ಮಂಗಳೂರು: ಮೀನಿನ ತಾಜಾತನ ಕಾಪಾಡುವುದಕ್ಕೆ ಬೆರೆಸಬಹುದಾದ ವಿಷಕಾರಿ “ಫಾರ್ಮಾಲಿನ್’ ಅಥವಾ “ಅಮೋನಿಯಾ’ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಕಿಟ್ ಇದೀಗ ಮಂಗಳೂರಿಗೂ ಬಂದಿದೆ. ಈ ಕಿಟ್ ಅನ್ನು ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ಗುರುವಾರ ತರಿಸಿ ಕೊಳ್ಳಲಾಗಿದೆ.
ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ ಜತೆಗೂಡಿ ಶುಕ್ರವಾರ ನಗರದ ಕೆಲವು ಮಾರುಕಟ್ಟೆ ಸೇರಿದಂತೆ ಮೀನು ಮಾರಾಟವಾಗುವ ಜಾಗಳಲ್ಲಿ ರಾಸಾಯನಿಕ ಮಿಶ್ರಣ ಕುರಿತಂತೆ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅದರಲ್ಲಿಯೂ ಮೀನು ಪ್ರಿಯರು, ತಾವು ಖರೀದಿಸುವ ಮೀನಿನಲ್ಲಿ ರಾಸಾಯನಿಕ ಪದಾರ್ಥ ಬೆರೆಸಿರುವ ಬಗ್ಗೆ ಅನುಮಾನ ಉಂಟಾದರೆ ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿ ಗುಣಮಟ್ಟ ಪರೀಕ್ಷಿಸಿ ಕೊಳ್ಳಬಹುದಾಗಿದೆ.
ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಹೊರರಾಜ್ಯಗಳಿಂದ ಬರುವ ಮೀನುಗಳಲ್ಲಿ ಕ್ಯಾನ್ಸರ್ ಕಾರಕ ಫಾರ್ಮಾ ಲಿನ್ ರಾಸಾಯನಿಕ ಅಂಶವಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಕರಾ ವಳಿಯಲ್ಲೂ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಕಾಲೇಜಿನ ತಂಡವು ಕೊಚ್ಚಿಗೆ ತೆರಳಿ ಗುರುವಾರ ಕಿಟ್ ಮಂಗಳೂರಿಗೆ ತಂದಿದೆ.
ಸಿಐಎಫ್ಟಿ ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನ ಆಧಾರಿತ ಕಿಟ್‌ನಲ್ಲಿ ಒಂದು ಸ್ಲೆಡ್ ಇದೆ. ಪ್ರಯೋಗಕ್ಕೆ ಒಳಪಡಿಸಲಿರುವ ಮೀನನ್ನು ಈ ಪಟ್ಟಿ ಮತ್ತು ದ್ರಾವಣದ ಸಂಯೋಗಕ್ಕೆ ಒಳಪಡಿಸಿದಾಗ ಮೂರು ನಿಮಿಷದೊಳಗೆ ಮೀನಿನ ಬಣ್ಣ ಬದಲಾಗುವುದನ್ನು ಆಧರಿಸಿ ಆ ಮೀನಿನಲ್ಲಿ ಫಾರ್ಮಾಲಿನ್ ಅಥವಾ ಅಮೋನಿಯಾ ಅಂಶ ವಿದೆಯೇ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ.
– ಮಹೇಶ್‌ಕುಮಾರ್
ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ