Advertisement

ಜೆಎನ್ ಯು ಕ್ಯಾಂಪಸ್ ಘರ್ಷಣೆ: ಮೊದಲ ಎಫ್ ಐಆರ್ ದಾಖಲು

10:04 AM Jan 07, 2020 | keerthan |

ಹೊಸದಿಲ್ಲಿ: ಇಲ್ಲಿನ ಪ್ರತಿಷ್ಠಿತ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರವಿವಾರ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೊದಲ ಎಫ್ ಐ ಆರ್ ದಾಖಲಾಗಿದೆ.

Advertisement

ರವಿವಾರ ರಾತ್ರಿ ಜೆಎನ್ ಯು ನಲ್ಲಿ ನಡೆದ ಘರ್ಷಣೆಯ ಕುರಿತು ನಾವು ಎಫ್ ಐಆರ್ ದಾಖಲಿಸಿದ್ದೇವೆ. ಸಾಮಾಜಿಕ ಜಾಲತಾಣಗಳು ಮತ್ತು ಸಿಸಿಟಿವಿ ಕ್ಯಾಮರಾಗಳ ವಿಡಿಯೋಗಳನ್ನು ಆಧರಿಸಿ ನಾವು ದೂರು ದಾಖಲಿಸಿದ್ದೇವೆ ಎಂದು ನೈರುತ್ಯ ದೆಹಲಿಯ ಡಿಸಿಪಿ ದೇವೆಂದ್ರ ಆರ್ಯ ಹೇಳಿದ್ದಾರೆ.

ರವಿವಾರ ರಾತ್ರಿ ಜೆಎನ್ ಯು ಕ್ಯಾಂಪಸ್ ಒಳಗೆ ನುಗ್ಗಿದ್ದ ಹಲವು ಮುಸುಕುಧಾರಿಗಳು ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆಗೆ ಕ್ಯಾಂಪಸ್ ನ ಆಸ್ತಿ ಪಾಸ್ತಿ ಹಾನಿ ಮಾಡಲಾಗಿದೆ.

ಘರ್ಷಣೆಯಲ್ಲಿ ಗಾಯಗೊಂಡಿದ್ದ ಸುಮಾರು 23 ವಿದ್ಯಾರ್ಥಿಗಳು ಇಂದು ಮುಂಜಾನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next