Advertisement

Election: ಮೊದಲು ಲೋಕಸಭೆ, 2ನೇ ಹಂತಕ್ಕೆ ಅಸೆಂಬ್ಲಿ ಚುನಾವಣೆ ಸಾಧ್ಯತೆ

12:42 AM Jan 07, 2024 | Team Udayavani |

ಹೊಸದಿಲ್ಲಿ: “ಒಂದು ದೇಶ ಒಂದು ಚುನಾವಣೆ’ ಸಂಬಂಧ ರಚನೆಗೊಂಡಿ­ರುವ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ದೇಶದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಶಿಫಾರಸು ಮಾಡುವ ಸಾಧ್ಯತೆಗಳು ಇವೆ.

Advertisement

ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಾಗೂ ಎರಡನೇ ಹಂತದಲ್ಲಿ ಸ್ಥಳೀಯ ಚುನಾವಣೆಗಳನ್ನು ಕೈಗೊಳ್ಳುವ ಸಾಧ್ಯತೆಗಳ ಕುರಿತು ಸಮಿತಿ ಚಿಂತನೆ ನಡೆಸಿದೆ. ಇದು “ಒಂದು ದೇಶ ಒಂದು ಚುನಾವಣೆ’ ಸಂಬಂಧ ಹಲವು ಪರಿಹಾರಗಳ ಪೈಕಿ ಒಂದು ಸೂತ್ರವಾಗಿದೆ. ದೇಶದ ವಿವಿಧ ಪ್ರದೇಶಗಳ ಹವಾ­ಮಾನವನ್ನು ಗಮನದಲಿಟ್ಟುಕೊಂಡು, ಪ್ರಾಯೋಗಿಕವಾಗಿ ಸಾಧ್ಯವಾಗುವ ರೀತಿಯಲ್ಲಿ ಇದನ್ನು ಅನುಷ್ಠಾನಗೊಳಿ­ಸಬೇಕಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಕೋವಿಂದ್‌ ಸಮಿತಿ ಸಾರ್ವ­ಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಚುನಾವಣ ವೆಚ್ಚ ಹಾಗೂ ಮಾನವ ಸಂಪನ್ಮೂಲವನ್ನು ತಗ್ಗಿಸಲು ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕೆಂದು 2018ರ ಆಗಸ್ಟ್‌ನಲ್ಲಿ ಕೇಂದ್ರ ಸರಕಾರದ ಪ್ರಸ್ತಾವವನ್ನು ಹಿಂದಿನ ಕಾನೂನು ಆಯೋಗವು ಅನು­ಮೋದಿಸಿತ್ತು. ನಿವೃತ್ತ ನ್ಯಾಯಮೂರ್ತಿ ರಿತು ರಾಜ್‌ ಅವಸ್ತಿ ನೇತೃತ್ವದ ಪ್ರಸ್ತುತ ಕಾನೂನು ಸಮಿತಿಯು ಈ ಸಂಬಂಧ ತನ್ನ ವರದಿಯನ್ನು ಸಿದ್ಧಪಡಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next