Advertisement
ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಂಗಳವಾರ ಚುನಾವಣೆ ಪ್ರಚಾರ ರ್ಯಾಲಿ ನಡೆಸಿದ ಅವರು, ಪುಲ್ವಾಮಾದಲ್ಲಿ ಮಡಿದ ವೀರ ಯೋಧರಿಗೆ ಹಾಗೂ ಬಾಲಕೋಟ್‌ನಲ್ಲಿ ದಾಳಿ ನಡೆಸಿದ ಸೈನಿಕರಿಗೆ ನಿಮ್ಮ ಮತವನ್ನು ಅರ್ಪಿಸಿ. ಇದು ನಿಮ್ಮ ಜೀವನದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದು ಮೊದಲ ಬಾರಿಯ ಮತದಾರ ರನ್ನು ಉದ್ದೇಶಿಸಿ ಹೇಳಿದ್ದಾರೆ.
Related Articles
Advertisement
ಒಮರ್ ತಿರುಗೇಟು: ಯುವ ಮತದಾರರಿಗೆ ಪ್ರಧಾನಿ ಮೋದಿ ನೀಡಿದ ಕರೆ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, “ಎಲ್ಲಕ್ಕಿಂತಲೂ ಮೊದಲು ಬಾಲ ಕೋಟ್ ದಾಳಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಏಕೆ, ಪುಲ್ವಾಮಾ ದಾಳಿ ಯಶಸ್ವಿಯಾಗಿದ್ದು ಏಕೆ? ಉರಿ, ಪಠಾಣ್‌ಕೋಟ್, ಸಂಜ್ವಾನ್, ನಗ್ರೋಟಾ ಮತ್ತು ಪುಲ್ವಾಮಾ ಉಗ್ರರ ದಾಳಿ ಗಳು ನಡೆದಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಧಾನಿ ಮೋದಿ ಯವರಿಗೆ ಮೊದಲ ಬಾರಿ ಹಕ್ಕು ಚಲಾಯಿಸುವವ ಮತದಾರರು ಕೇಳುತ್ತಾರೆ ಎಂಬ ಭರವಸೆ ನನಗಿದೆ. ಅಷ್ಟೇ ಅಲ್ಲ, ಬಾಲಕೋಟ್ ದಾಳಿಗೆ ಪ್ರತಿಫಲ ಕೊಡಬೇಡಿ, ಪುಲ್ವಾಮಾ ದಾಳಿಗೆ ಶಿಕ್ಷೆ ಕೊಡಿ’ ಎಂದಿದ್ದಾರೆ.
ಆಯೋಗದ ಕದ ತಟ್ಟಿದ ಸಿಪಿಎಂ: ಬಾಲಕೋಟ್ ದಾಳಿಯನ್ನು ಪ್ರಸ್ತಾಪಿಸುವ ಮೂಲಕ ಪ್ರಧಾನಿ ಮೋದಿ ಅವರು ಚುನಾವಣ ನೀತಿ ಸಂಹಿತೆಯನ್ನು ಉಲ್ಲಂ ಸಿದ್ದಾರೆ ಎಂದು ಆರೋಪಿಸಿ ಸಿಪಿಎಂ ಮಂಗಳವಾರ ಚುನಾವಣ ಆಯೋಗಕ್ಕೆ ಪತ್ರ ಬರೆದಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಲೇ ನೀತಿ ಸಂಹಿತೆ ಉಲ್ಲಂಘನೆ ಯಾಗಿ ರುವ ಬಗ್ಗೆ ಕೂಡಲೇ ಕಠಿನ ಕ್ರಮ ಕೈಗೊಳ್ಳಬೇಕು. ಮತ ಪಡೆಯಲು ಸಶಸ್ತ್ರ ಪಡೆಗಳ ಹೆಸರನ್ನು ಬಳಕೆ ಮಾಡಬೇಡಿ ಎಂಬ ಸ್ಪಷ್ಟ ಸೂಚನೆಯಿದ್ದರೂ ಅವರು ಅದನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
“ಕಾಶ್ಮೀರ ಸಮಸ್ಯೆಗೆ ನೆಹರೂ ರಾಜನೀತಿ ಕಾರಣ’ಜಮ್ಮು ಕಾಶ್ಮೀರದ ಇಂದಿನ ಪರಿಸ್ಥಿತಿಗೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ರಾಜನೀತಿಯೇ ಕಾರಣ ಎಂದು ದೂರಿರುವ ಪ್ರಧಾನಿ ಮೋದಿ, ಆಗಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಕಾಶ್ಮೀರ ಸಮಸ್ಯೆ ನಿಭಾಯಿಸುವ ಜವಾ ಬ್ದಾರಿ ನೀಡಿದ್ದರೆ, ಖಂಡಿತವಾಗಿಯೂ ಈ ಸಮಸ್ಯೆಗೆ ಪಟೇಲರು ಅಂದೇ ಇತಿಶ್ರೀ ಹಾಡಿರುತ್ತಿದ್ದರು ಎಂದಿದ್ದಾರೆ. “ನ್ಯೂಸ್ 18′ ಸುದ್ದಿ ವಾಹಿನಿಗೆ ನೀಡ ಲಾದ ಸಂದರ್ಶನದಲ್ಲಿ ಈ ಅಭಿಪ್ರಾಯ ತಿಳಿಸಿರುವ ಅವರು, ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರಗಳು ಕಾಶ್ಮೀರ ದಲ್ಲಿನ ಉಗ್ರವಾದ ಸಮಸ್ಯೆ ನಿವಾ ರಿಸುವಲ್ಲಿ ಎಡವಿವೆ ಎಂದು ತಿಳಿಸಿದರು. “”ಕಾಶ್ಮೀರ ಸಮಸ್ಯೆ ತುಂಬಾ ಹಳೆಯ ಸಮಸ್ಯೆ. ಪಟೇಲರಿಗೆ ಈ ಸಮಸ್ಯೆ ಇತ್ಯರ್ಥ ಗೊಳಿ ಸುವ ಹೊಣೆ ನೀಡಿದ್ದರೆ, ಹೈದರಾ ಬಾದ್ ನಿಜಾಮ ಹಾಗೂ ಜುನಾಗಢ ಸಮಸ್ಯೆ ಇತ್ಯರ್ಥಗೊಳಿಸಿದಂತೆಯೇ ಇದಕ್ಕೂ ಒಂದು ಸೂಕ್ತ ಪರಿಹಾರ ತರು ತ್ತಿದ್ದರು. ಆದರೆ, ಈ ಸಮಸ್ಯೆಯನ್ನು ತಾವೇ ಖುದ್ದು ನಿವಾರಿಸಲು ಮುಂದಾದ ನೆಹರೂ ಅವರ ಹಠದಿಂದಾಗಿ ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿ ದಿದೆ” ಎಂದರು. ಅಲ್ಲದೆ, ಕಣಿವೆ ರಾಜ್ಯದ ಬಗ್ಗೆ ನೆಹರೂ ತಳೆದ ಕೆಲ ನಿರ್ಧಾರಗಳು ಇಂದಿಗೂ ಆ ರಾಜ್ಯದ ಅಭಿವೃದ್ಧಿಗೆ ಅಡ್ಡ ಗಾಲು ಆಗಿವೆ ಎಂದು ಮೋದಿ ಟೀಕಿಸಿದರು. ಕಾಂಗ್ರೆಸ್‌ನಿಂದ ಸ್ಟಿಂಗ್ ವೀಡಿಯೋ ಬಿಡುಗಡೆ
ನೋಟು ಅಮಾನ್ಯದ ಬಳಿಕ ಕೇಂದ್ರ ಸರಕಾರ ದೊಂದಿಗೆ ಹಾಗೂ ಬಿಜೆಪಿಯೊಂದಿಗೆ ನಂಟಿರುವ ವ್ಯಕ್ತಿಗಳು ಭಾರಿ ಪ್ರಮಾಣದ ಕಮಿಷನ್ ಪಡೆದು ಕೊಂಡು ಹಳೆ ನೋಟುಗಳನ್ನು ಹೊಸ ನೋಟು ಗಳಿಗೆ ಬದಲಿಸಿ ಕೊಡುತ್ತಿದ್ದರು ಎನ್ನಲಾದ ವೀಡಿಯೋವನ್ನು ಕಾಂಗ್ರೆಸ್ ಮಂಗಳವಾರ ಬಿಡು ಗಡೆ ಮಾಡಿದೆ. ಸಾವಿರಾರು ಕೋಟಿ ರೂ.ಗಳ ಕರೆನ್ಸಿ ನೋಟುಗಳನ್ನು ವಿದೇಶಗಳಲ್ಲಿ ಮುದ್ರಿಸಿ, ಭಾರತಕ್ಕೆ ಸಾಗಾಟ ಮಾಡಲಾಗಿದೆ ಎಂದೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಆರೋಪಿಸಿದ್ದಾರೆ. ಸರಕಾರದ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು ಈ ವಹಿವಾಟಿನಲ್ಲಿ ಭಾಗಿಯಾಗಿ ದ್ದರು ಎಂದೂ ಅವರು ಹೇಳಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. 91 ಕ್ಷೇತ್ರಗಳಲ್ಲಿ ಪ್ರಚಾರ ಅಂತ್ಯ
18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಲೋಕ ಸಭಾ ಕ್ಷೇತ್ರಗಳಿಗೆ ಇದೇ ಗುರುವಾರ ಮತದಾನ ನಡೆಯಲಿದ್ದು, ಮಂಗಳ ವಾರವೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಈ ಎಲ್ಲ ರಾಜ್ಯಗಳಲ್ಲೂ ಪ್ರಧಾನಿ ಮೋದಿ, ರಾಹುಲ್‌ಗಾಂಧಿ, ಅಮಿತ್ ಶಾ ಸೇರಿದಂತೆ ವಿವಿಧ ರಾಜ ಕೀಯ ಪಕ್ಷಗಳ ಘಟಾನುಘಟಿಗಳು ಹೈವೋಲ್ಟೆàಜ್ ಪ್ರಚಾರ ನಡೆಸಿದ್ದಾರೆ. ಏ.11 ರಂದು ಆಂಧ್ರಪ್ರದೇಶದಲ್ಲಿ ಎಲ್ಲ 25 ಲೋಕಸಭೆ ಕ್ಷೇತ್ರಗಳು ಹಾಗೂ 175 ಅಸೆಂಬ್ಲಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ 8 ಕ್ಷೇತ್ರಗಳಿಗೆ, ಉತ್ತರಾಖಂಡದಲ್ಲಿ ಎಲ್ಲ 5 ಕ್ಷೇತ್ರಗಳಿಗೆ ಅಂದೇ ಮತದಾನ ನಡೆಯಲಿದೆ. ನಕುಲ್ ಆಸ್ತಿ ಮೌಲ್ಯ 660 ಕೋಟಿ ರೂ.
ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಪುತ್ರ ನಕುಲ್ ಅವರ ಒಟ್ಟು ಆಸ್ತಿ ಮೌಲ್ಯ 660.01 ಕೋಟಿ ರೂ.ಗಳು. ಹೀಗೆಂದು ಅಫಿಡವಿಟ್‌ನಲ್ಲೇ ಉಲ್ಲೇಖವಾಗಿದೆ. ತಮ್ಮ ಹೆತ್ತವರಿಗಿಂತ 5 ಪಟ್ಟು ಅಧಿಕ ಆಸ್ತಿಯನ್ನು ಅವರು ಹೊಂದಿದ್ದಾರೆ. ಇದೇ ವೇಳೆ, ಸಿಎಂ ಕಮಲ್‌ನಾಥ್ ಹಾಗೂ ಪತ್ನಿ ಅಲ್ಕಾ ಅವರು 124.67 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಹೊಂದಿದ್ದಾರೆ. ಇನ್ನು ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ, ಜಬಲ್ಪುರ ಕ್ಷೇತ್ರದ ಅಭ್ಯರ್ಥಿ ರಾಕೇಶ್ ಸಿಂಗ್ ಅವರ ಆಸ್ತಿ ಮೌಲ್ಯವು 5 ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಅವರ ಆಸ್ತಿ ಮೌಲ್ಯ 2.14 ಕೋಟಿ ರೂ. ಎಂದು ನಮೂದಿಸಲಾಗಿದೆ. ಬಹಿರಂಗ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರು ಭಯಪಡುತ್ತಿರುವುದೇಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಶ್ನಿಸಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಹಿರಂಗ ಚರ್ಚೆಗೆ ಬರುವಂತೆ ಮೋದಿಗೆ ಸವಾಲನ್ನೂ ಹಾಕಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ, ಅನಿಲ್ ಅಂಬಾನಿ, ನೀರವ್ ಮೋದಿ, ಅಮಿತ್ ಶಾ ಮತ್ತು ನೋಟು ಅಮಾನ್ಯ ವಿಚಾರದ ಬಗ್ಗೆ ಚರ್ಚೆ ನಡೆ ಸೋಣ. ಮುಕ್ತ ಚರ್ಚೆಯಾದರೆ, ಸತ್ಯ ಖಂಡಿತಾ ಹೊರಬರು ತ್ತದೆ ಎಂದಿದ್ದಾರೆ. ಅಲ್ಲದೆ, ಅಸ್ಸಾಂನ ಹೈಲ್‌ಕಂಡಿಯಲ್ಲಿ ಚುನಾ ವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, “ಪ್ರತಿ ಪಕ್ಷ ಗಳೊಂದಿಗೆ ನೇರವಾಗಿ ಚರ್ಚೆಗೆ ಬಾರದ ಪ್ರಧಾನಿ ಮೋದಿಯವರು ಚೋರ್(ಕಳ್ಳ)ಮಾತ್ರವಲ್ಲ, ಹೇಡಿಯೂ ಹೌದು’ ಎಂದಿದ್ದಾರೆ. ರಫೇಲ್ ಹಗರಣ, ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಡೀಲ್, 526 ಕೋಟಿ ರೂ.ಗಳ ವಿಮಾನ ಗಳನ್ನು 1,600 ಕೋಟಿ ರೂ.ಗೆ ಖರೀದಿಸಿದ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸದೇ ಮೋದಿ ಓಡಿಹೋದರು ಎಂದೂ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮೋದಿ ಸಿನೆಮಾ: ಅರ್ಜಿ ವಜಾ
ಪ್ರಧಾನಿ ಮೋದಿ ಜೀವನಚರಿತ್ರೆ ಆಧರಿತ “ಪಿಎಂ ನರೇಂದ್ರ ಮೋದಿ’ ಸಿನೆಮಾ ಬಿಡುಗಡೆಗೆ ತಡೆಯಾಜ್ಞೆ ತರಲು ನಿರಾ ಕರಿಸಿರುವ ಸುಪ್ರೀಂ ಕೋರ್ಟ್, ಕಾಂಗ್ರೆಸ್ ಕಾರ್ಯಕರ್ತ ರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾ ಮಾಡಿದೆ. ಸಿನೆಮಾಗೆ ಇನ್ನೂ ಸಿಬಿಎಫ್ಸಿ ಪ್ರಮಾಣಪತ್ರವೇ ಲಭಿಸಿಲ್ಲ. ಹೀಗಾಗಿ ತಡೆ ಆದೇಶ ನೀಡಲು ಸಾಧ್ಯವಿಲ್ಲ ಎಂದಿದೆ. ಅಲ್ಲದೆ, ಕೇವಲ ಟ್ರೈಲರ್ ನೋಡಿ ಸಿನೆಮಾದ ಆಕ್ಷೇ ಪಾರ್ಹತೆಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದೂ ಅಭಿ ಪ್ರಾಯ ಪಟ್ಟಿದೆ. ಅಲ್ಲದೆ, ಹಾಗೊಂದು ವೇಳೆ ಏ.11ರಂದು ಸಿನೆಮಾ ಬಿಡುಗಡೆಯಾಗುವುದಿದ್ದರೆ, ನೀವು ಚುನಾವಣ ಆಯೋಗಕ್ಕೆ ಈ ಕುರಿತು ಮನವಿ ಸಲ್ಲಿಸುವುದೊಳಿತು ಎಂದೂ ಅರ್ಜಿದಾರನಿಗೆ ಹೇಳಿದೆ. ಇಂದು ರಾಹುಲ್, ನಾಳೆ ಸ್ಮತಿ, ಸೋನಿಯಾ ನಾಮಪತ್ರ
ಅಮೇಠಿಯಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಲಿದ್ದು, ಗುರುವಾರ ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಅವರಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಮೇಠಿಯ ಬಿಜೆಪಿ ಉಸ್ತುವಾರಿ ಮೊಹ್ಸಿನ್ ರಾಜಾ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ. ಇದೇ ವೇಳೆ, ರಾಯ್‌ಬರೇಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.