Advertisement

ಆಶಿಷ್‌ ಕುಮಾರ್‌ಗೆ ಮೊದಲ ಅಂತಾರಾಷ್ಟ್ರೀಯ ಚಿನ್ನ

11:35 PM Jul 27, 2019 | Team Udayavani |

ಬ್ಯಾಂಕಾಕ್‌: ಭಾರತದ ಬಾಕ್ಸರ್‌ ಆಶಿಷ್‌ ಕುಮಾರ್‌ ಅಂತಾರಾಷ್ಟ್ರೀ ಯ ಮಟ್ಟದ ಮೊದಲ ಚಿನ್ನದ ಪದಕ ಜಯಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ “ಥಾಯ್ಲೆಂಡ್‌ ಓಪನ್‌ ಇಂಟರ್‌ನ್ಯಾಶನಲ್‌ ಬಾಕ್ಸಿಂಗ್‌’ ಕೂಟದಲ್ಲಿ ಅವರು ಈ ಸಾಧನೆ ಮಾಡಿದರು.

Advertisement

ಕೂಟದ ಅಂತಿಮ ದಿನವಾದ ಶನಿವಾರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಕೊರಿಯಾದ ಕಿಮ್‌ ಜಿಂಜೆ ಅವರನ್ನು 5-0 ಅಂತರದಿಂದ ಮಣಿಸುವ ಮೂಲಕ ಆಶಿಷ್‌ ತಮ್ಮ ಕ್ರೀಡಾ ಬದುಕಿನ ಮಹೋನ್ನತ ಸಾಧನೆಗೈದರು. 2 ತಿಂಗಳ ಹಿಂದಷ್ಟೇ ಅವರು “ಇಂಡಿಯಾ ಓಪನ್‌’ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಉಳಿದಂತೆ ಜರೀನ್‌ ನಿಖತ್‌ (51 ಕೆಜಿ),ದೀಪಕ್‌ (49 ಕೆಜಿ), ಮೊಹಮ್ಮದ್‌ ಹುಸಮುದ್ದೀನ್‌ (56 ಕೆಜಿ), ಬೃಜೇಶ್‌ ಯಾದವ್‌ (81 ಕೆಜಿ) ಅವರೆಲ್ಲ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು. ಈ ಕೂಟದಲ್ಲಿ ಭಾರತ ಒಟ್ಟು ಒಂದು ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಜಯಿಸಿತು.


Advertisement

Udayavani is now on Telegram. Click here to join our channel and stay updated with the latest news.

Next