ಕಾಸರಗೋಡು: ಮೀನು ಉತ್ಪಾದನೆಯಲ್ಲಿ ಕೇರಳ ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಏಳು ವರ್ಷಗಳಿಂದ ಕೇರಳ ಮೀನು ಉತ್ಪಾದನೆಯಲ್ಲಿ ಹಿಂದಕ್ಕೆ ಸರಿದಿದೆ ಎಂದು ಅಂಕಿ ಅಂಶದಲ್ಲಿ ಸೂಚಿಸಲಾಗಿದೆ. 2012ರ ವರೆಗೆ ಕೇರಳ ಮೀನು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿತ್ತು. 2013ರಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕೇರಳ 2017 ರಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿಯಿತು.
ದೇಶದಲ್ಲಿ ಮೀನು ಉತ್ಪಾದನೆಗೆ ಸಂಬಂಧಿಸಿ ಲೋಕಸಭೆಯಲ್ಲಿ ಕೇಂದ್ರ ಮೀನು ಗಾರಿಕಾ ಸಚಿವ ಪ್ರತಾಪ್‌ಚಂದ್ರ ಸಾರಂಗಿ ನೀಡಿದ ಅಂಕಿ ಅಂಶದಲ್ಲಿ ಈ ಮಾಹಿತಿ ಲಭಿಸಿದೆ. ಪ್ರಥಮ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದರೆ, ಗೋವಾ, ಗುಜರಾತ್, ಕರ್ನಾಟಕ ರಾಜ್ಯಗಳು ಅನುಕ್ರಮವಾಗಿ ದ್ವಿತೀಯ, ತೃತೀಯ, ಚತುರ್ಥ ಸ್ಥಾನ ದಲ್ಲಿವೆೆ. ಅದೇ ವೇಳೆ ಕಳೆದ ವರ್ಷ ಗುಜ ರಾತ್ ರಾಜ್ಯ ಪ್ರಥಮ ಸ್ಥಾನದಲ್ಲಿತ್ತು.
ರಫ್ತು ವಿಚಾರದಲ್ಲೂ ಕಳೆದ ಐದು ವರ್ಷಗಳಲ್ಲಿ ಹೆಚ್ಚಳವಾಗಿದೆ. 2014-15 ರಲ್ಲಿ 33,441.61 ಕೋಟಿ ರೂ. ಮೊತ್ತ ದ ಮೀನು ಉತ್ಪಾದನೆಯನ್ನು ರಫ್ತು ಮಾಡಲಾಗಿತ್ತು. 2018-19ರ ಕಾಲಾವಧಿಯಲ್ಲಿ 47,621 ಕೋಟಿ ರೂ.ಗೇರಿತು. ಕೇಂದ್ರ ಸರಕಾರ ಮೀನಿನ ಉತ್ಪಾದನೆ ಹೆಚ್ಚಳಕ್ಕೆ ರಾಜ್ಯ ಸರಕಾರಗಳಿಗೆ ಮೂಲ ಸೌಕರ್ಯ ಕಲ್ಪಿಸಲು 1186.89 ಕೋಟಿ ರೂ. ನೀಡಿದೆ. ಪ್ರಸ್ತುತ ವರ್ಷ ಪ್ರತೀ ರಾಜ್ಯಕ್ಕೆ ಹೆಚ್ಚಿನ ಹಣವನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ರಾಜ್ಯ ಸರಕಾರಗಳಿಂದ ವರದಿಯನ್ನು ಕೇಳಿದೆ.
ದೇಶದಲ್ಲಿ ಹೆಚ್ಚಳ
ದೇಶದಲ್ಲಿ ಮೀನಿನ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2014-15ರಲ್ಲಿ 10.16 ದಶಲಕ್ಷ ಟನ್ ಮೀನು ಉತ್ಪಾದಿಸಲಾಗಿತ್ತು. 2016-17ರಲ್ಲಿ ಅದು 12.50 ದಶಲಕ್ಷ ಟನ್‌ಗೆರಿತು. 2018-19ರ ಕಾಲಾವಧಿಯಲ್ಲಿ 13.34 ಮಿಲಿಯನ್ ಟನ್ ಆಗಿ ಹೆಚ್ಚಳವಾಗಿದೆ.