Advertisement

Kashmir: ಕಣಿವೆಯಲ್ಲಿ ಮೊದಲ ಶರನ್ನವರಾತ್ರಿ

11:00 PM Oct 16, 2023 | Team Udayavani |

ಹೊಸದಿಲ್ಲಿ: ಕಾಶ್ಮೀರದಲ್ಲಿ 1947ರ ಬಳಿಕ ಇದೇ ಮೊದಲ ಬಾರಿಗೆ ಶಾರದಾ ದೇಗುಲದಲ್ಲಿ ನವರಾತ್ರಿ ಪೂಜೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಕುರಿತು ಎಕ್ಸ್‌ ನಲ್ಲಿ (ಟ್ವಿಟರ್‌) ಬರೆದುಕೊಂಡಿದ್ದು, ಈ ನವರಾತ್ರಿಯು ಕಣಿವೆಯಲ್ಲಿ ಶಾಂತಿ ನೆಲೆಸಿರುವುದರ ಸೂಚಕವೆಂದು ಪ್ರತಿಪಾದಿಸಿದ್ದಾರೆ.

Advertisement

ದೇಶ ವಿಭಜನೆಗೂ ಮುಂಚೆ ಇದ್ದಂಥ ಶಾರದಾ ಮಂದಿರದ ಜಾಗದಲ್ಲೇ (ಈಗಿನ ತೀತ್ವಾಲ್‌ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ) ಇತ್ತೀಚೆಗೆ ಮತ್ತೆ ನೂತನ ಶಾರದಾ ಮಂದಿರವನ್ನು ನಿರ್ಮಾಣ ಮಾಡ ಲಾಗಿದ್ದು, ಈ ವರ್ಷ ಮಾರ್ಚ್‌ 23ರಂದು ನಾನೇ ಅದನ್ನು ಉದ್ಘಾಟಿಸಿದ್ದೆ. ಇದೀಗ ಮೊದಲ ಬಾರಿಗೆ ಮಂದಿರದಲ್ಲಿ ನವರಾತ್ರಿ ಉತ್ಸವ ನಡೆದಿದೆ ಎಂದಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಆಧ್ಯಾತಿಕ್ಮ, ಸಾಂಸ್ಕೃತಿಕ ಜ್ಯೋತಿಯನ್ನು ಪುನಃ ಬೆಳಗಿಸಲಾಗುತ್ತಿದೆ. ವರ್ಷದ ಹಿಂದೆ ಚೈತ್ರ ನವರಾತ್ರಿ ನಡೆದಿದ್ದ ಇದೇ ದೇಗುಲದಲ್ಲಿ ಇಂದು ಶಾರದೀಯ ನವರಾತ್ರಿ ನಡೆಯುತ್ತಿರುವುದು ನಮ್ಮ ಭಾಗ್ಯವೆಂದು ಅಮಿತ್‌ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next