Advertisement

ಮುನ್ನುಡಿಕಾರನ ಕಿನ್ನುಡಿಗಾನ

05:43 PM Oct 24, 2017 | |

ಸಿನಿಮಾ, ಕಿರುತೆರೆ ನಿದೇಶಕ ಪಿ.ಶೇಷಾದ್ರಿ ತುರುವೆಕೆರೆ ಸಮೀಪದ ದಂಡಿನಶಿವರ ಗ್ರಾಮದವರು. ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿ ನಂತರ ಸಿನಿಮಾ ಕ್ಷೇತ್ರಕ್ಕೆ ಬಂದವರು. ಅನುಪಮಾ ಶೇಷಾದ್ರಿ ಅವರ ಬಾಳಸಂಗಾತಿ. ದಾಂಪತ್ಯಕ್ಕೆ 20ರ ಹರೆಯ. ಮಗ ಪ್ರಥಮ. ಮಲ್ಟಿಮೀಡಿಯಾದಲ್ಲಿ ಡಿಗ್ರಿ ಮಾಡ್ತಿದ್ದಾರೆ. 

Advertisement

 ಶೇಷಾದ್ರಿ ಮೊದಲ ಸಿನಿಮಾ “ಮುನ್ನುಡಿ’ ವಸ್ತ್ರವಿನ್ಯಾಸ ಅನುಪಮಾ ಅವರದ್ದೆ. ವಿವಿಧ ವಿಭಾಗಗಳಲ್ಲಿ “ಮುನ್ನುಡಿ’ ಸಿನಿಮಾಕ್ಕೆ 11 ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ಬಂದಿವೆ. ಶೇಷಾದ್ರಿ ಅವರ ನಂತರದ ಎಲ್ಲ ಸಿನಿಮಾಗಳಿಗೂ ವಸ್ತ್ರವಿನ್ಯಾಸದ ಹೊಣೆ ಅನುಪಮಾ ಅವರದ್ದೆ.  ಕಲಾತ್ಮಕ ಚಿತ್ರಗಳ ಜೊತೆಗೆ ಧಾರಾವಾಹಿ ನಿರ್ದೇಶನವನ್ನೂ ಮಾಡುತ್ತ ಬಂದಿದ್ದಾರೆ ಶೇಷಾದ್ರಿ. ಒಟ್ಟು ಎಂಟು ರಾಷ್ಟ್ರಪ್ರಶಸ್ತಿ, ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ, ರಾಜ್ಯಪ್ರಶಸ್ತಿಗಳು ಬಂದಿವೆ.  ಒಂದು ಸಿನಿಮಾದ ಪ್ಲಾನ್‌, ಕತೆಯ ಎಳೆ ತಲೆಗೆ ಬಂದಮೇಲೆ ಅದನ್ನು ತೆರೆಗೆ ತರುವ ತನಕದ ಪ್ರೊಸೆಸ್‌ನಲ್ಲಿ ಶೇಷಾದ್ರಿ ಕುಟುಂಬವೇ ತೊಡಗಿಸಿಕೊಳ್ಳುತ್ತದೆ. ಇವರ ಫ್ಯಾಮಿಲಿ ಜೊತೆ ಒಂದು ಹೊತ್ತಿನ ಹರಟೆ …

ಕದನ ವಿರಾಮ ಘೋಷಣೆಯಾಗಿತ್ತು!
“ನೀವು ಬರದಿದ್ದರೆ ಈಗಲೂ ಕಂಟಿನ್ಯೂ ಆಗ್ತಿತ್ತು!’ ಅಂದರು ಶೇಷಾದ್ರಿ.  “ಕಾರಣ ಏನು ಕೇಳಿ ಫ‌ಸ್ಟು’ ಹೀಗಂದ ಅನುಪಮಾ ಮತ್ತೆ ಯುದ್ಧ ಆರಂಭವಾಗುವ ಸೂಚನೆ ನೀಡಿದರು.  ಹೊರಗೆ ಮೋಡಗಟ್ಟಿದ ಆಕಾಶ ಮಳೆ ಸುರಿಸಿ ಶುಭ್ರವಾಗಿತ್ತು.  .. ಶೇಷಾದ್ರಿ- ಅನುಪಮ ಮದುವೆಯಾಗಿ 20 ವರ್ಷ. ಇಬ್ಬರದೂ ಪರಸ್ಪರ ವಿರುದ್ಧ ಸ್ವಭಾವ, ವಿರುದ್ಧ ಯೋಚನೆಗಳು. ವಿರುದ್ಧ ದೃವಗಳಲ್ಲೇ ಆಕರ್ಷಣೆ ಹೆಚ್ಚು ಅನ್ನೋ ಮಾತು ಇವರಿಬ್ಬರ ಮಟ್ಟಿಗೆ ನಿಜ. ನೇರ ದಿಟ್ಟ ಹೆಣ್ಮಗಳು ಅನುಪಮ. ತಾಳ್ಮೆಯ ಸಾಕಾರಮೂರ್ತಿ ಶೇಷಾದ್ರಿ. ಹೀಗಿದ್ದೂ ಇವರಿಬ್ಬರ ನಡುವೆ ಜಗಳವಾದರೆ ರಾಜಿಸಂಧಾನ ಮಾಡೋದು ಮಗ ಪ್ರಥಮ. ಅಮ್ಮನ ಮೊಬೈಲ್‌ನಿಂದ ಅಪ್ಪನಿಗೆ ಸಾರಿ ಮೆಸೇಜ್‌ ಕಳಿಸೋದು. ಅರೆ, ಇಷ್ಟು ಒಳ್ಳೆಯವಾÛ ನನ್ನ ಹೆಂಡ್ತಿ ಅಂತ ಅಪ್ಪ ಮೆತ್ತಗಾದ್ರೆ ಮಗ ಫ‌ುಲ್‌ ಖುಶ್‌!

ಮನೆಯಲ್ಲಿ ಸಂಗಾತಿ ಇಲ್ಲದ ಹೊತ್ತು ..
ಶೇಷಾದ್ರಿ: ಮನೆಯಲ್ಲಿ ಅವಳಿಲ್ಲ ಅಂದರೆ ನನಗೆ ಇರೋದಕ್ಕೇ ಆಗಲ್ಲ. ರಾತ್ರಿಯ ಮೌನದಲ್ಲೇ ವಿಚಿತ್ರ ಶಬ್ಧಗಳು ಕೇಳುತ್ತವೆ. ಅದೊಂಥರ ಗುಯ್‌ ಅಂತ. ಮನಸ್ಸಿಗೆ ಕಸಿವಿಸಿ. ಸೆಕ್ಯೂರ್‌ ಫೀಲ್‌ ಇರಲ್ಲ.  ಮದುವೆಯಾದ ಮೇಲೆ ಅವಳಿಲ್ಲದಾಗ ನಾನು ಮನೆಯಲ್ಲಿದ್ದದ್ದು ಐದಾರು ಸಲ ಅಷ್ಟೇ. ಅವಳು ಹೆರಿಗೆಗೆ ಆಸ್ಪತ್ರೆಯಲ್ಲಿದ್ದಾಗ, ಇನ್ನೊಮ್ಮೆ ಅವಳಿಗೆ ಆಪರೇಶನ್‌ ಆಗಿದ್ದಾಗ, ಎಲ್ಲೋ ಹೋಗಿದ್ದಾಗ ..ಹೀಗೆ.  

Advertisement

ಅನುಪಮಾ: ಮನೆಯಲ್ಲಿ ನಾನೊಬ್ಬಳೇ ಇರಲ್ಲ. ಮಗ ಇರ್ತಾನೆ. ಹತ್ತು, ಇಪ್ಪತ್ತು ದಿನ ಶೇಷಾದ್ರಿ ಶೂಟಿಂಗ್‌ಗೆ ಹೋದರೂ ಮ್ಯಾನೇಜ್‌ ಮಾಡ್ತೀನಿ. ಎಷ್ಟೋ ಸಲ ಅವರ ಜೊತೆಗೆ ಸಿನಿಮಾ ಫೆಸ್ಟಿವಲ್‌ಗೆಲ್ಲ ಹೋಗೋ ಅವಕಾಶ ಇದ್ದರೂ ಮಗನಿಗೋಸ್ಕರ ಹೋಗಲ್ಲ. ಅವನು ಈಗ ಟೀನೇಜ್‌ ಹುಡುಗ. ಎಲ್ಲಿ ವೆಹಿಕಲ್‌ ತಗೊಂಡು ಫ್ರೆಂಡ್ಸ್‌ ಜೊತೆಗೆ ಹೊರಗೆ ಹೋಗ್ತಾನೋ ಅನ್ನೋ ಆತಂಕ. ಅವ್ನು ಹಾಗೆಲ್ಲ ಮಾಡಲ್ಲ, ಆದರೂ ..

ಪ್ರಥಮ: ಫ್ರೆಂಡ್ಸ್‌ ಅಂದರೆ ಇಷ್ಟನೇ. ಆದರೆ ಹೆಚ್ಚು ತಿರುಗಾಟ, ಬೇಕಾಬಿಟ್ಟಿ ದುಡ್ಡು ಖರ್ಚುಮಾಡೋದೆಲ್ಲ ಇಷ್ಟ ಆಗಲ್ಲ. ಹಣ ಖರ್ಚು ಮಾಡೋದಕ್ಕಿಂತಲೂ ಉಳಿಸೋದಿಷ್ಟ. ಫ್ರೆಂಡ್ಸ್‌ ಜೊತೆ ಹೋದರೆ ನಾನೂ ಖರ್ಚು ಮಾಡಬೇಕಾಗುತ್ತೆ. ಅದಕ್ಕೆ ಇಂಥ ಸನ್ನಿವೇಶವನ್ನು ಅವಾಯ್ಡ ಮಾಡ್ತೀನಿ. ಮಕ್ಕಳು ದೊಡ್ಡವರಾಗ್ತಿದ್ದ ಹಾಗೆ ಪೇರೆಂಟ್ಸ್‌ ಹಾಗೂ ಮಕ್ಕಳ ನಡುವೆ ಒಂದು ಗ್ಯಾಪ್‌ ಬೆಳೆಯುತ್ತಲ್ಲಾ, ಅದು ನಮ್ಮ ನಡುವೆ ಇಲ್ಲ.  

ಅನುಪಮಾ, ಶೇಷಾದ್ರಿ ಸಿನಿಮಾಕ್ಕೆ ಮಾತ್ರ ಕಾಸ್ಟೂಮ್‌ ಡಿಸೈನ್‌ ಮಾಡೋದ್ಯಾಕೆ?

ಅನುಪಮಾ: ಕಾಸ್ಟೂಮ್‌ ಡಿಸೈನಿಂಗ್‌ನಲ್ಲಿ ಕೋರ್ಸ್‌ ಮಾಡಿಲ್ಲ. ಸನ್ನಿವೇಶ, ಪಾತ್ರಗಳನ್ನು ನೋಡಿಕೊಂಡು ವಸ್ತ್ರ ವಿನ್ಯಾಸ ಮಾಡುತ್ತೀನಿ. “ಮುನ್ನುಡಿ’ ನಮ್ಮ ಮೊದಲ ಸಿನಿಮಾ. ಕಥೆಯಲ್ಲಿ ಬರುವ ಬ್ಯಾರಿ ಸಮುದಾಯ, ಅವರ ಪರಿಸರ, ಡಿಫ‌ರೆಂಟಾದ ಕಾಸ್ಟೂಮ್‌ ನೋಡಿಯೂ ಗೊತ್ತಿರಲಿಲ್ಲ. ಹೆಣ್ಮಕ್ಕಳು ಪಂಚೆ ಉಟ್ಟು ರವಿಕೆ ತೊಡುತ್ತಾರೆ. ಕಿವಿಯ ಉದ್ದಾನುದ್ದಕ್ಕೆ ಚುಚ್ಚಿ ಅಲೀಕತ್‌ ಎಂಬ ಆಭರಣ ಹಾಕುತ್ತಾರೆ. ಗಂಡಸರು ತುಂಡು ಪಂಚೆ, ಬಿಳಿ ಅಂಗಿ, ಬಿಳಿ ಬಲೆ ಬಲೆಯ ಟೊಪ್ಪಿ. ಬೊಳುವಾರು ಮೊಹಮ್ಮದ್‌ ಕುಂಞ ಅವರ ಪತ್ನಿ ಜುಬೈದಾ ಪ್ರತಿಹಂತದಲ್ಲೂ ಮಾರ್ಗದರ್ಶನ ಮಾಡುತ್ತಿದ್ದರು. ನಮ್ಮಿಬ್ಬರ ವಸ್ತ್ರವಿನ್ಯಾಸಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ನನ್ಯಾಕೆ ಬೇರೆ ಸಿನಿಮಾಕ್ಕೆ ಕಾಸ್ಟೂಮ್‌ ಡಿಸೈನ್‌ ಮಾಡಲ್ಲ ಅಂದರೆ ಫ್ಯಾಮಿಲಿ ಜವಾಬ್ದಾರಿಯನ್ನು ನಿಭಾಯಿಸಲಿಕ್ಕೋಸ್ಕರ. ಕುಟುಂಬವನ್ನು ನೋಡಿಕೊಳ್ಳಬೇಕಲ್ವಾ. ಮನೆ, ಮಗನ ಜವಾಬ್ದಾರಿ. ಜೊತೆಗೆ ನಮ್ಮ ಪ್ರೊಡಕ್ಷನ್‌ ಟೀಂ ನ್ನು ಶೇಷಾದ್ರಿ ಒಬ್ಬರಿಗೇ ನಿಭಾಯಿಸೋದು ಕಷ್ಟ. ಅವರು ಈವರೆಗೆ ಯಾರೊಬ್ಬರಿಗೂ ಒಂದಕ್ಷರ ಬೈದವರಲ್ಲ. ನಾನು ಹಾಗಲ್ಲ, ಎದುರು ಯಾರಿದ್ದಾರೆ ಅಂತ ನೋಡಲ್ಲ, ಸರಿ ಇಲ್ಲ ಅನಿಸಿದ್ರೆ ಬೈಯ್ಯೋದೇ! ನಮ್ಮ ಟೀಂನಲ್ಲಿ ಎಂಟು ಹತ್ತು ವರ್ಷದಿಂದ ಇರೋ ಹುಡುಗರು ಇನ್ನೂ ಇದ್ದಾರೆ. ನಾನು ಬರಿ¤àನಿ ಅಂದ್ರೆ, “ಅಯ್ಯೋ, ಅವ್ರು ಬರೋದು ಬೇಡ ಸಾರ್‌’ ಅಂತ ಶೇಷಾದ್ರಿಗೆ ದುಂಬಾಲು ಬೀಳ್ತಾರೆ. 

ಶೇಷಾದ್ರಿ: ನಿಜ. ಮೊದ ಮೊದಲು ಬಹಳ ಕಷ್ಟ ಇತ್ತು. ನಾವು ಒಂದಿಷ್ಟು ಮಂದಿ ದುಡ್ಡು ಹಾಕಿ ಸಹಕಾರಿ ಮಾದರಿಯಲ್ಲಿ ಸಿನಿಮಾ ಮಾಡ್ತಿದ್ವಿ. ಸಿನಿಮಾಕ್ಕೆ ದುಡ್ಡು ಹಾಕೋರು ಸಿನಿಮಾ ಹೇಗೆ ಬರುತ್ತೆ ಅನ್ನೋದಕ್ಕಿಂತಲೂ  ಕೇಳ್ಳೋದು ಹಾಕಿದ ದುಡ್ಡು ವಾಪಾಸ್‌ ಬರುತ್ತಾ? ಅಂತ. ಅದಕ್ಕೆ ಚಿಕ್ಕ ಚಿಕ್ಕದರಲ್ಲೂ ದುಡ್ಡು ಉಳಿಸ್ತಿದ್ವಿ. ಪ್ರತಿದಿನ ಕಾಫಿ ಡಿಕಾಕ್ಷನ್ನೂ ಇವಳೇ ರೆಡಿ ಮಾಡಿ ಕೊಡ್ತಿದುÉ. ಹಾಲು ನಾವೇ ತರಿ¤ದ್ವಿ, ಹುಡುಗರಾದ್ರೆ ಜಾಸ್ತಿ ತಂದು ವೇಸ್ಟ್‌ ಮಾಡ್ತಾರೆ ಅಂತ. ಎಷ್ಟೋ ಸಲ ಅನುಪಮಾ ರಾತ್ರೋ ರಾತ್ರಿ ಶೂಟಿಂಗ್‌ ನಡೆಯೋ ಜಾಗದಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು ದುಡ್ಡು, ಕಾಸ್ಟೂéಮ್‌ ತಗೊಂಡು ಅದೇ ದಿನ ವಾಪಾಸ್‌ ಬಂದಿದ್ದೂ ಇತ್ತು. ಆದರೆ ಆ ಕಷ್ಟಕ್ಕೆ ತಕ್ಕ ಪ್ರತಿಫ‌ಲವೂ ಸಿಕ್ಕಿತು.  ಸಿನಿಮಾ ಸಾಹಸದಲ್ಲಿ ಮಗನ ಕಥೆ …

ಶೇಷಾದ್ರಿ: ಶೂಟಿಂಗ್‌, ಸಿನಿಮಾ ಮೇಕಿಂಗ್‌ ಅಂತ ನಾವು ಎಲ್ಲೆಲ್ಲ ಹೋಗ್ತಿàವಿ ಅಲ್ಲಿಗೆಲ್ಲ ಅವನನ್ನು ಕರೊRಂಡೇ ಹೋಗ್ತಿದ್ವಿ. ಸಿನಿಮಾ ಸೆಟ್‌ನಲ್ಲೇ ಬೆಳೆದ ಮಗ ಅವನು. ಸೀರಿಯಲ್‌, ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡ್ತಿದ್ದ. “ತುತ್ತೂರಿ’, “ಗುಬ್ಬಚ್ಚಿಗಳು’ ಸಿನಿಮಾದಲ್ಲೆಲ್ಲ ಅಭಿನಯಿಸಿದ್ದಾನೆ. ಸಿನಿಮಾ ಮೇಕಿಂಗ್‌ನಲ್ಲಿ ನಮ್ಮಿಬ್ಬರ ಜೊತೆ ಅವನೂ ತೊಡಗಿಸಿಕೊಳ್ಳುತ್ತಾನೆ. ಆದರೆ ಇದನ್ನು ಯಾರ ಹತ್ರನೂ ಹೇಳ್ಕೊಳಲ್ಲ. 

ಪ್ರಥಮ: ಮೊದ ಮೊದಲು ಆ್ಯಕ್ಟಿಂಗ್‌ ಖುಷಿಯಾಗ್ತಿತ್ತು. ಎಲ್ಲರಿಗೂ ಕಾಣಿಸ್ಕೊಳಬಹುದಲ್ಲ ಅಂತ, ಈಗ ಆಸಕ್ತಿ ಬದಲಾಗಿದೆ. ಸಿನಿಮಾ ಮೇಕಿಂಗ್‌ನಲ್ಲಿ ಆಸಕ್ತಿ ಬಂದಿದೆ. ಅಪ್ಪ ಮಾಡೋ ಥರದ ಆಫ್ಬೀಟ್‌ ಸಿನಿಮಾಗಳನ್ನೂ ನೋಡ್ತೀನಿ. ಆದರೆ ನನಗೆ ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ಸಿನಿಮಾ ಮಾಡೋದಿಷ್ಟ.  ಕಮರ್ಷಿಯಲ್‌ ಸಿನಿಮಾಗೆ ಫ್ಯಾಮಿಲಿ ಸಮೇತ ಹೋಗೋದು …

ಪ್ರಥಮ: ಒಮ್ಮೆ “ಆ್ಯವೆಂಜರ್‌’ ಸಿನಿಮಾಗೆ ಅಪ್ಪನ್ನ ಕರೊRಂಡು  ಹೋಗಿದ್ದೆ. ಸೂಪರ್‌ ಹೀರೋ ಸಿನಿಮಾ. ಬಹಳ ಆಸಕ್ತಿ, ಕುತೂಹಲದಿಂದ ಕುರ್ಚಿ ತುದಿಯಲ್ಲಿ ಕೂತು ಸಿನಿಮಾ ನೋಡ್ತಿದ್ದೆ. ಪಕ್ಕದಲ್ಲೇ ಕೂತ ಅಪ್ಪನ ಕಡೆ ನೋಡಿದ್ರೆ, ಅವರು ಗೊರಕೆ ಹೊಡೀತಿದ್ರು! ಅನುಪಮಾ: ಕಮರ್ಷಿಯಲ್‌ ಸಿನಿಮಾಕೆ ನಾವಿಬ್ರೇ ಹೇಗೋದೇ ಇಲ್ಲ. ತುಂಬ ಜನ ಇದ್ದರೆ ಮಾತ್ರ ಹೋಗೋದು. ಇಬ್ಬಿಬ್ಬರೇ ಹೋಗಲಿಕ್ಕೆ ಬೋರ್‌. ರೀಸೆಂಟಾಗಿ “ಯೂಟರ್ನ್’, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನೋಡಿದ್ದೀವಿ. ಸಿನಿಮಾಕ್ಕೆ ಅಂತಲ್ಲ. ಎಲ್ಲೇ ಔಟಿಂಗ್‌ ಹೋಗ್ಬೇಕಾದ್ರೂ ನಾವು ಫ್ರೆಂಡ್ಸ್‌ ಎಲ್ಲ ಸೇರಿ ದೊಡ್ಡ ಗುಂಪಾಗಿ ಹೋಗೋದು.  ಮನೆಯಲ್ಲಿ ಡೈರೆಕ್ಟರ್‌ …

ಶೇಷಾದ್ರಿ: ಶೇ.100 ಅನುಪಮಾ. ಮನೆಯ ಇಂಟೀರಿಯರ್ಸ್‌, ಗಾರ್ಡನಿಂಗ್‌, ರೇಶ್‌ನ್‌ನಿಂದ ಹಿಡಿದು ಮಗನ ದೇಖಾರೇಖೀ ನೋಡ್ಕೊಳ್ಳೋವರೆಗೆ ಎಲ್ಲವೂ ಆಕೆಯದೇ. ಮಗ ಎಂಟು, ಒಂಬತ್ತನೇ ಕ್ಲಾಸ್‌ನಲ್ಲಿರುವಾಗಲೆಲ್ಲ ಅವನ ಸೆಕ್ಷನ್‌ ಯಾವುದು ಅಂತನೂ ನನಗೆ ಗೊತ್ತಿರಲಿಲ್ಲ. ಇದಲ್ಲದೇ ನಮ್ಮ ಪ್ರೊಡಕ್ಷನ್‌ ಟೀಂ ಜವಾಬ್ದಾರಿಯೂ ಅವಳದ್ದೇ. 

ಪ್ರಥಮ: ನೀವು ಈ ಅಪಾರ್ಟ್‌ಮೆಂಟ್‌ ಒಳಗೆ ಬರುವಾಗ ಎಂಟ್ರೆನ್ಸ್‌ನಲ್ಲಿ ಅಪ್ಪನ ಹೆಸರು ಕೇಳಿದ್ರಾ? ಅದಕ್ಕೆ ಅವರಿಗೆ ಯಾರ ಮನೆ ಅಂತ ಗೊತ್ತಾಗ್ಲಿಲ್ಲ. ಎಲ್ಲಾದ್ರೂ ಅಮ್ಮನ ಹೆಸ್ರು ಹೇಳಿದ್ರೆ ಸೆಕ್ಯುರಿಟಿಯವರೇ ಇಲ್ಲಿಗೆ ಕರೊRಂಡು ಬಂದು ಬಿಡ್ತಿದ್ರು. ಅಪಾರ್ಟ್‌ಮೆಂಟೇನು,  ಈ ರೋಡ್‌, ಪಕ್ಕದ ರೋಡ್‌ ..(ಅಮ್ಮ ಕಣ್ಣು ದೊಡ್ಡ ಮಾಡಿದ್ದು ನೋಡಿ ಮುಸಿಮುಸಿ ನಗುತ್ತಾ)
ಅನುಪಮಾ: ಅಪಾರ್ಟ್‌ಮೆಂಟ್‌ ವೆಲ್‌ಫೇರ್‌ ಅಸೋಸಿಯೇಶನ್‌ ವೈಸ್‌ ಪ್ರಸಿಡೆಂಟ್‌ ನಾನು. ಅದಕ್ಕೆ ಎಲಿÅಗೂ ಗೊತ್ತಿದೆ ಅಷ್ಟೆ. ಎಲ್ಲರ ಜೊತೆಗೆ ಬೆರೆಯೋದ್ರಿಂದ ಫ್ರೆಂಡ್ಸ್‌ ಹೆಚ್ಚು. 

ರಜೆಯ ಮಜಾ?
ಅನುಪಮಾ: ಇಲ್ವೇ ಇಲ್ಲ! ಅಂದ್ರೆ ಮದುವೆಯಾದಾಗಿಂದ ಈಗಿನವರೆಗೂ ಶೇಷಾದ್ರಿ ರಜೆ ಮಾಡಿದ್ದು ಅಂತಿಲ್ಲ. ಮೈಹುಷಾರಿಲ್ಲದ ಸಂದರ್ಭ ಹೊರತುಪಡಿಸಿ. ಭಾನುವಾರವೂ ಆಫೀಸ್‌ಗೆ ಹೋಗುತ್ತಾರೆ. ಹಾಗಿದ್ದರೇ ನೆಮ್ಮದಿ!  ಫ್ರೆಂಡ್ಸ್‌ ಜೊತೆ ಮಾತಾಡ್ತಾ ನಮ್ಮ ಕೆಲಸ ಮಾಡ್ತಾ ಆರಾಮವಾಗಿ ಇರಬಹುದು. ಅಪ್ಪಿತಪ್ಪಿ ಮನೆಯಲ್ಲಿದ್ದರೂ ಮನೆಯವರ ಜೊತೆ ಮಾತಾಡೋದೆಲ್ಲ ಇಲ್ಲವೇ ಇಲ್ಲ. ಮೂಲೆಯಲ್ಲಿ ಪುಸ್ತಕ ಹಿಡಿದು ಕೂತಿರ್ತಾರೆ. ಆಗಾಗ ಕಾಫಿ, ಟೀ ಸಪ್ಲೆ„ ಮಾಡ್ತಿರ್ಬೇಕು ನಾನು. ಅದಕ್ಕೆ ಬೆಳಗ್ಗೆ ಹತ್ತಾದ್ರೂ ಹೊರಡದಿದ್ದರೆ ನಾನೇ ಕೇಳ್ತೀನಿ, “ಏನಿನ್ನೂ ಹೊರಟಿಲ್ಲ?’ ಅಂತ.

ಶೇಷಾದ್ರಿ: (ನಗು) ಇಲ್ಲೇ ಹತ್ರ ಇರೋದು ಆಫೀಸ್‌. ಮನೆಯಲ್ಲಿದ್ದು ಏನ್ಮಾಡೋದು ಅಂತ ಅಲ್ಲೇ ಇರಿ¤àನಿ. ಮೊದಲಾದರೆ ಎಲ್ಲರೂ ಮನೆಗೆ ಬಂದು ಮಾತಾಡಿಸ್ತಿದ್ರು. ಈಗ ಎಲ್ಲರೂ ಆಫೀಸ್‌ಗೆ ಬರುತ್ತಾರೆ. 
ಪ್ರಥಮ: ಅಮ್ಮ ಟೈಂನ ವಿಷಯದಲ್ಲಿ ಕಂಜೂಸಿ. ಸ್ವಲ್ಪ ಹೊತ್ತು ಮನೆಯಲ್ಲಿದ್ರೂ ಟೈಂ ವೇಸ್ಟಾಗ್ತಿದ್ಯಲ್ಲ ಅಂತ ಟೆನ್ಶನ್‌ ಶುರುವಾಗುತ್ತೆ!
ಎಲ್ಲೋ ಇದ್ದವರು ಒಟ್ಟಾಗಿ ಗೂಡುಕಟ್ಟಿದ ಕಥೆ 

ಶೇಷಾದ್ರಿ: ಚಿಕ್ಕಮಗ ನಾನು. ಅಪ್ಪ ಮೇಷ್ಟ್ರು. ಎಲ್ಲರೂ ಮೆಡಿಕಲ್‌, ಇಂಜಿನಿಯರ್‌ ಓದಿ¤àನಿ ಅಂದರೆ ನಾನು ಆರ್ಟ್‌, ಜರ್ನಲಿಸಂನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ಮನೆಯಲ್ಲಿ ನನಗೆ ಆಯ್ಕೆಯ ವಿಷಯದಲ್ಲಿ ಸ್ವಾತಂತ್ರ್ಯವಿತ್ತು. ಮದುವೆ ವಿಚಾರದಲ್ಲೂ ನನ್ನ ಆಯ್ಕೆಯೇ ಫೈನಲ್‌ ಆಯ್ತು. ನಮ್ಮದೇ ಸಮುದಾಯದ ಹುಡುಗಿ ಅನುಪಮಾ. ಮನಸ್ಸಿನಲ್ಲಿದ್ದ ಹುಡುಗಿಯೇ ಎದುರು ಬಂದ ಹಾಗಿತ್ತು. 

ಮನೆಯವರಿಗಿಂತಲೂ ಮೊದಲೇ ನಾವಿಬ್ಬರು ಒಪ್ಪಿ ಮದುವೆಯಾಗಲು ನಿರ್ಧರಿಸಿದ್ದೆವು. ಮದುವೆಗೂ ಮುಂಚೆಯೇ ಶೂಟಿಂಗ್‌ ಜಾಗಕ್ಕೆ ಕರೆದುಕೊಂಡು ಹೋಗಿ ನನ್ನ ಕೆಲಸದ ಬಗ್ಗೆ ವಿವರಿಸಿದ್ದೆ. ಅವಳು ಒಪ್ಪಿಕೊಂಡ ಮೇಲೆಯೇ ಮದುವೆಯಾಗಿದ್ದು. ನಾನು ಪಮಿರ್ಶನ್‌ ಅಂತ ಕೇಳಿದ್ದು ದತ್ತಣ್ಣನ ಹತ್ರ. ಆತ ಬ್ರಹ್ಮಚಾರಿ, ತಾನು ಮದುವೆಯಾಗದ ಬಗ್ಗೆ ಆತನಿಗೆ ಖುಷಿಯಿದೆ. ಆದರೆ ಬೇರೆಯವರು ಮದುವೆ ವಿಚಾರ ಕೇಳಿದರೆ, ಮದುವೆ ಆಗ್ಬೇಕು ಅನಿಸಿದ್ರೆ ಆಗಬೇಕು. ಆಮೇಲೆ ವಯಸ್ಸಾದಮೇಲೆ ಮದುವೆ ಆಗಾಣ ಅಂದರೂ ಆಗಲ್ಲ ಅಂತಾರೆ. 

ಅನುಪಮಾ: ಹೌದು, “ಕೋಶಿಶ್‌’ ಗೆ ನನ್ನ ಕರೆಸಿ ದತ್ತಣ್ಣಂಗೆ ತೋರಿಸಿ ಓ.ಕೆ ಮಾಡಿಸಿದ್ರು. ಶೇಷಾದ್ರಿ ಸಿನಿಮಾ ಫೀಲ್ಡ್‌ನಲ್ಲಿ ಕೆಲಸ ಮಾಡೋದ್ರ ಬಗ್ಗೆ ಎಕ್ಸ್‌ಪ್ಲೇನ್‌ ಮಾಡಿದ್ದು ನೋಡ್ಬೇಕಿತ್ತು, ಇರುವುದರ ಹತ್ತುಪಟ್ಟು ಹೆಚ್ಚುಮಾಡಿ ಹೇಳಿದ್ದು. ಅರ್ಧ ರಾತ್ರಿಯಲ್ಲು ಹೆಣ್ಮಕ್ಕಳು ಫೋನ್‌ ಮಾಡಬಹುದು, ಅವರಿಗೆ ಡ್ರಾಪ್‌ ಕೊಡಬೇಕಾಗಬಹುದು, ನೈಟ್‌ ಎಲ್ಲ ಶೂಟಿಂಗ್‌ ಇರುತ್ತೆ. ಮನೆಗೆ ಬರೋದಕ್ಕೆ ಟೈಂ ಇಲ್ಲದೇ ಹೋಗಬಹುದು … ಹೀಗೆ ಶುರುಮಾಡಿ ಏನೇನೋ ಹೇಳಿ ಹೆದರಿಸಿದ್ರು. ಶುರುವಲ್ಲಿ ಒಳಗೊಳಗೆ ಸ್ವಲ್ಪ ಆತಂಕ ಇತ್ತು. ಆದ್ರೆ ಶೇಷಾದ್ರಿ ಬಗ್ಗೆ ಅಷ್ಟೇ ಕಾನ್ಫಿಡೆನ್ಸೂ ಇತ್ತು.  ಆರಂಭದ ಆರು ತಿಂಗಳೂ ಶೇಷಾದ್ರಿ ಅಕ್ಕನ ಮನೆಯಲ್ಲಿದ್ವಿ. ಆಮೇಲೆ ನಮ್ಮದೇ ಬಾಡಿಗೆ ಮನೆ. ಬೇರೆಯರಿಂದ ಒಂಚೂರೂ ಹಣ ಪಡೆಯದೇ ನಮ್ಮ ಹಣದಿಂದಲೇ ಬದುಕಬೇಕು ಅನ್ನೋ ಹಠ ನಮ್ಮಿಬ್ಬರಿಗೂ ಇತ್ತು. ಅದು ಈಗಲೂ ಇದೆ. 

ಸಿದ್ಧಾಂತದಲ್ಲಿ ಭಿನ್ನಾಭಿಪ್ರಾಯ …
ಶೇಷಾದ್ರಿ: ನಾನು ದೇವ್ರನ್ನು ನಂಬಲ್ಲ. ಪೂಜೆ, ಸಂಪ್ರದಾಯದಲ್ಲೆಲ್ಲ ಆಸಕ್ತಿ ಇಲ್ಲ. ಅನುಪಮಾ ನಂಬುತ್ತಾಳೆ. ಅದು ಅವಳ ಆಯ್ಕೆ. ಅದಕ್ಕೆ ನನ್ನ ಅಬೆjಕ್ಷನ್‌ ಏನಿಲ್ಲ. 

ಅನುಪಮಾ: ನಂಗೆ ದೇವರಲ್ಲಿ ನಂಬಿಕೆ ಇದೆ. ಶೂಟಿಂಗ್‌ಗೂ ಮೊದಲು ಪಕ್ಕದ ಬೀದಿಯ ಗಣೇಶನ ಗುಡಿಗೆ ಹೋಗಿ ಪೂಜೆ ಮಾಡಿಸಿ ಬರುತ್ತೀನಿ. ಶೇಷಾದ್ರಿ ಹೊರಗೆ ನಿಂತಿರ್ತಾರೆ. ಚೆಕ್‌ಗೆ ಪೂಜೆ ಆದ ಮೇಲೆನೇ ಸಿನಿಮಾ ಕೆಲಸಗಳು ಶುರುವಾಗೋದು. ಇದರಿಂದ ನಮಗೆ ಒಳ್ಳೆಯದೇ ಆಗಿದೆ. 

ಅಡುಗೆ ಶೇರಿಂಗ್‌ 

ಅನುಪಮಾ: ಇಲ್ಲವೇ ಇಲ್ಲ. ನಾನೇ ಅಡುಗೆ ಮಾಡೋದು. ಅದು ಮದುವೆ ಮೊದಲೇ ಶೇಷಾದ್ರಿ ಕಂಡೀಶನ್‌. ಅವರಿಗೆ ಕಾಫಿ ಮಾಡ್ಕೊಳಕ್ಕೂ ಬರಲ್ಲ. ಎಲ್ಲರೂ ಮನೆಯಲ್ಲೇ ಊಟ ಮಾಡೋದು. ಎಂಥ ದೊಡ್ಡ ಜಗಳವೇ ಆಗಲಿ. ಊಟ, ತಿಂಡಿ ಬಿಡೋ ಹಾಗಿಲ್ಲ ಅನ್ನೋದು ಮೊದಲಿಂದ ಮಾಡಿಕೊಂಡು ಬಂದ ಶಿಸ್ತು. ಊಟ ಬಿಟ್ಟು ಹೋದರೆ ಆಮೇಲೆ ನಾನು ಅಡುಗೆ ಮಾಡೋದೇ ಇಲ್ಲ ಅಂತ ಶುರುವಲ್ಲೇ ಹೇಳಿದ್ದೀನಿ. 

ಶೇಷಾದ್ರಿ: ಅಚ್ಚುಕಟ್ಟಾಗಿ ಮನೆಯಲ್ಲೇ ಊಟ ಮಾಡ್ತೀವಿ. ಅವಳಿಗೆ ಸಿಟ್ಟು ಬರೋದು ಬಹಳ ಬೇಗ. ಮೂಗಿನ ತುದಿಯಲ್ಲೇ ಕೋಪ. ಆದ್ರೆ ಅಷ್ಟೇ ಬೇಗ ಹೊರಟುಹೋಗುತ್ತೆ. ನನಗೆ ಬಹಳ ತಾಳ್ಮೆ. ಸಿಟ್ಟೇ ಬರಲ್ಲ. ಬಂದರೆ ಬಹಳ ಹೊತ್ತು ಇರುತ್ತೆ. ಜಗಳ ಮಾಡಿದ್ರೆ ಅವಳು ಎರಡು ನಿಮಿಷದಲ್ಲಿ ಎಲ್ಲ ಮರೆತು ಮೊದಲಿನ ಹಾಗಿರ್ತಾಳೆ. ನನಗೆ ಸಿಟ್ಟು ಹಾಗೆ ಇರುತ್ತೆ. ಆಗ ಅವಳು, ಬೇಕು ಬೇಕಂತಲೇ ಕಾಲು ತುಳಿಯೋದು, ಅಕ್ಕಪಕ್ಕದಲ್ಲೆ ಬೆಕ್ಕಿ ಹಾಗೆ ಓಡಾಡೋದೆಲ್ಲ ಮಾಡ್ತಾಳೆ. ನಾನು ಮುನಿ ಹಾಗೆ ಕೂತಿರಿ¤àನಿ. ನೀವು ಬರದೇ ಇದ್ದರೆ ಇಷ್ಟೊತ್ತಿಗೆ ಅದೇ ಸೀನ್‌ ಇರಿ¤ತ್ತು. 

ಪ್ರಥಮ: ಇಬ್ಬರೂ ಜಗಳ ಆಡ್ತಿದ್ದರೆ ನಾನು ರಾಜಿ ಮಾಡಿಸೋದು. ಎಷ್ಟೋಸಲ ಅಮ್ಮನ ಮೊಬೈಲ್‌ನಲ್ಲಿ ಅಪ್ಪನಿಗೆ ಸಾರಿ ಮೆಸೇಜ್‌ ಕಳಿಸಿದ್ದೀನಿ. ಅಪ್ಪ ಅಮ್ಮನೇ ಕಳಿಸಿದ್ದಾಳೆ ಅಂದೊRಳ್ತಾರೆ. ಅಪ್ಪ ಒಳಗೆಲ್ಲೋ ಇರುವಾಗ ಅವರ ಮೊಬೈಲ್‌ನಿಂದ ಅಮ್ಮನಿಗೇನೋ ಕಳೊÕàದು. ಅಮ್ಮನ ಹತ್ರ ಅಪ್ಪನನ್ನು ಸಪೋರ್ಟ್‌ ಮಾಡಿ ಮಾತಾಡೋದು. ಅಪ್ಪನ ಹತ್ರ ಅಮ್ಮನ ಬಗ್ಗೆ ಹೊಗಳ್ಳೋದು. ಅವರಿಬ್ಬರು ಮೊದಲಿನ ಹಾಗಾದ್ಮೇಲೆ ಸಮಾಧಾನ!

ಬರಹ: ಪ್ರಿಯಾ ಕೆರ್ವಾಶೆ; ಚಿತ್ರಗಳು: ಡಿ.ಸಿ. ನಾಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next