ಬೇತಮಂಗಲ: ಇಲ್ಲಿನ ಕಮ್ಮಸಂದ್ರ ಮತ್ತು ಟಿ. ಗೊಲ್ಲಹಳ್ಳಿ ಗ್ರಾಪಂಗಳ ವಿವಿಧ ಗ್ರಾಮಗಳ ಕೆರೆಗಳನ್ನು ಮೀನು ಪಾಳುವಾರು ಹಕ್ಕಿನ ಹರಾಜು ನಡೆದಿದ್ದು, ಕಮ್ಮಸಂದ್ರ ಗ್ರಾಪಂಗೆ 1.45 ಲಕ್ಷ ಹಾಗೂ ಟಿ.ಗೊಲ್ಲಹಳ್ಳಿ ಗ್ರಾಪಂಗೆ 3.25 ಲಕ್ಷ ರೂ ಸಂಗ್ರಹವಾಗಿದೆ ಎಂದು ಆಯಾ ಗ್ರಾಪಂನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡೂ ಗ್ರಾಪಂಗಳಲ್ಲಿ ಮೀನು ಪಾಳುವಾರು ಹಕ್ಕಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ ದಾರರು ಪಾಲ್ಗೊಂಡಿದ್ದರು. ಬಿಡ್ ಕರೆಯಲು 1 ಸಾವಿರರೂ. ಠೇವಣಿ ಕಟ್ಟಿ ಭಾಗವಹಿಸಿದ್ದರು. 1 ವರ್ಷಕ್ಕೆ ಮಾತ್ರ ಈ ಕೆರೆಗಳನ್ನು ಹರಾಜು ಹಾಕಲಾಗಿದೆಎಂದು ಆಡಳಿತಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕಮ್ಮಸಂದ್ರ ಗ್ರಾಪಂ: ಚೆನ್ನಪ್ಪಲ್ಲಿ ಗೋಕುಂಟೆ 1500ರೂ., ಸಂಪತ್, ತಿಮ್ಮನ ಕುಂಟೆ 4000 ರೂ.,ಚೀಮಲಬಂಡಹಳ್ಳಿ ಕೆರೆ 32500 ರೂ., ಶಂಕರ್, ಕುಂಟೆ 4000 ರೂ., ಶಿವು, ಕಮ್ಮಸಂದ್ರ ಪಾಮಲ ಕುಂಟೆ 7500 ರೂ., ಶ್ರೀನಿವಾಸ್, ಬ್ಯಾಟರಾಯನ ಹಳ್ಳಿಯ ಅಗಸನ ಕೆರೆ ಚಂದ್ರಶೇಖರ್ 80,000 ರೂ., ಬೊಮ್ಮಾಂಡಹಳ್ಳಿ ಹೊಸ ಕೆರೆ, ಚೆನ್ನಕುಂಟೆ ನಂದ ಕುಮಾರ್ 16000 ರೂ., ಸೇರಿ ಒಟ್ಟು 1.45,500 ರೂ.ಗೆ ಹರಾಜು ಆಗಿದೆ.
ಟಿ.ಗೊಲ್ಲಹಳ್ಳಿ ಗ್ರಾಪಂ: ತಂಬಾರ‌್ಲಹಳ್ಳಿ ಕೆರೆ ಪ್ರೇಮ್ ಕುಮಾರ್ 8000 ರೂ., ಕಳ್ಳಿಕುಪ್ಪ ನಾಗಲಕೆರೆವೆಂಕಟಾ ಚಲಪತಿ 1.70 ಲಕ್ಷ ರೂ., ನಲ್ಲೂರು ಹೊಸಕೆರೆ ವೆಂಕಟಪ್ಪ ಅಯ್ಯಪ್ಪಲ್ಲಿ 17500 ರೂ., ಚಿಗರಾಪುರ ಕೆರೆ ವಿನಯ್ 5000 ರೂ., ಜಯ ಮಂಗಲ ಕೆರೆ ಅರುಣ್ 5000 ರೂ., ಕೋಗಿಲಹಳ್ಳಿಕೆರೆ ವೆಂಕಟಾಚಲಪತಿ 21,000 ರೂ., ಐಸಂದ್ರ ಮಿಟ್ಟೂರು ಚಿಕ್ಕಕೆರೆ ಗೋವಿಂದಪ್ಪ 53,800 ರೂ., ಈ ಒಟ್ಟು ಕೆರೆಗಳಿಗೆ ಹರಾಜು ನಡೆದಿದ್ದು ಒಟ್ಟು 3,25,300 ರೂ. ಸಂಗ್ರಹವಾಗಿದೆ.
ಕಮ್ಮಸಂದ್ರ ಗ್ರಾಪಂ ಆಡಳಿತಾಧಿಕಾರಿ ಶಂಕರಪ್ಪ, ಪಿಡಿಒ ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ನಾರಾಯಣರೆಡ್ಡಿ, ಮಾಜಿ ಅಧ್ಯಕ್ಷ ನಾಗರಾಜ್, ಪ್ರಸಾದ್ ಹಾಗೂಬಿಡ್‌ದಾರರು ಸಾರ್ವಜನಿಕರು ಭಾಗವಹಿಸಿದ್ದರು. ಟಿ.ಗಲ್ಲಹಳ್ಳಿ ಗ್ರಾಪಂ ಆಡಳಿತಾಧಿಕಾರಿ ನಾಗರತ್ನ, ಪಿಡಿಒ ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಜಗದೀಶ್, ಕರ ವಸೂಲಿಗಾರ ದೇವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮಾಜಿಉಪಾಧ್ಯಕ್ಷ ಯೋಗೇಶ್, ಎಪಿಎಂಸಿ ನಿರ್ದೇಶಕವೆಂಕಟಾಚಲಪತಿ, ಮುಖಂಡರಾದ ಶಿವಣ್ಣ,ಆಕಾಶ್, ಕೃಷ್ಣಪ್ಪ, ಗೋವಿಂದಪ್ಪ ಹಾಗೂ ಬಿಡ್‌ದಾರರು, ಸಾರ್ವಜನಿಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.