Advertisement
ಪುಣೆಯ ಪ್ರದೇಶವೊಂದರಲ್ಲಿ ಈ ಹಿಂದೆ ನಡೆಸಿದ ಸೀರೋಸರ್ವೇಯಲ್ಲಿ ಇಲ್ಲಿನ ಶೇ.85ರಷ್ಟು ಮಂದಿಗೆ ಸೋಂಕು ತಗಲಿ ಗುಣಮುಖರಾಗಿರುವ ಮಾಹಿತಿ ಬಹಿರಂಗವಾಗಿತ್ತು. ಈ ಎಲ್ಲ ಶೇ.85 ಮಂದಿಯ ದೇಹದಲ್ಲೂ ಸುರಕ್ಷಿತ ಪ್ರತಿಕಾಯ ಉತ್ಪತ್ತಿಯಾಗಿರುವ ವಿಚಾರ ಈಗ ತಿಳಿದುಬಂದಿದ್ದು, ಇಲ್ಲಿನ ಜನರಲ್ಲಿ ಸಾಮೂಹಿಕ ಪ್ರತಿರಕ್ಷೆ ಮೂಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
Related Articles
ಖಾಸಗಿ ಮಾರುಕಟ್ಟೆಯಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಸಂಸ್ಥೆಯು ಕೊವಿಶೀಲ್ಡ್ ಲಸಿಕೆಯನ್ನು ಒಂದು ಡೋಸ್‌ಗೆ 500ರಿಂದ 600 ರೂ.ಗಳಿಗೆ ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಸಿಇಒ ಅಡಾರ್ ಪೂನಾವಾಲ ಹೇಳಿದ್ದಾರೆ.
Advertisement
ರೋಗಲಕ್ಷಣಕ್ಕೂ ಮುನ್ನವೇ ಮಾಹಿತಿ ನೀಡುವ ವಾಚ್!ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಿಮ್ಮ ದೇಹಕ್ಕೆ ಸೋಂಕು ತಗಲಿದೆಯೇ ಎಂಬುದನ್ನು ಈ ಸ್ಮಾರ್ಟ್‌ವಾಚ್ ಪತ್ತೆಹಚ್ಚಬಲ್ಲದು. ಹೌದು, ಅಮೆರಿಕದ ಸ್ಟಾನ್‌ಫೋರ್ಡ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಇಂಥದ್ದೊಂದು ವಾಚ್ ಅಭಿವೃದ್ಧಿಪಡಿಸಿದ್ದಾರೆ. 5,300 ಮಂದಿಯ ಮೇಲೆ ಪ್ರಯೋಗವನ್ನೂ ನಡೆಸಲಾಗಿದ್ದು, ಈ ಪೈಕಿ 32 ಮಂದಿಗೆ ಸೋಂಕು ತಗಲಿರುವುದನ್ನು ಸ್ಮಾರ್ಟ್ ವಾಚ್ ಪತ್ತೆಹಚ್ಚಿದೆ. ಸೋಂಕು ದೃಢಪಡುವ 9 ದಿನಗಳ ಮುಂಚಿತವಾಗಿಯೇ ಈ ವಾಚ್ ಸೋಂಕಿನ ಮಾಹಿತಿ ನೀಡಿದೆ. ಎದೆಬಡಿತ, ದೇಹದ ಉಷ್ಣತೆ, ನಿದ್ರೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಇದು ಮಾಹಿತಿ ಒದಗಿಸುತ್ತದೆ. ಏನಿದು ಸಮೂಹ ಪ್ರತಿಕಾಯ?
ಜನಸಂಖ್ಯೆಯ ಬಹುಪಾಲು ಮಂದಿಯ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆದು, ಇಡೀ ಸಮುದಾಯವೇ ಸಂರಕ್ಷಣೆಗೆ ಒಳಗಾಗುವ ಪ್ರಕ್ರಿಯೆಯನ್ನು “ಹರ್ಡ್ ಇಮ್ಯುನಿಟಿ'(ಸಮೂಹ ಪ್ರತಿಕಾಯ)
ಎಂದು ಕರೆಯುತ್ತಾರೆ. ಅಂದರೆ, ಶೇ.80ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂಥ ಸಂದರ್ಭದಲ್ಲಿ, ಸೋಂಕಿತರೊಂದಿಗೆ ಸಂಪರ್ಕ ಹೊಂದಿದರೂ ಅವರಿಗೆ ಸೋಂಕು ತಗಲುವುದಿಲ್ಲ. ಸಾಮಾನ್ಯವಾಗಿ ಸಮೂಹ ಪ್ರತಿಕಾಯ ಸಾಧಿಸಬೇಕೆಂದರೆ, ಜನಸಂಖ್ಯೆಯ ಶೇ.50ರಿಂದ 90ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಬೇಕಾದ್ದು ಅಗತ್ಯ. ಇಲ್ಲಿ ಇಡೀ ಗ್ರಾಮವೇ ಪಾಸಿಟಿವ್!
ಹಿಮಾಚಲಪ್ರದೇಶದ ಲಹೌಲ್ ಕಣಿವೆ ಪ್ರದೇಶದ ಒಂದಿಡೀ ಊರಿಗೆ ಊರೇ ಕೊರೊನಾ ಪಾಸಿಟಿವ್ ಆಗಿದೆ. 52 ವರ್ಷದ ವ್ಯಕ್ತಿಯೊಬ್ಬ ರನ್ನು ಹೊರತುಪಡಿಸಿ ಊರಲ್ಲಿರುವ ಎಲ್ಲರಿಗೂ ಸೋಂಕು ದೃಢಪಟ್ಟಿದೆ. ಥೋರಂಗ್ ಎಂಬ ಹಳ್ಳಿಯಲ್ಲಿ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿನ ಎಲ್ಲರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇಲ್ಲಿಂದಲೇ ಸೋಂಕು ಎಲ್ಲರಿಗೂ ಹರಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊರೊನಾ ಸ್ಥಿತಿಗತಿ
ಅಮೆರಿಕ
ಒಂದೇ ದಿನ 2 ಸಾವಿರ ಮಂದಿಯ ಬಲಿಪಡೆದಿದೆ. 24 ಗಂಟೆಗಳಲ್ಲಿ 1.87 ಲಕ್ಷ ಮಂದಿಗೆ ಕೊರೊನಾ ದೃಢಪಟ್ಟಿದೆ. ಇನ್ನಷ್ಟು ನಿರ್ಬಂಧ, ಕರ್ಫ್ಯೂ ವಿಧಿಸುವ ಕುರಿತು ವಿವಿಧ ಪ್ರಾಂತ್ಯಗಳ ಗವರ್ನರ್‌ಗಳು ಚಿಂತನೆ ಆರಂಭಿಸಿದ್ದಾರೆ. ಹಾಂಕಾಂಗ್
ಮತ್ತೆ ಸೋಂಕು ಪರಿಸ್ಥಿತಿ ಗಂಭೀರವಾಗಿದೆ ಎಂದು ತಜ್ಞರು ಎಚ್ಚರಿಸಿದ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಅನಗತ್ಯವಾಗಿ ಗುಂಪುಗೂಡದಂತೆ ಜನರಿಗೆ ಎಚ್ಚರಿಸಲಾಗಿದೆ. ಆಸ್ಟ್ರೇಲಿಯಾ
“ಕ್ಲಿಷ್ಟಕರ ನಿರ್ಬಂಧ’ ಹೇರಿದ್ದ ದ.ಆಸ್ಟ್ರೇಲಿಯಾ ಶುಕ್ರವಾರ ನಿರ್ಬಂಧ ವಾಪಸ್ ಪಡೆದಿದೆ. ಪಿಜ್ಜಾ ಡೆಲಿವರಿ ಬಾಯ್ ತನ್ನ ಸಂಪರ್ಕಿತರ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದು ಬಹಿರಂಗ ವಾದ ಕಾರಣ ನಿರ್ಬಂಧ ರದ್ದುಪಡಿಸಲಾಗಿದೆ ಟರ್ಕಿ
ದಿನಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟರ್ಕಿಗೆ ವಿಸಿಟ್ ವೀಸಾ ವಿತರಣೆಯನ್ನು ರದ್ದುಗೊಳಿಸಿ ಯುಎಇ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಪಾಕಿಸ್ಥಾನ
ಸೋಂಕಿನ ಎರಡನೆ ಅಲೆ ಆರಂಭವಾಗಿದೆ. ಒಂದೇ ದಿನ 2738 ಮಂದಿಗೆ ಸೋಂಕು ತಗಲಿದೆ. ಜು.11ರ ಬಳಿಕ ಇಷ್ಟೊಂದು ಪ್ರಕರಣ ಪತ್ತೆಯಾಗಿದ್ದು ಇದೇ
ಮೊದಲು.