Advertisement
ಶುಕ್ರವಾರದ ತೀವ್ರ ಪೈಪೋಟಿಯ ಫೈನಲ್ ಹಣಾಹಣಿಯಲ್ಲಿ ಅಂಕಿತಾ- ಕಮಿಲ್ಲಾ ಸೇರಿಕೊಂಡು ರಶ್ಯದ ಅನ್ನಾ ಬ್ಲಿಂಕೋವಾ -ಅನಾಸ್ತಾಸಿಯಾ ಪೊಟೊಪೋವಾ ವಿರುದ್ಧ 2-6, 6-4, 10-7 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
Related Articles
Advertisement
ವಿಶ್ವದ ನಂ.2 ಜೋಡಿಯಾದ ಅರಿನಾ ಸಬಲೆಂಕಾ (ಬೆಲರೂಸ್)-ಎಲೈಸ್ ಮಾರ್ಟೆನ್ಸ್ (ಬೆಲ್ಜಿಯಂ) ಆಸ್ಟ್ರೇಲಿಯನ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿಯನ್ನೆತ್ತಿದ್ದಾರೆ. ಶುಕ್ರವಾರದ ಫೈನಲ್‌ನಲ್ಲಿ ಇವರು ಜೆಕ್ ಆಟಗಾರ್ತಿಯರಾದ ಬಾಬೊìರಾ ಕ್ರೆಸಿಕೋವಾ-ಕ್ಯಾಥರಿನಾ ಸಿನಿಯಕೋವಾ ಅವರನ್ನು 6-2, 6-3 ಅಂತರದಿಂದ ಪರಾಭವಗೊಳಿಸಿದರು.
ಇದು ಸಬಲೆಂಕಾ-ಮಾರ್ಟೆನ್ಸ್ ಜೋಡಿಗೆ ಒಲಿದ ಮೊದಲ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಹಾಗೂ 2ನೇ ಗ್ರ್ಯಾನ್‌ಸ್ಲಾಮ್ ಕಿರೀಟ. ಇದಕ್ಕೂ ಮೊದಲು ಇವರು 2019ರ ಯುಎಸ್ ಓಪನ್ ಚಾಂಪಿಯನ್ ಆಗಿದ್ದರು. ಒಟ್ಟಾರೆಯಾಗಿ ಇವರಿಬ್ಬರು ಜತೆಯಾಗಿ ಗೆದ್ದ 6ನೇ ಟೆನಿಸ್ ಪ್ರಶಸ್ತಿ ಇದಾಗಿದೆ.
ಮೆಡ್ವೆಡೇವ್ ಎದುರು ಮುಗ್ಗರಿಸಿದ ಸಿಸಿಪಸ್ :
ಮೆಲ್ಬರ್ನ್: ಕ್ವಾರ್ಟರ್ ಫೈನಲ್‌ನಲ್ಲಿ ರಫೆಲ್ ನಡಾಲ್ ಅವರನ್ನು ಮಣಿಸಿ “ದೈತ್ಯ ಸಂಹಾರಿ’ ಎನಿಸಿದ್ದ ಗ್ರೀಕ್ ಹೀರೋ ಸ್ಟೆಫನೋಸ್ ಸಿಸಿಪಸ್ ಸೆಮಿಫೈನಲ್‌ನಲ್ಲಿ ಸೋತು ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಿಂದ ಹೊರಬಿದ್ದರು. ಶುಕ್ರವಾರ 7 ಸಾವಿರದಷ್ಟು ವೀಕ್ಷಕರ ಸಮ್ಮುಖದಲ್ಲಿ ನಡೆದ ಸೆಣಸಾಟದಲ್ಲಿ ಸಿಸಿಪಸ್ ಅವರನ್ನು ರಶ್ಯದ ಡ್ಯಾನಿಲ್ ಮೆಡ್ವೆಡೇವ್ 6-4, 6-2, 7-5 ನೇರ ಸೆಟ್‌ಗಳಿಂದ ಮಣಿಸಿದರು.
ರವಿವಾರ ನೊವಾಕ್ ಜೊಕೋವಿಕ್-ಡ್ಯಾನಿಲ್ ಮೆಡ್ವೆಡೇವ್ ಮುಖಾಮುಖೀಯಾಗಲಿದ್ದಾರೆ. ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಕನಸು ಕಾಣುತ್ತಿರುವ ಮಡ್ವೆಡೇವ್ ಪಾಲಿಗೆ ಇದು ಮೊದಲ ಆಸ್ಟ್ರೇಲಿಯನ್ ಓಪನ್ ಫೈನಲ್ ಆಗಿದೆ. ಅವರು ಮೆಲ್ಬರ್ನ್ ಪಾರ್ಕ್ ಫೈನಲ್‌ಗೆ ಲಗ್ಗೆ ಹಾಕಿದ ರಶ್ಯದ ಕೇವಲ 3ನೇ ಟೆನಿಸಿಗ. ಯೆವ್ಗೇನಿ ಕಫೆಲ್ನೀಕೋವ್ ಮತ್ತು ಮರಾತ್ ಸಫಿನ್ ಉಳಿದಿಬ್ಬರು.
ಮೆಡ್ವೆಡೇವ್ ಕಾಣುತ್ತಿರುವ ಕೇವಲ ಎರಡನೇ ಗ್ರ್ಯಾನ್‌ಸ್ಲಾಮ್ ಫೈನಲ್ ಇದಾಗಿದೆ. 2019ರ ಯುಎಸ್ ಓಪನ್ ಪ್ರಶಸ್ತಿ ಸುತ್ತಿಗೇರಿದ ಅವರು ರಫೆಲ್ ನಡಾಲ್‌ಗೆ ಶರಣಾಗಿದ್ದರು.
ಇಂದು ವನಿತಾ ಫೈನಲ್ :
ಶನಿವಾರ ವನಿತಾ ಸಿಂಗಲ್ಸ್ ಫೈನಲ್ ನಡೆಯಲಿದ್ದು, 2019ರ ಚಾಂಪಿಯನ್ ಜಪಾನಿನ ನವೋಮಿ ಒಸಾಕಾ ಮತ್ತು ಇದೇ ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಕಾಣುತ್ತಿರುವ ಅಮೆರಿಕದ ಜೆನ್ನಿಫರ್ ಬ್ರಾಡಿ ಮುಖಾಮುಖೀ ಆಗಲಿದ್ದಾರೆ.