾರರಿದ್ದಾರೆ. ದಕ್ಷಿಣ ಕನ್ನಡದ 1,416 ದೋಣಿಗಳಲ್ಲಿ ಸುಮಾರು 4,248 ಮೀನುಗಾರರು ಹಾಗೂ ಉತ್ತರ ಕನ್ನಡದ 2,574 ದೋಣಿಗಳಲ್ಲಿ ಸುಮಾರು 7,722 ಮೀನುಗಾರರು ನಾಡದೋಣಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಎಲ್ಲರಿಗೂ 300 ಲೀ. ಸಿಗಲಿ
ಸರಕಾರ ಒಂದು ನಾಡದೋಣಿ ಪರ್ಮಿಟ್‌ಗೆ ಪ್ರತಿ ತಿಂಗಳಿಗೆ 300 ಲೀ. ಸೀಮೆಎಣ್ಣೆ ನೀಡಬೇಕು. ಆದರೆ ಈಗ ಉಡುಪಿ ಜಿಲ್ಲೆಯಲ್ಲಿರುವ 4,332 ನಾಡ ದೋಣಿಗಳ ಪೈಕಿ ಕೇವಲ 2,600 ದೋಣಿಗಳಿಗೆ ಮಾತ್ರ 300 ಲೀ. ನೀಡುತ್ತಿದ್ದು, ಕಳೆದ 7 ವರ್ಷಗಳಿಂದ ಹೊಸ ಔಟ್‌ಬೋರ್ಡ್‌ ಎಂಜಿನ್‌ಗಳಿಗೆ ಹೆಚ್ಚುವರಿ ಸೀಮೆ ಎಣ್ಣೆ ಸಿಗುತ್ತಿಲ್ಲ. ಇವರು ತಮ್ಮೊಳಗೆ ಹಂಚಿಕೊಳ್ಳುತ್ತಿದ್ದರಿಂದಾಗಿ ತಿಂಗಳಿಗೆ 1 ದೋಣಿಗೆ 170 ಲೀ. ಸಿಗುತ್ತಿದೆ. ಪರ್ಮಿ ಟ್‌ ಇರುವ ಎಲ್ಲರಿಗೂ ತಲಾ 300 ಲೀ. ಸೀಮೆಎಣ್ಣೆ ನೀಡಲು ಮೀನುಗಾರರ ಮನವಿ.

Advertisement

ಪರಿಶೀಲಿಸಿ ಕ್ರಮ
10 ತಿಂಗಳವರೆಗೆ ಸಬ್ಸಿಡಿ ಸೀಮೆಎಣ್ಣೆ ವಿಸ್ತರಿಸುವ ಕುರಿತಂತೆ ಮೀನುಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಘೋಷಿಸಿದಂತೆ 400ಲೀ., ಎಲ್ಲ ಪರ್ಮಿಟ್‌ಗಳಿಗೂ ತಲಾ 300 ಲೀ. ಸೀಮೆಎಣ್ಣೆ ಕೊಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next