Advertisement
46 ದಿನಗಳ ಕಾಲ ನಡೆಯುವ ಈ ಯಾತ್ರೆಯೆಂದು ಈಗಾಗಲೇ ದೇಶಾ ದ್ಯಂತದ ಸುಮಾರು 1.5 ಲಕ್ಷ ಯಾತ್ರಿಕರು ನೋಂದಾಯಿಸಿ ಕೊಂಡಿದ್ದಾರೆ. ಜಮ್ಮು – ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾಮ್ ಟ್ರ್ಯಾಕ್(36 ಕಿ.ಮೀ.) ಮತ್ತು ಗಂದೇರ್‌ಬಾಲ್ ಜಿಲ್ಲೆಯ ಬಲ್ತಾಲ್(14 ಕಿ.ಮೀ.) ಮಾರ್ಗದಲ್ಲಿ ಯಾತ್ರೆ ಸಾಗಲಿದೆ.ರವಿವಾರ ಮೂವರು ಮೋಟಾರು ಬೈಕುಗಳು ಸೇರಿದಂತೆ 93 ವಾಹನಗಳಲ್ಲಿ ಯಾತ್ರಿಕರು ಜಮ್ಮುವಿನ ಭಗವತಿನಗರ ಬೇಸ್‌ಕ್ಯಾಂಕ್‌ನಿಂದ ಯಾತ್ರೆಗೆ ಹೊರಟಿದ್ದಾರೆ. ಉಗ್ರರ ದಾಳಿಯ ಭೀತಿ ಇರುವ ಕಾರಣ ಯಾತ್ರಿಕರಿಗೆ ಬಹುಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ.
ಯಾತ್ರಿಕರು ಹಾಗೂ ಅವರ ವಾಹನಗಳನ್ನು ಟ್ರ್ಯಾಕ್ ಮಾಡಲು ಉಪಗ್ರಹ ಹಾಗೂ ಚಿಪ್ ಆಧರಿತ ಟ್ರ್ಯಾಕಿಂಗ್ ವ್ಯವಸ್ಥೆ
-ಸಿಆರ್‌ಪಿಎಫ್ ಯೋಧರನ್ನು ಒಳಗೊಂಡ ವಿಶೇಷ ಮೋಟಾರ್‌ಸೈಕಲ್ ಪಡೆ. ಇಲ್ಲಿ ಯೋಧರ ಹೆಲ್ಮೆಟ್‌ಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ
-ಭದ್ರತಾ ಪಡೆಗಳ 300 ಹೆಚ್ಚುವರಿ ಕಂಪೆನಿಗಳ ನಿಯೋಜನೆ
ಡ್ರೋನ್‌ಗಳು, ಯುಎವಿಗಳು, ಐಪಿ ಆಧರಿತ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ನಿಗಾ ವ್ಯವಸ್ಥೆ
ಪ್ರತಿಯೊಂದು ವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಅಳವಡಿಕೆ
-ಪ್ರತಿಯೊಬ್ಬ ಯಾತ್ರಿಕನಿಗೂ ಬಾರ್‌ಕೋಡ್
-ಜಮ್ಮುವಿನಿಂದ ಆರಂಭವಾಗಿ ಅಮರನಾಥ ದೇವಾಲಯದವರೆಗೂ ಬಿಗಿಭದ್ರತೆ