Advertisement
ಸತೀಶ್ ಖಾರ್ವಿ ಅವರದು ಮೂಲ ಕಸುಬು ಮೀನುಗಾರಿಕೆ. ಆದರೂ ಪವರ್ ಲಿಫ್ಟಿಂಗ್‌ನಲ್ಲಿ ಸತತ ಪ್ರಯತ್ನದ ಫಲವಾಗಿ, ಸೆಪ್ಟಂಬರ್ 15 ರಿಂದ ಕೆನಾಡದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
Related Articles
Advertisement
ಇದಲ್ಲದೆ ಇವರ ನೇತೃತ್ವದಲ್ಲಿ ಕುಂದಾಪುರ ಭಾಗದಲ್ಲಿಯೇ ಜಿಲ್ಲಾ, ರಾಜ್ಯ ಮಟ್ಟದ ದೇಹದಾಡ್ಯì, ಪವರ್ ಲಿಫ್ಟಿಂಗ್ ಸ್ಪರ್ಧೆಗಳನ್ನು ಆಯೋಜಿಸಿದ್ದರು.
ಮೀನುಗಾರಿಕಾ ಕುಟುಂಬಇವರದು ಹುಟ್ಟು ಮೀನುಗಾರಿಕಾ ಕುಟುಂಬ. ಈಗಲೂ ಸತೀಶ್ ಖಾರ್ವಿ ಅವರ ಮನೆಯವರು, ಸಂಬಂಧಿಕರು ಮೀನುಗಾರಿಕೆ ವೃತ್ತಿಯನ್ನೇ ಮಾಡು ತ್ತಿದ್ದಾರೆ. ಇವರು ಕೂಡ ಮೊದಲ 10 -12 ವರ್ಷ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. 3 ರಾಷ್ಟ್ರೀಯ ಪದಕ
ಸತೀಶ್ ಖಾರ್ವಿಯವರು ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಈವರೆಗೆ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 1 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇನ್ನು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ 5 ಚಿನ್ನದ ಪದಕಗಳನ್ನು ಪಡೆದ ಸಾಧನೆಗೆ ಪಾತ್ರರಾಗಿದ್ದಾರೆ. ಕನಸು ನನಸು
ನಮ್ಮದು ಮೀನುಗಾರಿಕಾ ಕುಟುಂಬವಾಗಿದ್ದರೂ, ನನಗೆ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಈವರೆಗೆ ರಾಷ್ಟ್ರ, ರಾಜ್ಯ ಮಟ್ಟದ ಟೂರ್ನಿಯಲ್ಲಿ ಆಡಿ, ಗೆದ್ದಿದ್ದರೂ, ಇದೇ ಮೊದಲ ಬಾರಿಗೆ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪ್ರತಿನಿಧಿಸುವ ಮೂಲಕ ಬಹುದಿನದ ಕನಸೊಂದು ನನಸಾಗುತ್ತಿದೆ.
–ಸತೀಶ್ ಖಾರ್ವಿ,
ಕುಂದಾಪುರ