Advertisement
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಸೌಲಭ್ಯವನ್ನು ಒಳನಾಡು ಮತ್ತು ನದಿಪಾತ್ರದ ಮೀನುಗಾರರಿಗೆ ಒದಗಿಸಬೇಕು ಎನ್ನುವ ವಿಚಾರ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
2015-16ರಿಂದ 2021ರ ಮೇ ವರೆಗೆ ಮೀನುಗಾರಿಕಾ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ ಯಾಂತ್ರೀಕೃತ ದೋಣಿ ಮಾಲಕರು ವಾರ್ಷಿಕ 1.50 ಲಕ್ಷ ಕಿಲೋ ಲೀಟರ್ ಡೀಸೆಲ್ ಮೇಲಿನ ಮಾರಾಟ ಕರವನ್ನು ಮರುಪಾವತಿ ಮಾಡಲು ಅವಕಾಶವಿತ್ತು. ಅದರಂತೆ 2021-22ನೇ ಸಾಲಿನಲ್ಲಿ 84.86 ಕೋಟಿ ರೂ.ಗಳನ್ನು ಮೀನುಗಾರರಿಗೆ ಪಾವತಿಸಲಾಗಿದೆ. ಆಗಸ್ಟ್‌ನಿಂದ ತೆರಿಗೆ ರಹಿತ ಡೀಸೆಲ್ ವಿತರಿಸಲು ಆದೇಶಿಸಲಾಗಿದೆ ಎಂದರು. ಕೇಂದ್ರದಿಂದಲೂ ಬಿಡುಗಡೆ
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ 2020-21ನೇ ಸಾಲಿನಲ್ಲಿ ಕೇಂದ್ರ ಸರಕಾರ 50.33 ಕೋಟಿ ರೂ. ನಿಗದಿಪಡಿಸಿದ್ದು, 46.18 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೊತ್ತಕ್ಕೆ ಅನುಗುಣವಾಗಿ ರಾಜ್ಯ ಸರಕಾರ 33.02 ಕೋಟಿ ರೂ. ಬಿಡುಗಡೆ ಮಾಡಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರಕಾರ 70 ಕೋಟಿ ರೂ. ನಿಗದಿಪಡಿಸಿ 35.25 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರಕಾರ 13.63 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವ ಅಂಗಾರ ಮಾಹಿತಿ ನೀಡಿದರು.