Advertisement
ಸ್ವಾಭಾವಿಕವಾಗಿ ಮೀನುಗಾರಿಕೆ ಎಂದರೆ ವಿಶಾಲ ಸಾಗರದಲ್ಲಿ ಬೃಹತ್ ಯಾಂತ್ರಿಕೃತ ದೋಣಿಗಳ ಮೂಲಕ ವಿವಿಧ ಜಾತಿಯ ಮೀನುಗಳನ್ನು ಹಿಡಿದು, ದಡಕ್ಕೆ ತಂದು ಮಾರಾಟ ಮಾಡುವುದಕ್ಕೆ ಸೀಮಿತಗೊಳಿಸಿ ಮೀನುಗಾರಿಕೆ ಉದ್ದಿಮೆ ಮುಂದೆ ಸಾಗುತ್ತದೆ.
Related Articles
Advertisement
ರಾಜ್ಯದ ಒಳನಾಡು ಮೀನುಗಾರಿಕೆ ಸಾಕಷ್ಟು ಪ್ರಗತಿ ಕಾಣಬೇಕಿದೆ. 1957ರಲ್ಲಿ ಮೀನುಗಾರಿಕೆ ಇಲಾಖೆ ಸ್ಥಾಪನೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹಳ ದೊಡ್ಡ ಸಾಧನೆ ಮಾಡಿಲ್ಲ. ರಾಜ್ಯದಲ್ಲಿ 26 ಸಾವಿರ ಕೆರೆಗಳು ಸೇರಿದಂತೆ ಒಟ್ಟು ಜಲರಾಶಿಯ ಸಂಪತ್ತಿನಲ್ಲಿ ಶೇ. 20ರಷ್ಟನ್ನು ಮಾತ್ರ ಬಳಸಿಕೊಳ್ಳಲು ಸಮರ್ಥರಾಗಿದ್ದೇವೆ. 4,37,292 ಹೆಕ್ಟೇರ್‌ಗಳಷ್ಟು ಜಲಪ್ರದೇಶ ಬಳಸಿಕೊಂಡು, 6 ಲಕ್ಷಕ್ಕೂ ಮೀರಿರುವ ಒಳನಾಡು ಮೀನುಗಾರರಿಗೆ ಅವಕಾಶ ಕಲ್ಪಿಸಿದರೆ ಇನ್ನೆರೆಡೇ ವರ್ಷಗಳಲ್ಲಿ ಒಳನಾಡು ಮೀನು ಉತ್ಪಾದನೆಯನ್ನು 4 ಲಕ್ಷ ಮೆಟ್ರಿಕ್ ಟನ್‌ಗಳಿಂದ ದುಪ್ಪಟ್ಟು ಮಾಡಲು ಸಾಧ್ಯ.
1,110 ಶತಕೋಟಿ ರೂ. ಆದಾಯದೇಶದಲ್ಲಿ ಮೀನುಗಾರಿಕೆಯನ್ನು ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬದುಕು ಕಟ್ಟಿಕೊಂಡವರ ಸಂಖ್ಯೆ ಸುಮಾರು ಮೂರು ಕೋಟಿಗೂ ಅಧಿಕ. 75 ಸಾವಿರ ಕಿ.ಮೀ.ಗಳಷ್ಟು ಕಡಲ ಕಿನಾರೆಯಲ್ಲಿ, ಒಳನಾಡು ಜಲ ಪ್ರದೇಶವು ಸೇರಿದಂತೆ ಅತೀ ಹೆಚ್ಚು ಜಲ ಸಂಪನ್ಮೂಲವಿರುವ ಜಗತ್ತಿನ ಎರಡನೇ ದೇಶ ನಮ್ಮದು. ಅಂತೆಯೇ ಅತೀ ಹೆಚ್ಚು ಮೀನು ಉತ್ಪಾದನೆಯಲ್ಲೂ ನಮಗೆ ಮೂರನೇ ಸ್ಥಾನ. ವಾರ್ಷಿಕ 13.76 ದಶಲಕ್ಷ ಟನ್‌ಗಳಷ್ಟು ಮೀನು ಉತ್ಪಾದನೆಯಾಗುತ್ತಿದ್ದು, 1.39 ದಶಲಕ್ಷ ಟನ್‌ಗಳಷ್ಟು ಪ್ರಮಾಣ ವಿದೇಶಕ್ಕೆ ರಫ್ತಾಗುತ್ತಿದೆ. ಅಂದರೆ ವಾರ್ಷಿಕ ಮೀನುಗಾರಿಕೆಯ ವಿವಿಧ ಉತ್ಪನ್ನಗಳ ಮೂಲಕ 1,110 ಬಿಲಿಯನ್ ರೂ. ಆದಾಯ ದೇಶಕ್ಕೆ ಬರುತ್ತಿದೆ. ರಾಜ್ಯದ ಮುಂದಿನ ಗುರಿ
ಕೇಂದ್ರ ರೈಲ್ವೇ ಸೇವೆ ಯೋಜನೆಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ದೇಶಾದ್ಯಂತ ರೈಲ್ವೇ ನಿಲ್ದಾಣಗಳ ಮಳಿಗೆಗಳು ಮತ್ತು ರೈಲ್ವೇ ಪ್ರಯಾಣಿಕರ ಕೈಗೆ ಕರ್ನಾಟಕದ ಮೀನಿನ ಬಿಸಿಬಿಸಿ ಖಾದ್ಯ ತಲುಪುವ ಯೋಜನೆಯೂ ರೂಪಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜು 1969ರಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಏಷ್ಯಾದ ಮೊದಲ ಮೀನುಗಾರಿಕಾ ಕಾಲೇಜಿದು. ಈಗ ಇದೇ ಕಾಲೇಜು ವಿಶ್ವವಿದ್ಯಾಲಯವಾಗಿ ಪರಿ ವರ್ತಿತವಾಗುತ್ತಿದೆ. ಉತ್ತರಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ ಸೇರಿದಂತೆ ಐದು ಕಡೆ ಹೊಸ ಕಾಲೇಜುಗಳನ್ನು ಮತ್ತು ಹತ್ತು ಜಿಲ್ಲೆಗಳಲ್ಲಿ ವೃತ್ತಿಪರ ಮೀನುಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶವಿದೆ. ಆತ್ಮನಿರ್ಭರ ಭಾರತ್ತ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ “ಆತ್ಮನಿರ್ಭರ ಭಾರತ’ ಯೋಜನೆಗೆ ಅನುಗುಣವಾಗಿ ಮೀನುಗಾರಿಕಾ ಇಲಾಖೆ ಹತ್ತು ಸಾವಿರ ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಪಂಜರ ಮೀನು ಕೃಷಿಗೆ ಒತ್ತು ನೀಡಿದೆ. ರಾಜ್ಯದ ನೂರು ಆಯ್ದ ತಾಲೂಕುಗಳಲ್ಲಿ ನಿರುದ್ಯೋಗಿಗಳಿಗೆ ಪಂಜರ ಮೀನು ಕೃಷಿ ತರಬೇತಿ ನೀಡಿ, ಸಬ್ಸಿಡಿ ಒದಗಿಸಿ, ಸ್ವಾವಲಂಬಿಯಾಗಿಸುವ ಉದ್ದೇಶವಿದೆ. ಸಮಾಧಾನದ ಸಂಗತಿಯೆಂದರೆ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಕೇಂದ್ರ ಸರಕಾರ ಮೀನುಗಾರಿಕೆಗೆ 20 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದೆ. ಆ ಪೈಕಿ ಕರ್ನಾಟಕದ ಮೀನುಗಾರಿಕಾ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ರೂಪಾಯಿ ಮಂಜೂರಾಗುವ ನಿರೀಕ್ಷೆಯಲ್ಲಿದ್ದು ಮೊದಲ ಹಂತದಲ್ಲಿ 137 ಕೋ.ರೂ. ಕಾಮಗಾರಿಗೆ ಅನುಮೋದನೆ ನೀಡಿ, ಭಾಗಶಃ ಹಣ ಬಿಡುಗಡೆ ಮಾಡಿದೆ. ಇದರಿಂದ ಕರಾವಳಿಯ ಕಿರು ಬಂದರುಗಳು, ಮೀನುಗಾರಿಕಾ ಜಟ್ಟಿಗಳು, ಯಾಂತ್ರೀಕೃತ ದೋಣಿಗಳ ಇಳಿದಾಣವೂ ಸೇರಿ ದಂತೆ ಮೀನುಗಾರರಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳು ವೃದ್ಧಿಯಾಗಲಿವೆ. “ಅಭಿವೃದ್ಧಿಯಾಗಬೇಕಾದದ್ದು ಮೀನುಗಾರಿಕೆ ಮಾತ್ರವಲ್ಲ, ಬಡ ಮೀನುಗಾರನ ಕುಟುಂಬವೂ ಕೂಡ’. ಅದೇ ಆತ್ಮ ನಿರ್ಭರ ಭಾರತ. ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು, ಕರ್ನಾಟಕ ಸರಕಾರ