ಪಾವಂಜೆ: ಗ್ರಾಮೀಣ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಮೂಲಭೂತ ಸೌಕರ್ಯವಾದ ರಸ್ತೆಯನ್ನು ನಿರ್ಮಿಸಿದಲ್ಲಿ ಪಟ್ಟಣಕ್ಕೆ ಸಂಪರ್ಕ ಸಾಧ್ಯವಾಗುತ್ತದೆ. ಜಿಲ್ಲಾ ಪಂಚಾಯತ್ ಅನುದಾನ ಸದ್ಬಳಕೆಯಾಗಲು ಸ್ಥಳೀಯ ಗ್ರಾಮಸ್ಥರು ಸಹ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸಿದ ಪಾವಂಜೆ ಕೊಳುವೈಲು ಸಂಪರ್ಕ ರಸ್ತೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಗ್ರಾಮಸ್ಥರಾದ ಸತೀಶ್ ರಾವ್ ರಸ್ತೆಯನ್ನು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಮಾತನಾಡಿ, ಜಿಲ್ಲಾ ಪಂಚಾಯತ್ ಸದಸ್ಯರ 4.30 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್‌ನ 1 ಲಕ್ಷ ರೂ. ಅನುದಾನಗಳಿಂದ ಈ ರಸ್ತೆ ಕಾಮಗಾರಿ ನಡೆಸಲಾಗಿದೆ.
ಸ್ಥಳೀಯರು ಸಹ ಈ ರಸ್ತೆಯ ಬಗ್ಗೆ ಕಾಳಜಿ ವಹಿಸುತ್ತಿರಬೇಕು ಎಂದರು. ಪಡುಪಣಂಬೂರು ಸಹಕಾರ ಬ್ಯಾಂಕಿನ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ನರೇಂದ್ರ ಪ್ರಭು, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಚಿತ್ರಾ ಸುಕೇಶ್, ಸುಗಂ ಧಿ, ಬೇಬಿ ಸುಲೋಚನಾ, ವಿನೋದ್‌ಕುಮಾರ್ ಕೊಳುವೈಲು, ಸುಕೇಶ್ ಪಾವಂಜೆ, ಜಯಂತ್, ಅಶೋಕ್ ಸಸಿಹಿತ್ಲು, ಸ್ಥಳೀಯರಾದ ನಾಗೇಶ್ ಬಂಗೇರ ಲಕ್ಷ್ಮಣ ದೇವಾಡಿಗ, ಮನೋಜ್ ಕುಮಾರ್ ಕೆಲಸಿಬೆಟ್ಟು, ಯೋಗೀಶ್ ಪಾವಂಜೆ, ಎಚ್.ರಾಮಚಂದ್ರ ಶೆಣೈ ಇದ್ದರು.
ಸುನಿಲ್ ಪಾವಂಜೆ, ಪ್ರೀತಮ್, ನಾಗರಾಜ್ ಹಳೆಯಂಗಡಿ, ಶಿವ, ಸುಧಾಕರ್ ಪಾವಂಜೆ, ಅನೀಶ್ ಪಾವಂಜೆ, ಭಾಸ್ಕರ ದೇವಾಡಿಗ ತುಕಾರಾಮ ಹಳೆಯಂಗಡಿ, ಬಿಜೆಪಿ ರೈತ ಮೋರ್ಚಾದ ಶೇಖರ ದೇವಾಡಿಗ, ಸುದೀರ್ ಕುಮಾರ್, ಶರತ್ ಕೊಳುವೈಲು, ಮಿಥುನ್ ಸುವರ್ಣ, ಗಣೇಶ್ ದೇವಾಡಿಗ ಪಾವಂಜೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.