Advertisement

ಸೌರವ್ಯೂಹದಾಚೆಗೆ ಚಂದ್ರ!

08:50 AM Oct 05, 2018 | Karthik A |

ನ್ಯೂಯಾರ್ಕ್‌: ನಮ್ಮ ಸೌರವ್ಯೂಹದಾಚೆಗೆ ಇದೇ ಮೊದಲ ಬಾರಿ ಚಂದ್ರನನ್ನು ಬಾಹ್ಯಾಕಾಶ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಚಂದ್ರ ಎಂಟು ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ. ಸೈನ್ಸ್‌ ಅಡ್ವಾನ್ಸಸ್‌ನಲ್ಲಿ ಪ್ರಕಟಿಸಲಾದ ಅಧ್ಯಯನದಲ್ಲಿ ವಿವರಿಸಿರುವಂತೆ, ಹೊಸ ಚಂದ್ರನು ನೆಫ್ಚೂನ್‌ನಷ್ಟು ದೊಡ್ಡ ಗಾತ್ರದಲ್ಲಿದೆ. ಇಷ್ಟು ದೊಡ್ಡ ಚಂದ್ರ ನಮ್ಮ ಸೌರ ವ್ಯವಸ್ಥೆಯಲ್ಲಿಲ್ಲ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

Advertisement

ಹಬಲ್‌ ಅಬ್ಸರ್ವೇಶನ್‌ಗಳಲ್ಲಿ ಇದು ದೃಢಪಟ್ಟರೆ ನಮ್ಮ ಭೂಮಿ ಹಾಗೂ ಬಾಹ್ಯಾಕಾಶದ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಮತ್ತು ಚಂದ್ರನ ಹುಟ್ಟಿನ ಬಗ್ಗೆ ಹೊಸ ವಿಷಯಗಳು ತಿಳಿದು ಬರುವ ಸಾಧ್ಯತೆಗಳಿವೆ. 39 ದಿನಗಳವರೆಗೆ ಪರಿಭ್ರಮಣೆಯ ವಿವರಗಳನ್ನು ಅಧ್ಯಯನ ನಡೆಸಿ ಈ ಅಂಶ ಕಂಡುಕೊಳ್ಳಲಾಗಿದೆ. ನಕ್ಷತ್ರದ ಎದುರು ಗ್ರಹವು ಸಾಗಿದಾಗ ಉಂಟಾಗುವ ಬೆಳಕಿನಲ್ಲಿನ ಬದಲಾವಣೆಯನ್ನು ಗಮನಿಸಲಾಗಿದ್ದು, ಇದರ ಆಧಾರದಲ್ಲಿ ಹೊಸ ಚಂದ್ರ ಇರುವ ಬಗ್ಗೆ ಊಹಿಸಲಾಗಿದೆ. ಹಬಲ್‌ ಟೆಲಿಸ್ಕೋಪ್‌ ಅಧ್ಯಯನದ ಆಧಾರದಲ್ಲಿ ಹೊಸ ಚಂದ್ರನ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

– 8 ಸಾವಿರ ಜ್ಯೋತಿರ್ವರ್ಷ ದೂರದಲ್ಲಿ ತಿರುಗುತ್ತಿರುವ ಗ್ರಹ
– ಗಾತ್ರದಲ್ಲಿ ನೆಫ್ಚೂನ್‌ನಷ್ಟು ದೊಡ್ಡದು
– ಭೂಮಿ, ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅನುಕೂಲ

Advertisement

Udayavani is now on Telegram. Click here to join our channel and stay updated with the latest news.

Next