Advertisement

ಪ್ರಥಮ ಆಶಾಕಿರಣ

12:02 PM Dec 19, 2017 | |

ಮೊದಲ ಅನುಭವಗಳೆಲ್ಲವೂ ಮಧುರಗೀತೆಯೇ. ಚೊಚ್ಚಲವಾಗಿ ಮಾಡಿದ ಕೆಲಸ ಕೂಡ ಕ್ಲಾಸಿಕ್‌. ಆಗಸದ ನಕ್ಷತ್ರವನ್ನು ಕೈಯಲ್ಲಿ ಬಾಚಿಕೊಂಡೆನೆಂಬ ಅಪಾರ ಖುಷಿ. ಸ್ವಂತ ಕಾಲಿನ ಮೇಲೆ ನಿಲೆºàಕು, ಮತ್ತೂಬ್ಬರಿಗೆ ಭಾರವಾಗದಂತೆ ಜೀವಿಸಬೇಕು, ನನಗೆ ಬೇಕಾಗಿದ್ದನ್ನು ನಾನೇ ಗಳಿಸಬೇಕೆನ್ನುವ ಹಠ ಎಲ್ಲರೊಳಗೂ ಎದ್ದು ಕೂರುತ್ತದೆ. ಆದರೆ, ಅದೇ ಕೆಲಸ, ಮುಂದೆ ವೃತ್ತಿ ಆಗುವುದಿಲ್ಲ. ಮೊದಲ ಕೆಲಸವೆಂಬ ಮೈಲುಗಲ್ಲನ್ನಷ್ಟೇ ಅದು ನೆಟ್ಟು, ಒಂದಿಷ್ಟು ನೆನಪುಗಳನ್ನು ನಮ್ಮ ಬದುಕಿನ ಆಲ್ಬಮ್ಮಿಗೆ ಸೇರಿಸುತ್ತದೆ. ಈಗ ಆ ಹಾದಿಯನ್ನು ಹಿಂತಿರುಗಿ ನೋಡಿಗಾಗ, ಆ ಮೊದಲ ಕೆಲಸದ ಬೆವರು ಪನ್ನೀರಾಗಿ, ಹಾಗೆ ಪಡೆದ ಸಂಬಳ ಬದುಕಿನ “ಅತ್ಯುನ್ನತ ಗೌರವ’ವಾಗಿ ತೋರುತ್ತದೆ. ಇಲ್ಲೊಂದಿಷ್ಟು ತಾರೆಯರ, ಪ್ರಮುಖರು ತಮ್ಮ ಮೊದಲ ಕೆಲಸದ, ಮೊದಲು ಕೇಸೇರಿದ ಸಂಬಳದ ಕತೆಯನ್ನು ಹೇಳಿದ್ದಾರೆ…

Advertisement

ರಜನಿಕಾಂತ್‌ ಸೆಕ್ಯೂರಿಟಿಗಳು, ಕತ್ತು ಹಿಡಿದು ದಬ್ಬಿದ್ರು!
ದುನಿಯಾ ವಿಜಯ್‌, ನಟ
ಮೊದಲ ಕೆಲಸ: ಗಾರ್ಮೆಂಟ್ಸ್‌ನಲ್ಲಿ ಪ್ಯಾಕರ್‌
ಮೊದಲ ಸಂಬಳ: 750 ರೂ.

ಒಂದೂವರೆ ದಶಕಕ್ಕಿಂತಲೂ ಹಿಂದಿನ ಮಾತು. ಆಗ ನನಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ನಟನಾಗಬೇಕೆಂಬ ಆಸೆಯಿತ್ತು. ನಟನಾಗಲು ಬಾಡಿ ಬ್ಯುಲ್ಡ್‌ ಮಾಡಬೇಕಲ್ಲ? ಅದಕ್ಕಾಗಿ ಜಿಮ್‌ಗೆ ಹೋಗಲು ನನ್ನಲ್ಲಿ ಆಗ ಹಣವೇ ಇರಲಿಲ್ಲ. ಕಾಲಿ ಜೇಬಿನ ಫ‌ಕೀರನಾಗಿದ್ದೆ. ಗಾರ್ಮೆಂಟ್ಸ್‌ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಮೈಮುರಿಯುವಷ್ಟು ಕೆಲಸ ಮಾಡಿದರೆ, ತನ್ನಿಂತಾನೆ ಬಾಡಿ ಫಿಟ್‌ ಆಗುತ್ತೆಂಬ ಕಲ್ಪನೆ ನನ್ನದು. ಅದಕ್ಕಾಗಿ ನಾನು ಗಾರ್ಮೆಂಟ್ಸ್‌ನಲ್ಲಿ ಆಯ್ಕೆಮಾಡಿಕೊಂಡಿದ್ದು ಪ್ಯಾಕಿಂಗ್‌ ಸೆಕ್ಷನ್‌ ಅನ್ನು!

ಆಗ ನನಗೆ ಕೈಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ 750 ರೂ.! ಅದು ನನಗೆ ಸಾಲುತ್ತಲೇ ಇರಲಿಲ್ಲ. ದೇಹ ಫಿಟ್‌ ಆಗಲು ಸತ್ವಯುತ ಆಹಾರ ತಿನ್ನಬೇಕಿತ್ತು. ಹಾಲು, ಮೊಸರು, ಚಿಕನ್‌, ಮಟನ್‌… ಇವುಗಳನ್ನು ತಿಂದರೇನೇ ದೇಹ ಗಟ್ಟಿಮುಟ್ಟಾಗೋದು. ಹಾಗಾಗಿ, ನಾನು ರಾತ್ರಿ ಪಾಳಯದಲ್ಲೂ ಕೆಲಸ ಮಾಡತೊಡಗಿದೆ. ಹೆಚ್ಚುವರಿ ಸಂಬಳ ಸಿಗತೊಡಗಿತು. ತಿಂಗಳಿಗೆ 1 ಸಾವಿರ ರೂ. ದಾಟಿತು. 

ಅಲ್ಲಿ ಬಟ್ಟೆಯ ಬಂಡಲ್ಲುಗಳನ್ನು ಎತ್ತುವಾಗ ಆಯಾಸ ಆಗಿದ್ದೂ ಇದೆ. ಎಷ್ಟೋ ಸಲ ಹಸಿದ ಹೊಟ್ಟೆಯಲ್ಲಿಯೇ ಆ ಕೆಲಸ ಮಾಡಬೇಕಿತ್ತು. ಆದರೂ ನನ್ನೊಳಗಿನ ಸೆನ್ಸ್‌ ಹೇಳುತ್ತಿತ್ತು, “ಮುಂದೆ ಏನೋ ಮಹತ್ತರವಾದುದ್ದನ್ನೇ ಸಾಧಿಸುತ್ತೀಯ. ಅಲ್ಲಿಯ ವರೆಗೆ ಈ ಕಷ್ಟದ ಬೆಟ್ಟವನ್ನು ಗುದ್ದಿ ನೀನು ಪುಡಿಮಾಡಲೇಬೇಕು’ ಅಂತ. ನಾನು ಕೂಡ ಬಂದಿದ್ದೆಲ್ಲ ಬರಲಿ, ದೇವೌÅನೆ ಅಂದುಕೊಂಡೇ, ಆ ಕೆಲಸಗಳನ್ನು ಪ್ರೀತಿಸತೊಡಗಿದೆ. 

ಹಾಗೆ ದೇಹವನ್ನು ಫಿಟ್‌ ಮಾಡಿಕೊಳ್ಳುತ್ತಲೇ, ನಟನಾಗುವ ಆಸೆಯಿಂದ ರಜನಿಕಾಂತ್‌ ಅವರನ್ನು ನೋಡಬೇಕೆಂದು ಬೆಂಗಳೂರಿನಿಂದ ಚೆನ್ನೈಗೆ ಹೋಗಿದ್ದೆ. ಆದರೆ, ಅಲ್ಲಿ ರಜನಿಕಾಂತ್‌ರ ದರ್ಶನವೇ ಸಿಗಲಿಲ್ಲ. ಹತ್ತಾರು ಗಂಟೆ ಕಾಲ ಕಾದು ಸುಸ್ತಾದೆ. ಅವರ ಮನೆಯ ಸೆಕ್ಯುರಿಟಿಗಳು ನನ್ನ ಕತ್ತು ಹಿಡಿದು ಹೊರಗೆ ದಬ್ಬಿದರು. ಕಣ್ಣಲ್ಲಿ ದುಃಖ ಒತ್ತರಿಸಿಬಂತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಅಲ್ಲೊಂದು ಹೋಟೆಲ್ಲು ಕಾಣಿಸಿತು. ಅಲ್ಲಿ ಹೋದವನಿಗೆ ಸಿಕ್ಕಿದ್ದು, ತಟ್ಟೆಯಲ್ಲಿ ಯಾರೋ ಬಿಟ್ಟು ಹೋದ ಅನ್ನ! ಅದನ್ನು ತಿನ್ನಲು ಹೋದಾಗ, ಆ ಹೋಟೆಲ್‌ ಮಾಲೀಕ ನನಗೆ ಚೆನ್ನಾಗಿ ಥಳಿಸಿದ. ಬಾಯಿಗೆ ಬಂದಹಾಗೆ ಬಯ್ದ. ಸಪ್ಲೆ„ಯರ್‌ ಕೆಲಸ ಕೊಟ್ಟರೂ ಮಾಡುತ್ತೇನೆಂದು ಬೇಡಿದೆ. ಆತ ಮತ್ತೆ ಬಯ್ಯತೊಡಗಿದ.

Advertisement

ನನಗೆ ಹೀಗೆಲ್ಲ ಅವಮಾನ ಆಗುತ್ತಿರುವುದನ್ನು ಆ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಉತ್ತರ ಭಾರತದ ಹುಡುಗರು ಗಮನಿಸುತ್ತಿದ್ದರು. ಹೊರಗೆ ಬಂದು, ನನಗೆ ಸಮಾಧಾನ ಮಾಡಿದರು. ಬೆಂಗಳೂರಿಗೆ ಹೋಗುವಂತೆ ಬಸ್‌ ಚಾರ್ಜ್‌ ಹಣವನ್ನು ಕೊಟ್ಟರು. ಅಲ್ಲಿಂದ ಬಂದಮೇಲೆ ನನ್ನ ದುನಿಯಾನೇ ಬದಲಾಯ್ತು. ಅಂದು ಆ ಹೋಟೆಲ್‌ ಹುಡುಗರು ಬಸ್‌ಚಾರ್ಜ್‌ಗೆ ಕಾಸು ಕೊಡದೇ ಹೋಗಿದ್ದರೆ, ನಾನು ಇಂದು ದುನಿಯಾ ವಿಜಯ್‌ ಆಗುತ್ತಿರಲಿಲ್ಲ. ಅಲ್ಲೇ ಯಾವುದಾದರೂ ಹೋಟೆಲ್‌ನಲ್ಲಿ ಸಪ್ಲೆ„ಯರ್‌ ಆಗಿಯೋ ಇಲ್ಲವೇ ಟೇಬಲ್‌ ಒರೆಸಿಕೊಂಡೋ ಇರುತ್ತಿದ್ದೆನೇನೋ! ಈಗ ಆ ಹೋಟೇಲ್‌ ಹುಡುಗರು ಎಲ್ಲಿದ್ದಾರೋ, ಹೇಗಿದ್ದಾರೋ ಅನ್ನೋದು ನನಗೆ ಗೊತ್ತಿಲ್ಲ. ಈಗೇನಾದರೂ ಅವರು ಸಿಕ್ಕರೆ, ನಿಜವಾಗಿಯೂ ನಾನು ಅವರ ಕಾಲಿಗೆ ಬೀಳ್ತೀನಿ. ರಜನಿಕಾಂತ್‌ರನ್ನು ಅಂದೇನೋ ನೋಡಲು ಸಾಧ್ಯವಾಗಲಿಲ್ಲ, ಆದರೆ ಸಿನಿಮಾ ನಟನಾದ ಮೇಲೆ ಅವರ ಪಕ್ಕದಲ್ಲೇ ಕುಳಿತು ಊಟ ಮಾಡಿ, ಕಾಫಿ ಕುಡಿಯುವಷ್ಟು ಗುರುತಿಸಿಕೊಂಡೆ ಎನ್ನುವುದು ನನಗೆ ಹೆಮ್ಮೆ.

ನೇಕಾರಿಕೆ ಮಾಡಿ, ಕನಸು ಹೆಣೆದೆ…
– ನೆನಪಿರಲಿ ಪ್ರೇಮ್‌, ನಟ
ಮೊದಲ ಕೆಲಸ: ನೇಕಾರಿಕೆ
ಮೊದಲ ಸಂಬಳ: 12 ರೂ.

ಈಗೇನು ನಾನು ಗರಂ ಗರಂ, ಬಣ್ಣ ಬಣ್ಣದ ಬಟ್ಟೆ ತೊಡುತ್ತೀದ್ದೀನೋ, ಆಗೆಲ್ಲ ಕಣ್ಣಲ್ಲಿ ನೀರು ಜಿನುಗಿದಂತಾಗುತ್ತೆ. ಈ ಬಟ್ಟೆಗಳನ್ನೆಲ್ಲ ತಯಾರಿಸುವ ಕಷ್ಟ ನನಗೆ ಚೆನ್ನಾಗಿ ಗೊತ್ತು. ಏಕೆಂದರೆ, ನನ್ನ ಬದುಕಿನ ಆರಂಭದ ಕೆಲಸವೇ ನೇಕಾರಿಕೆ!

ಅದು 1986ರ ಆಸುಪಾಸು. ನಾನು ಆಗ ಶಾಲೆ ಕಲಿಯುತ್ತಿದ್ದೆ. ಓದಿನ ಜತೆ ನಾಲ್ಕು ಕಾಸನ್ನು ಜೇಬಿಗೆ ಸೇರಿಸಬೇಕೆಂಬ ಬಯಕೆ ಜೋರಾಗಿತ್ತು. ಹಾಗಾಗಿ, ಶಾಲೆಗೆ ರಜೆ ಕೊಡುವುದನ್ನೇ ಕಾಯುತ್ತಿದ್ದೆ. ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನೇಕಾರಿಕೆ ವೃತ್ತಿಗೆ ಸೇರಿಕೊಂಡೆ. ಮೊದಲ ವಾರ ಮಾಡಿದ ಕೆಲಸಕ್ಕೆ ಸಿಕ್ಕ ಸಂಭಾವನೆ ಕೇವಲ ಹನ್ನೆರೆಡು ರುಪಾಯಿ!

ಆ ಕಾಲಕ್ಕೆ ಹನ್ನೆರಡು ರುಪಾಯಿಯೇ ದೊಡ್ಡ ಮೊತ್ತ. ಮೊದಲ ಸಂಬಳವೆಂಬ ಕಾರಣಕ್ಕೆ ಅಪ್ಪನಿಗೆ ಆ ಹಣವನ್ನು ಕೊಡಲು ಹೋದೆ. ಆಗ ಅಪ್ಪ, “ಮೊದಲ ಬಾರಿಗೆ ನೀನು ಕಷ್ಟಪಟ್ಟು ಸಂಪಾದಿಸಿದ್ದೀಯ. ಈ ಹಣವನ್ನು ನಿಮ್ಮಮ್ಮನಿಗೆ ಕೊಡು, ಖುಷಿಪಡ್ತಾಳೆ’ ಅಂದರು. ಸೀದಾ ಅಮ್ಮನ ಬಳಿ ಹೋದೆ. ಆಕೆಯ ಕೈಯಲ್ಲಿ ನಾನು ಸಂಪಾದಿಸಿದ್ದ 12 ರೂ.ಗಳನ್ನು ಇಟ್ಟೆ. ಅವರ ಕಾಲಿಗೆ ನಮಸ್ಕರಿಸಿದೆ. ನನ್ನ ತಲೆಯನ್ನು ನೇವರಿಸಿ, ಅವರು ಎರಡು ರೂಪಾಯಿಯನ್ನು ನನಗೆ ವಾಪಸು ಕೊಟ್ಟು, ಹಣೆಗೊಂದು ಮುತ್ತಿಟ್ಟರು. ಅಮ್ಮ ಪ್ರೀತಿಯಿಂದ ಕೊಟ್ಟ ಆ ಎರಡು ರುಪಾಯಿಯನ್ನು ಕಣ್ಣಿಗೊತ್ತಿಕೊಂಡೆ.

ಹನ್ನೆರಡು ರೂ. ದುಡಿದಿದ್ದಾನೆ ಅಂತ ಅಷ್ಟರಲ್ಲಾಗಲೇ ದೊಡ್ಡ ಸುದ್ದಿಯಾಗಿ, ನನ್ನನ್ನು ಎಲ್ಲರೂ ಹೀರೋ ಮಾಡಿಬಿಟ್ಟರು. ಅಂದರೆ, ಈ ಬಣ್ಣದ ಜಗತ್ತಿಗೆ ಬರುವ ಮೊದಲೇ ನನ್ನನ್ನು ಹೀರೋ ಮಾಡಿದ್ದು ಆ ನೇಕಾರಿಕೆ ಕೆಲಸ. ಅದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಮನೆ ಬಾಗಿಲು ತಟ್ಟುತ್ತಿದ್ದೆ…
– ಗೋಲ್ಡನ್‌ ಸ್ಟಾರ್‌ ಗಣೇಶ್‌, ನಟ
ಮೊದಲ ಕೆಲಸ: ಮಾರ್ಕೆಟಿಂಗ್‌ ಸರ್ವೆಯರ್‌
ಮೊದಲ ಸಂಬಳ: 100 ರೂ.

ಕಾಲೇಜು ದಿನಗಳಲ್ಲಿ ನನಗೆ ಪಾಕೆಟ್‌ ಮನಿ ಬೇಕಿತ್ತು. ಏನಾದರೊಂದು ಕೆಲಸ ಮಾಡಲೇಬೇಕೆಂದು ಹಠಕ್ಕೆ ಬಿದ್ದಿತ್ತು ಮನಸ್ಸು. ನಾವು ನಾಲ್ಕೈದು ಗೆಳೆಯರು ಒಟ್ಟಿಗೆ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿದ್ದ ಮಾರ್ಕೆಟಿಂಗ್‌ ಕಚೇರಿಗೆ ಕೆಲಸಕ್ಕೆ ಹೋದೆವು. ಅಲ್ಲಿ ಮಾಡಿದ ಮೊದಲ ದಿನದ ಕೆಲಸಕ್ಕೆ ಸಿಕ್ಕ ಸಂಬಳ 100 ರೂ.! 

ನಾನು ಕಾಲೇಜು ಓದುವಾಗ, ಬೆಳಗ್ಗೆ ಎರಡು ತಾಸು, ಸಂಜೆ ಎರಡು ತಾಸು ಪಾರ್ಟ್‌ಟೈಮ್‌ ಕೆಲಸ ಮಾಡುತ್ತಿದ್ದೆ. ಆ ಕೆಲಸವೂ ಬಹಳ ಮಜಾ ಇತ್ತು. 18 ರಿಂದ 22 ವಯಸ್ಸಿನವರು, 25 ರಿಂದ 40 ವಯಸ್ಸಿನವರು ತಮ್ಮ ಮನೆಯಲ್ಲಿ ಯಾವೆಲ್ಲಾ ಪ್ರಾಡಕ್ಟ್ಗಳನ್ನು ಬಳಸುತ್ತಾರೆ ಎನ್ನುವುದನ್ನು ಸರ್ವೆ ಮಾಡಿ, ಪಟ್ಟಿಯೊಂದಿಗೆ ಮಾರ್ಕೆಟಿಂಗ್‌ ಕಚೇರಿಗೆ ಕೊಡುವುದು ನಮ್ಮ ಕೆಲಸ. ಆದರೆ, ಅನೇಕ ಸಲ ಹಾಗೆ ಪಡೆದ ಸಂಬಳವೂ ಸಾಲುತ್ತಿರಲಿಲ್ಲ. ಆಗ ನಾನು ತರಗತಿಗೆ ಬಂಕ್‌ ಮಾಡಿ, ಹೋಗಿ ದುಡಿಯುತ್ತಿದ್ದೆ. ಸಂಬಳ ದುಪ್ಪಟ್ಟ ಕೈಸೇರುತ್ತಿತ್ತು. 

ಆ ಕೆಲಸಕ್ಕೆ ನಾನು ಈಗಲೂ ಥ್ಯಾಂಕ್ಸ್‌ ಹೇಳ್ತೀನಿ. ಮಾರ್ಕೆಟಿಂಗ್‌ ಕೆಲಸದ ಬಳಿಕ ಹತ್ತಾರು ಕೆಲಸ ಮಾಡಿದ್ದೇನೆ. ನಮ್ಮೂರಲ್ಲಿ ಕೇಬಲ್‌ ಅನ್ನೂ ಹಾಕಿಕೊಂಡಿದ್ದೆ. ಮನೆಯೊಂದಕ್ಕೆ 25 ರುಪಾಯಿ ಫಿಕ್ಸ್‌ ಮಾಡಿದ್ದೆ. ಆಗೆಲ್ಲಾ ಕಡಿಮೆ ಚಾನೆಲ್ಲುಗಳಿದ್ದವು. ಆ ದುಡಿಮೆಯೂ ಚೆನ್ನಾಗಿತ್ತು. ಹೀಗೆ ಸಣ್ಣಪುಟ್ಟ ಕೆಲಸಗಳಿಂದಲೇ ಬದುಕು ಕಟ್ಟಿಕೊಳ್ಳುತ್ತಲೇ ಬಂದವನಿಗೆ, ಜನರು ಕೊಟ್ಟ ಪ್ರೀತಿ ದೊಡ್ಡದು. ಆ ದಿನಗಳನ್ನು ಎಂದಿಗೂ ಮರೆಯಲಾರೆ.

ಕೈಯಲ್ಲಿ ಎಂಜಲು ತಟ್ಟೆ, ಬಾಯಲ್ಲಿ ರಂಗಗೀತೆ!
– ಕೃಷ್ಣ ನಾಡಿಗ್‌, ಹಿರಿಯ ನಟ
ಮೊದಲ ಕೆಲಸ: ಕ್ಯಾಂಟೀನ್‌ನಲ್ಲಿ ಕ್ಲೀನರ್‌
ಮೊದಲ ಸಂಬಳ: 2 ರೂ.

ಅದು 1970. ಪಿಯುಸಿ ಮುಗಿಸಿದ್ದ ನನಗೆ, ಬೆಂಗಳೂರೆಂಬ ದೂರದ ಬೆಟ್ಟ ಬೆಳ್ಳನೆ ಕಾಣಿಸುತ್ತಿತ್ತು. ಮುಂದೆ ಓದುವುದಕ್ಕೆ ನಮ್ಮನೆಯ ಆರ್ಥಿಕ ಪರಿಸ್ಥಿತಿಯೂ ಅಷ್ಟೊಂದು ಚೆನ್ನಾಗಿರಲಿಲ್ಲ. ಬೆಂಗಳೂರಿನಿಂದ ಬಂದ ಒಬ್ಬರು ಬಂಧುಗಳೊಂದಿಗೆ, ಮೆಲ್ಲನೆ ನನ್ನ ಆಸೆ ತೋಡಿಕೊಂಡೆ; “ಬೆಂಗ್ಳೂರಿಗೆ ಬರಲಿಕ್ಕೆ ಭಯಂಕರ ಆಸೆಯಿದೆ. ಸಂಜೆ ಕಾಲೇಜಿನಲ್ಲಿ ಓದಿ¤àನಿ, ಹಗಲು ಏನಾದ್ರೂ ಕೆಲಸ ಮಾಡ್ತೀನಿ, ನನ್ನನ್ನು ಕರಕೊಂಡು ಹೋಗ್ತಿàರಾ?’. “ಆಯ್ತಪ್ಪ’ ಅಂತ ಅವರ ಒಪ್ಪಿಗೆ ಸಿಕ್ಕಿದ್ದೇ ತಡ, ಅವರೊಂದಿಗೆ ಮಾಯಾನಗರಿಯ ಬಸ್ಸೇರಿದ್ದೆ.

ಆ ಬಂಧುಗಳ ಮಗ ಕಿರ್ಲೋಸ್ಕರ್‌ ಫ್ಯಾಕ್ಟರಿಯಲ್ಲಿದ್ದ. ನನಗೆ ಕೆಲಸ ಕೊಡಿಸ್ತೀನಿ ಅಂತ ಒಂದು ಕಡೆ ಕರಕೊಂಡು ಹೋದ. ಫ್ಯಾಕ್ಟರಿಯ ಬಾಗಿಲಿನಲ್ಲಿ ನಿಲ್ಲಿಸಿ, “ಇಲ್ಲಿ ನಿಂತ್ಕೊ. ಇಲ್ಲೊಬ್ಬ ಸೂಪರ್‌ವೈಸರ್‌ ಬರುತ್ತಾರೆ. ಅವರ ಬಳಿ, ಪಿಯುಸಿ ಓದಿದ್ದೀನಿ ಅಂತ ಹೇಳ್ಬೇಡ. ಐದನೇ ಕ್ಲಾಸು ಓದಿದ್ದೀನಿ ಅಂತ ಹೇಳು. ನೀನು ಪಿಯುಸಿ ಓದಿದ್ದೀನಿ ಅಂದ್ರೆ ಜಾಸ್ತಿ ಓದಿದ್ದಾನೆ ಅಂತ ಅವ್ರು ಕೆಲಸ ಕೊಡೋಲ್ಲ’ ಅಂತ ಹೇಳಿಹೋದ.
ಅಲ್ಲಿ ನಾನೊಬ್ಬನೇ ಅಲ್ಲ. ನನ್ನಂತೆ ಕೆಲಸ ಕೇಳಿಕೊಂಡು, ಹಸಿದ ಹೊಟ್ಟೆಯಲ್ಲಿ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಹತ್ತಾರು ಮಂದಿ ನಿಂತಿದ್ದರು. ಕೊನೆಗೂ ಸೂಪರ್‌ವೈಸರ್‌ ಬಂದ. ನಾವೆಲ್ಲ, “ಸಾರ್‌ ಸಾರ್‌ ಸಾರ್‌’ ಎನ್ನುತ್ತಾ ಆತನ ಮುಂದೆ ಗೋಗರೆದೆವು. ಆತ ಒಬ್ಬೊಬ್ಬನನ್ನೇ “ನೀನ್‌ ಬಾರೋ, ಟ್ರಾನ್ಸ್‌ಫಾರ್ಮರ್‌ ಸೆಕ್ಷನ್‌ಗೆ ಹೋಗು; ನೀನು ಟೂಲ್‌ ಸೆಕ್ಷನ್‌ಗೆ ಹೋಗೋ; ನೀನು ಮೋಟಾರ್‌ ಸೆಕ್ಷನ್‌ಗೆ ಹೋಗೋ…’ ಅಂತೆಲ್ಲ ಕರೆದು, ಎಲ್ಲರನ್ನೂ ಒಂದೊಂದು ದಿಕ್ಕಿಗೆ ಕೆಲಸ ಕೊಟ್ಟು ಕಳುಹಿಸಿದ. ಆ ಕ್ಷಣದಲ್ಲಿ ನನ್ನ ಕಣ್ಣಿಗೆ ಆತ ದೇವರ ಅವತಾರಿ.

ನನಗೆ ಸಿಕ್ಕಿದ್ದು ಕ್ಯಾಂಟೀನ್‌ ಸೆಕ್ಷನ್‌. ಅಲ್ಲಿ ಕಾರ್ಮಿಕರು ತಿಂದುಂಡು ಬಿಟ್ಟ ಎಂಜಲು ತಟ್ಟೆಗಳನ್ನು ತೊಳೆಯುವ ಕೆಲಸ. ಅದನ್ನು ಖುಷಿಯಲ್ಲಿಯೇ ಮಾಡುತ್ತಿದ್ದೆ. ಒಂದೊಂದು ಲೋಟ, ಒಂದೊಂದು ತಟ್ಟೆಯನ್ನು ತೊಳೆಯುವಾಗಲೆಲ್ಲ ನನ್ನ ಬಾಯಿಂದ ರಂಗಗೀತೆಗಳು ಬರುತ್ತಿದ್ದವು. ರಾಗಬದ್ಧವಾಗಿ ಹಾಡುತ್ತಿದ್ದೆ. ನಾನು ಹಾಗೆ ಹಾಡುವುದನ್ನು ಭದ್ರಾಚಲಂ ನೋಡಿದರು. ಹವ್ಯಾಸಿ ನಾಟಕಕಾರರಾಗಿದ್ದ ಭದ್ರಾಚಲಂ, ಅಲ್ಲಿಯೇ ಕೆಲಸಕ್ಕಿದ್ದರು. ಅವರು “ಸಾಕ್ಷಾತ್ಕಾರ’, “ನಾಗರಹಾವು’, “ಸುಭದ್ರ ಕಲ್ಯಾಣ’ದಂಥ ನೆನಪಿನಲ್ಲುಳಿಯುವಂಥ ಸಿನಿಮಾಗಳಲ್ಲಿ ನಟಿಸಿದವರು. “ಆ ಹುಡುಗನ ಕೆಲಸ ಆದ ಮೇಲೆ ನನ್ನ ಬಳಿ ಕರಕೊಂಡು ಬಾ’ ಎಂದು ನನ್ನ ಬಳಿ ಕೈತೋರಿಸುತ್ತಾ, ಕ್ಯಾಂಟೀನ್‌ ಉಸ್ತುವಾರಿಗೆ ಹೇಳಿದರು.

ನನ್ನೊಳಗೆ ಸಿನಿಮಾದ ಪುಟ್ಟ ಹಣತೆ ಬೆಳಗಿದ್ದೇ ಆ ಕ್ಷಣದಲ್ಲಿ. ಅಂದಹಾಗೆ, ಅಲ್ಲಿ ಲೋಟ ತೊಳೆದಿದ್ದಕ್ಕೆ ನನಗೆ ಸಿಕ್ಕ ಸಂಬಳ 2 ರೂ.!

ಕಾರ್ಟೂನ್‌ ಹುಚ್ಚಿಗೆ ಅಲ್ಲೇ ಕುಮ್ಮಕ್ಕು ಸಿಕ್ಕಿತು…
– ಸತೀಶ್‌ ಆಚಾರ್ಯ, ವ್ಯಂಗ್ಯಚಿತ್ರಕಾರ
ಮೊದಲ ಕೆಲಸ: ಕ್ಲೈಂಟ್‌ ಎಕ್ಸಿಕ್ಯೂಟಿವ್‌
ಮೊದಲ ಸಂಬಳ: 2,500 ರೂ.

ನನ್ನ ಮೊದಲ ನೌಕರಿಗೂ ಈಗಿನ ವೃತ್ತಿಗೂ ಸಾಸಿವೆಯಷ್ಟೂ ಸಂಬಂಧವಿಲ್ಲ ಅನ್ನೋಕೆ ನಂಗೆ ಒಂಥರಾ ಖುಷಿ ಆಗುತ್ತೆ. ಎಂಬಿಎ ಮುಗಿಸಿ ಬದುಕಿನ ಒಳ್ಳೆಯ ದಿನಗಳನ್ನು ಮುಂಬೈಯಲ್ಲಿ ಹುಡುಕುತ್ತಾ, ಜೋಳಿಗೆಯಲ್ಲಿ ಕಾಟೂìನಿನ ಹುಚ್ಚನ್ನೂ ತುಂಬಿಕೊಂಡು ಹೊರಟವನಿಗೆ ಸಿಕ್ಕಿದ್ದು ಜಾಹೀರಾತು ಏಜೆನ್ಸಿ ಒಂದರಲ್ಲಿ ಕ್ಲೈಂಟ್‌ ಎಕ್ಸಿಕ್ಯೂಟಿವ್‌ ನೌಕರಿ. ಸಂಬಳ ಎರಡೂವರೆ ಸಾವಿರ ರೂಪಾಯಿ.

ಅಲ್ಲಿ ನನ್ನ ಕೆಲಸ ಏನಂದ್ರೆ ಕ್ರಿಯೇಟಿವ್‌ ತಂಡ ಹಾಗೂ ಕ್ಲೈಂಟ… ನಡುವೆ ಸೇತುವೆ ಆಗಿರೋದು. ಕೆಲವೊಮ್ಮೆ ಬರೀ ಕೊರಿಯರ್‌ ಬಾಯ… ಕೆಲಸ ಅಂದ್ರೂ ತಪ್ಪಲ್ಲ. ಕ್ರಿಯೇಟಿವ್‌ ತಂಡ ಮಾಡಿದ ಜಾಹೀರಾತು ಡಿಸೈನ್‌ ಅನ್ನು ಕ್ಲೈಂಟ್‌ಗೆ ತೋರಿಸೋದು ಹಾಗೂ ಅವರ ಪ್ರತಿಕ್ರಿಯೆಯನ್ನು ಏಜೆನ್ಸಿಯಲ್ಲಿ ಚರ್ಚೆ ಮಾಡೋದು. ಆದರೆ, ಅದೃಷ್ಟವಷಾತ್‌ ನನ್ನ ಕಾರ್ಟೂನು ಹುಚ್ಚಿಗೂ ಇಲ್ಲೇ ಒಂದು ಸಣ್ಣ ಕುಮ್ಮಕು ಸಿಕ್ಕಿತು. ಅಲ್ಲಿ ನಾನು ಹೆಚ್ಚು ಸಮಯ ಕಳೆಯುತ್ತಾ ಇದ್ದಿದ್ದು ಆರ್ಟ್‌ ವಿಭಾಗದಲ್ಲಿ, ಕಲಾವಿದರ ಜೊತೆ! ಆ ಕಲಾವಿದರ ಜೊತೆ ಕಾಲ ಕಳೆಯುತ್ತಾ ನನ್ನ ಬದುಕಿನ ನೈಜ ಸಂತೋಷ ಕಾರ್ಟೂನಿನಲ್ಲೇ ಅಡಗಿದೆ ಅನ್ನೋ ಸತ್ಯದ ಅರಿವಾಯಿತು. 

1. ಪೇಪರ್‌ ಹುಡುಗ ಕಲಾಂ
ವಿಜ್ಞಾನಿಯಾಗಿ, ಜನಮೆಚ್ಚಿದ ರಾಷ್ಟ್ರಪತಿಯಾಗಿ ಭಾರತೀಯರ ಗೌರವಕ್ಕೆ ಪಾತ್ರರಾದ ಕಲಾಂ ಅವರು ಬಾಲ್ಯದಲ್ಲಿ ಮನೆ ಮನೆಗೆ ಪೇಪರ್‌ ಹಾಕುವ ಪೇಪರ್‌ ಹುಡುಗನಾಗಿ ಕೆಲಸ ಮಾಡಿದ್ದರು. ರಾಮೇಶ್ವರಂನ ಬೀದಿಬೀದಿಯಲ್ಲಿ ಕಲಾಂ, ದಿನಪತ್ರಿಕೆಗಳನ್ನು ಹಿಡಿದು ಓಡಾಡಿದ್ದರು.

2. ಗಣಿಯಲ್ಲಿ ಬಚ್ಚನ್‌!
ಬಾಲಿವುಡ್‌ನ‌ ಆ್ಯಂಗ್ರಿ ಯಂಗ್‌ಮ್ಯಾನ್‌ ಅಮಿತಾಭ್‌ ಬಚ್ಚನ್‌ ಅವರ ಮೊದಲ ಕೆಲಸದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. 1962ರಲ್ಲಿ ಕಲ್ಕತ್ತಾದ ಕಲ್ಲಿದ್ದಲು ಗಣಿಯೊಂದರಲ್ಲಿ ಶಿಪ್ಪಿಂಗ್‌ ಎಕ್ಸಿಕ್ಯೂಟಿವ್‌ ಆಗಿ 7-8 ವರ್ಷಗಳ ಕಾಲ ಕೆಲಸ ಮಾಡಿದ್ದರು. ಆಗ ಅವರ ಮೊದಲ ಸಂಬಳ 500 ರೂ.!

3. ಕೂಲಿ ಆಗಿದ್ದ ರಜನಿ!
ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ನಟರಾಗುವ ಮುಂಚೆ ಬೆಂಗಳೂರಿನ ಬಿಟಿಎಸ್‌ ಬಸ್‌ ಕಂಡಕ್ಟರ್‌ ಆಗಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಅವರು ಅದಕ್ಕಿಂತಲೂ ಮುಂಚೆ ಕೂಲಿಯಾಗಿ, ಕಾಪೆìಂಟರ್‌ ಆಗಿಯೂ ಕೆಲಸ ಮಾಡಿದ್ದರು. 

4. ಅಡುಗೆ ಮಾಡ್ತಿದ್ದ ಅಕ್ಷಯ್‌
ಮಾರ್ಷಲ್‌ ಆರ್ಟ್‌ ಕಲಿಯಲು ಥಾಯ್ಲೆಂಡ್‌ಗೆ ಹೋದಾಗ ಅಕ್ಷಯ್‌ ಕುಮಾರ್‌ ಬ್ಯಾಂಗಾrಕ್‌ನ ರೆಸ್ಟೋರೆಂಟ್‌ನಲ್ಲಿ ಬಾಣಸಿಗರಾಗಿ (ಶೆಫ್) ಆಗಿ ಕೆಲಸ ಮಾಡಿದ್ದರು. ಆಗ ಅವರ ಸಂಬಳ 1500 ರೂ.! ಆನಂತರ ಕಲ್ಕತ್ತಾದಲ್ಲಿ 1 ವರ್ಷ ಜವಾನ, ಢಾಕಾದಲ್ಲಿ 6 ತಿಂಗಳು ಸೇಲ್ಸ್‌ಮ್ಯಾನ್‌, ದೆಹಲಿಯಲ್ಲಿ ಜ್ಯುವೆಲರಿ ವ್ಯಾಪಾರಿ, ಮುಂಬೈನಲ್ಲಿ ಮಾರ್ಷಿಯಲ್‌ ಆರ್ಟ್ಸ್ ಟೀಚರ್‌ ಆಗಿಯೂ ಕೆಲಸ ಮಾಡಿದ್ದರು.

5. ಮೋದಿ ಕೊಟ್ಟ ಗರಂ ಚಾಯ್‌
ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅವರು ಗುಜರಾತ್‌ನ ವಡ್ನಾಗರ್‌ ರೈಲ್ವೆ ಸ್ಟೇಷನ್‌ನಲ್ಲಿ ಚಹಾ ಮಾರುತ್ತಿದ್ದ ತಂದೆಗೆ ಸಹಾಯಕರಾಗಿದ್ದರು. ನಂತರ ಸೋದರನ ಜೊತೆ ಸೇರಿ ಬಸ್‌ ನಿಲ್ದಾಣದ ಬಳಿ ಟೀ ಸ್ಟಾಲ್‌ ಕೂಡ ತೆರೆದಿದ್ದರು.

6. ಸೆಕ್ಯುರಿಟಿ ಸಿದ್ದಿಕಿ
ಹಿಂದಿ ನಟ ನವಾಜುದ್ದೀನ್‌ ಸಿದ್ದಿಕಿ ನೋಯ್ಡಾದ ಗೊಂಬೆ ಫ್ಯಾಕ್ಟರಿಯೊಂದರ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆಯಲ್ಲಿ ತೂಕಡಿಸುವಾಗ, ಗೇಟ್‌ ಹೊರಗಡೆ ಆರಾಮಾಗಿ ವಿಶ್ರಾಂತಿ ಪಡೆಯುವಾಗ ಹಲವಾರು ಬಾರಿ ಮಾಲೀಕರ ಕೈಲಿ ಸಿಕ್ಕಿ ಬಿದ್ದು, ಬೈಸಿಕೊಂಡಿದ್ದರಂತೆ. ನಾನು ಒಳ್ಳೆಯ ವಾಚ್‌ಮ್ಯಾನ್‌ ಆಗಿರಲಿಲ್ಲ ಎಂದು ಅವರೇ ಒಪ್ಪಿಕೊಳ್ಳುತ್ತಾರೆ.

7. ಟಿಕೆಟ್‌ ಮಾರುತ್ತಿದ್ದ ಶಾರುಖ್‌
ಶಾರುಖ್‌ ಖಾನ್‌: “ಬಾಲಿವುಡ್‌ ಬಾದ್‌ಶಾ’ ಎಂದು ಕರೆಸಿಕೊಳ್ಳುವ ಮುಂಚೆ ಶಾರೂಖ್‌ ಖಾನ್‌ರ ಬದುಕು ರಾಜರಂತೆ ಇರಲಿಲ್ಲ. ಸಿನಿಮಾದಲ್ಲಿ ಹೀರೋ ಆಗೋ ಮೊದಲು ಅವರು ಥಿಯೇಟರ್‌ನಲ್ಲಿ ಟಿಕೆಟ್‌ ಮಾರುತ್ತಿದ್ದರು. ಆಗ ಅವರ ಮೊದಲ ಸಂಬಳ ಕೇವಲ 50 ರೂಪಾಯಿ. ಆ ದುಡ್ಡಿಂದ ಅವರೇನು ಮಾಡಿದ್ರು ಗೊತ್ತಾ? ತಮ್ಮ ಕನಸಿನ ತಾಜಮಹಲ್‌ ನೋಡೋಕೆ ಆಗ್ರಾಕ್ಕೆ ರೈಲಿನಲ್ಲಿ ಹೊರಟೇಬಿಟ್ರಾ!

8. ರೈಲಲ್ಲಿ ಧೋನಿ “ಇನ್ನಿಂಗ್ಸ್‌’
ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಯ ಮೊದಲ ಕೆಲಸ ಅಷ್ಟೊಂದು ಕೂಲ್‌ ಆಗಿರಲಿಲ್ಲ. ಖರಗ್‌ಪುರ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್‌ ಕಲೆಕ್ಟರ್‌ ಆಗಿ ಉದ್ಯೋಗಕ್ಕೆ ಸೇರಿದ ಧೋನಿ, ರೈಲಿಂದ ರೈಲಿಗೆ ಓಡಾಡಿಯೇ ಸುಸ್ತಾಗುತ್ತಿದ್ದರು.

(ನಿಮ್ಮ ಮೊದಲ ಕೆಲಸ, ಸಂಬಳದ ಕತೆಯನ್ನು 60-80 ಪದಗಳಲ್ಲಿ ಹೆಣೆದು, ನಮಗೆ ಕಳುಹಿಸಿ) 

ಮಾಹಿತಿ ನೆರವು: ವಿಜಯ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next