Advertisement
ಪರ್ಸಿನ್, ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳಿದರೂ ಕೂಡ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಹಿನ್ನೆಲೆಯಲ್ಲಿ ಸಿಕ್ಕ ಅಲ್ಪ ಮೀನುಗಳಿಗೆ ಭಾರೀ ಬೇಡಿಕೆಯಿದ್ದು, ದರವೂ ದುಬಾರಿಯಾಗಿದೆ. ಗಂಗೊಳ್ಳಿಯಲ್ಲಿ ಶನಿವಾರ ಮೀನುಗಾರಿಕೆಗೆ ತೆರಳಿದ ಕೆಲ ಪರ್ಸಿನ್ ಬೋಟುಗಳು ಬರಿಗೈಯಲ್ಲಿ ವಾಪಸು ಬಂದಿವೆ.
ಬೋಟ್‌ಗಳಿಗೆ ಹೆಚ್ಚಾಗಿ ಗೇದರ್ (ಟ್ಯೂನಾ) ಮೀನು ಮಾತ್ರ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 130ರಿಂದ 140 ರೂ.ವರೆಗೆ ಮಾರಾಟವಾಗುತ್ತಿದೆ. ಬಂಗುಡೆ ಅಲ್ಪ ಸ್ವಲ್ಪ ಸಿಗುತ್ತಿದ್ದು, 230 -250 ರೂ. ವರೆಗೆ ಮಾರಾಟವಾಗುತ್ತಿದೆ. ಬೈಗೆ (ಬೂತಾಯಿ), ಅಂಜಲ್ ಮೀನು ಸಿಗುತ್ತಿಲ್ಲ. ಕೊಡ್ಡಾಯಿ ಕೆ.ಜಿ.ಗೆ 150ರಿಂದ 170 ರೂ.ವರೆಗೆ ಮಾರಾಟವಾಗುತ್ತಿದೆ. ಅಡವು ಮೀನಿಗೆ ಕೆ.ಜಿ.ಗೆ 250 ರೂ. ಇದೆ. ಸಿಗಡಿಗೆ ಬೇರೆ ಬೇರೆ ದರಗಳಿದ್ದು 250 ರಿಂದ ಆರಂಭಗೊಂಡು 450-500 ರೂ.ವರೆಗೂ ಮಾರಾಟವಾಗುತ್ತಿದೆ. ಸಾಮಾನ್ಯ ಏಡಿಗೆ ಕೆ.ಜಿ.ಗೆ 50-60 ರೂ. ಇದ್ದರೆ, ಹಸುರು ಏಡಿಗೆ 250 ರೂ. ಇದೆ.