Advertisement

ಮಂಗಳೂರು: ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

08:52 AM Jul 04, 2022 | Team Udayavani |

ಮಂಗಳೂರು: ನವ ಮಂಗಳೂರು ಬಂದರಿಗೆ ಪ್ರಥಮ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮಿಸುವ ಮೂಲಕ ಬಂದರು ಮಹತ್ವದ ಇನ್ನೊಂದು ಮೈಲುಗಲ್ಲು ದಾಖಲಿಸಿದೆ.

Advertisement

276.5 ಮೀಟರ್‌ ಉದ್ದವಿರುವ ಎಂಎಸ್‌ಸಿ ಎರ್ಮಿನಿಯಾ ಹಡಗು ರವಿವಾರ ಆಗಮಿಸುವ ಮೂಲಕ ನವ ಮಂಗಳೂರು ಬಂದರಿನಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗು ಅಧ್ಯಾಯ ಆರಂಭಗೊಂಡಿತು. ಈ ಹಡಗು 1,771 ಟಿಇಯು (ಟ್ವೆಂಟಿ ಫ‌ೂಟ್‌ ಈಕ್ವಲೆಂಟ್‌ ಯೂನಿಟ್‌) ಹಾಗೂ 1,265 ಪ್ರಮುಖ ಕಂಟೈನರ್‌ಗಳನ್ನು ಸಾಗಿಸುತ್ತದೆ.

ಹಡಗನ್ನು ಸಾಂಪ್ರದಾಯಿಕ ಜಲಫಿರಂಗಿ (ವಾಟರ್‌ ಕ್ಯಾನನ್‌) ಸ್ವಾಗತದ ಮೂಲಕ ಬರಮಾಡಿಕೊಳ್ಳ ಲಾಯಿತು. ಕಂಟೈನರ್‌ ನಿರ್ವಹಣೆಗೆ ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ವೆಂಕಟರಮಣ ಅಕ್ಕರಾಜು ಅವರು ಹಸುರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ರವಿವಾರ ಸಂಜೆ ಆಗಮಿಸಿದ ಹಡಗು ಸರಕುಗಳನ್ನು ಹೇರಿಕೊಂಡು ಸೋಮವಾರ ಅಥವಾ ಮಂಗಳ ವಾರ ನಿರ್ಗಮಿಸುವ ಸಾಧ್ಯತೆಗಳಿವೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಸರಕು ಲಭ್ಯತೆ ಅಗತ್ಯ
ಒಂದು ಬಂದರಿಗೆ ಮೈನ್‌ಲೈನ್‌ ಕಂಟೈನರ್‌ ಸಾಗಾಟ ಹಡಗು ಆಗಮಿಸಬೇಕಾದರೆ ಅದಕ್ಕೆ ಬೇಕಾ ಗುವಷ್ಟು ಕಂಟೈನರ್‌ ಸರಕು ಅವಶ್ಯವಿರುತ್ತದೆ. ಇಲ್ಲದಿದ್ದರೆ ಮಧ್ಯಮ ಗಾತ್ರದ ಹಡಗುಗಳಲ್ಲಿ ಇದನ್ನು ತುಂಬಿಸಿ ಇತರ ಬಂದರಿಗೆ ಕೊಂಡೊಯ್ದು ಅಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗಿಗೆ ತುಂಬಿಸಲಾ ಗುತ್ತದೆ. ಈಗ ನವಮಂಗಳೂರು ಬಂದರಿನಲ್ಲೇ ಅವಶ್ಯವಿರುವಷ್ಟು ಸರಕು ಲಭ್ಯತೆ ಹಿನ್ನೆಲೆಯಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next