Advertisement

30 ಗಂಟೆಗಳ ಕಾಲ ಪಾತಿ ದೋಣಿಯಲ್ಲಿ ಜೀವ ಉಳಿಸಿಕೊಂಡ ಮೀನುಗಾರ ಮಲ್ಪೆಯಲ್ಲಿ ಪತ್ತೆ

02:04 PM Sep 08, 2020 | keerthan |

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್‌ ಬೋಟ್‌ ನಿಂದ ರವಿವಾರ ತಡರಾತ್ರಿ ಬಿರುಗಾಳಿಗೆ ಸಿಲುಕಿದ್ದು ಬೋಟ್‌ನ ಡಿಂಗಿ (ಪಾತಿ)ಯ ಜೊತೆಗೆ ನಾಪತ್ತೆಯಾಗಿದ್ದ ಮೀನುಗಾರ 30 ಗಂಟೆಗಳ ನಂತರ ಇಂದು ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ.

Advertisement

ರವಿವಾರ ರಾತ್ರಿ ನಾಪತ್ತೆಯಾಗಿದ್ದ ಉಳ್ಳಾಲ ಹೊಗೆ ನಿವಾಸಿ ಆರ್ಥರ್‌ ಸುನಿಲ್‌ ಕುವೆಲ್ಲೋ (45) ಇಂದು ಮಲ್ಪೆ ಬಳಿ ಪತ್ತೆಯಾಗಿದ್ದಾರೆ.

ಪರ್ಸಿನ್‌ ಬೋಟ್‌ನಲ್ಲಿ ಉಳ್ಳಾಲ ಉಳಿಯದ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಬೋಟ್‌ನ ಬೆಲ್ಟ್ ತುಂಡಾಗಿದ್ದು, ಈ ಸಂದರ್ಭದಲ್ಲಿ ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಮೀನುಗಾರರು ರಾತ್ರಿವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್‌ ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರ ಪಾಲಾಯಿತು.

ಸುನಿಲ್‌ ಅವರು ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದರು. ಬೋಟ್‌ನ ತಾಂತ್ರಿಕ ತೊಂದರೆಯಿಂದಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಸೋಮವಾರ ಹಗಲಿಡೀ ಸಮುದ್ರದಲ್ಲಿ ಹುಡುಕಾಡಿದ್ದು ರಾತ್ರಿ ಉಳ್ಳಾಲ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಭಾರಿ ಗಾಳಿಗೆ ಮೀನುಗಾರ ಸಹಿತ ಪಾತಿ ದೋಣಿ ನಾಪತ್ತೆ: ಹುಡುಕಾಟ ಆರಂಭ

Advertisement

ಪರ್ಸೀನ್ ಬೋಟ್ ನಿಂದ ತಪ್ಪಿಸಿಕೊಂಡಿದ್ದ ಸುನಿಲ್ ಸತತ 30 ಗಂಟೆಗಳ ನಂತರ ಸಮುದ್ರದಲ್ಲಿ ಏಕಾಂಗಿ ಹೋರಾಟ ನಡೆಸಿ ಮಲ್ಪೆಗೆ ಬಂದು ಸೇರಿದ್ದರು. ಅಲ್ಲಿ ಅವರನ್ನು ರಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next