Advertisement

Udupi ಉತ್ಸವದ ಪ್ರಯುಕ್ತ ಪ್ರಪ್ರಥಮ ಬಾರಿಗೆ ʼಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನʼ

03:31 PM Dec 22, 2023 | Team Udayavani |

ಉಡುಪಿ: ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‌.ಸಿ.ಎಫ್.‌ ನಿಂದ ಸಂಘಟಿಸಲ್ಪಡುತ್ತಿದೆ.

Advertisement

ಉಡುಪಿ ಉತ್ಸವದ ಪ್ರಯುಕ್ತ ಪ್ರಪ್ರಥಮ ಬಾರಿಗೆ ʼಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನʼ ಉಡುಪಿಯ ರಾ.ಹೆ.66ರ ಹೋಟೆಲ್ ಶಾರದಾ ಇಂಟ‌ರ್ ನ್ಯಾಷನಲ್ ಬಳಿ, ಕರಾವಳಿ ಜಂಕ್ಷನ್ ನಲ್ಲಿ ನಡೆಯುತ್ತಿದೆ.

ಡಿ.16ರಂದು ಪ್ರಾರಂಭವಾದ ಉಡುಪಿ ಉತ್ಸವದ ಅಂತರ್ಜಲ ಸುರಂಗದಲ್ಲಿ ಸಿಹಿನೀರು ಮತ್ತು ಉಪ್ಪು ನೀರಿನ ವಿಶೇಷ ಪ್ರಬೇಧದ 500 ಕ್ಕೂ ಹೆಚ್ಚು ಜಾತಿಗಳ ಮೀನುಗಳನ್ನು ನೋಡಿ ಆನಂದಿಸಬಹುದು.

ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನರಂಜನಾ ಮೇಳಗಳನ್ನು ಕೂಡಾ ಒಳಗೊಂಡಿದೆ. ಮೀನುಗಳ ಪ್ರದರ್ಶನ 24 ಕೋಣೆಗಳೊಂದಿಗೆ ಅತಿದೊಡ್ಡ ಅಂತರ್ಜಲ ಅಕ್ವೇರಿಯಂ ಆಗಿದೆ.

ಮಧ್ಯಮ ಗಾತ್ರದ ಗುಹೆಗಳು, ಸಣ್ಣ ಗುಹೆಗಳು ಮತ್ತು ದೊಡ್ಡ ಗುಹೆಗಳನ್ನು ಒಳಗೊಂಡಿದ್ದು, ಸಿಹಿನೀರು ಮತ್ತು ಸಮುದ್ರ ಮೀನುಗಳನ್ನು ಹೊಂದಿದೆ.

Advertisement

ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ದೊರೆಯುತ್ತದೆ.

ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜಾಯಿಂಟ್ ವೀಲ್, ಡ್ರ್ಯಾಗನ್ ಟ್ರೇನ್, ಮೆರಿ ಕೊಲಂಬಸ್, 3ಡಿ ಶೋಸ್, ಸೈರಿ ಹೌಸ್, ಏರ್ ಶಾಟ್, ಸ್ಪೇಸ್ ಜೆಟ್, ಇತ್ಯಾದಿಗಳನ್ನು ಒಳಗೊಂಡಿದೆ.

ಈ ಮೇಳ ಹಾಗೂ ಪ್ರದರ್ಶನಗಳು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಇರಲಿದೆ. ಸಾರ್ವಜನಿಕರು ಈ ಸಮಯದಲ್ಲಿ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next