Advertisement
ಚಂದ್ರನ ಮಣ್ಣನ್ನು ಚೀನ 2020ರಲ್ಲಿ ಮೊದಲ ಬಾರಿ ಭೂಮಿಗೆ ತಂದಿತ್ತು. ಈಗ 2ನೇ ಬಾರಿ ಈ ಸಾಹಸಕ್ಕೆ ಕೈ ಹಾಕಿದೆ. ನೌಕೆ ಚಂದ್ರನ ಮೇಲ್ಮೆ„ ಮಾದರಿಗಳನ್ನು ಸಂಗ್ರಹಿಸಿ ಮರಳಲಿದೆ. ಇದರಲ್ಲಿ ಯಶಸ್ವಿಯಾದರೆ ಚಂದ್ರನ ಮತ್ತೂಂದು ಪಾರ್ಶ್ವದಿಂದ ಮಾದರಿ ತಂದ ಮೊದಲ ದೇಶ ಎಂಬ ಖ್ಯಾತಿಗೆ ಚೀನ ಪಾತ್ರವಾಗಲಿದೆ.
ನೌಕೆಯಲ್ಲಿರುವ ಲ್ಯಾಂಡರ್‌ನಲ್ಲಿ ಮಾದರಿ ಸಂಗ್ರಹಿಸುವ ರೋಬೋವನ್ನು ಅಳವಡಿಸಲಾಗಿದೆ. ಇದು 3 ದಿನಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಸುಮಾರು 2 ಕಿ.ಗ್ರಾಂಗಳಷ್ಟು ಮಾದರಿಯನ್ನು ಸಂಗ್ರಹಿಸಲಿದೆ. ಬಳಿಕ ರಿಟರ್ನರ್‌ನ ಸಹಾಯದಿಂದ ಭೂಮಿಗೆ ಮರಳ ಲಿದೆ. ಈ ಭಾಗದಲ್ಲಿ ಚಂದ್ರನ ಮೇಲ್ಮೆ„ ಹೆಚ್ಚಿನ ಉಬ್ಬುತಗ್ಗುಗಳನ್ನು ಹೊಂದಿದೆ. ಭೂಮಿ ಹಾಗೂ ಚಂದ್ರನ ಪರಿಭ್ರಮಣ ಅವಧಿ ಸಮನಾಗಿರುವ ಕಾರಣ ಭೂಮಿಗೆ ಚಂದ್ರನ ಒಂದು ಪಾರ್ಶ್ವ ಮಾತ್ರ ಕಾಣಿಸುತ್ತದೆ. ಯೋಜನೆಯ ಲಾಭವೇನು?
Related Articles
ಚಂದ್ರನ ಮೇಲ್ಮೆ„ಯಲ್ಲಿ ರುವ ಖನಿಜ ಸಂಪತ್ತಿನ ಮಾಹಿತಿ ಸಿಗಬಹುದು.
ಚಂದ್ರನ ಮೇಲೆ ನೀರಿನ ಅಂಶ ಇರುವ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಹುದು.
2030ರ ವೇಳೆಗೆ ಚಂದ್ರನ ಮೇಲೆ ನಡೆ ಯುವ ಚೀನದ ಕನಸಿಗೆ ಪುಷ್ಠಿ ಸಿಗಬಹುದು.
Advertisement
ಈವರೆಗೆ ಚಂದ್ರನಿಂದ ಮಾದರಿ ತಂದ ದೇಶಗಳು1970 : ರಷ್ಯಾ – 101 ಗ್ರಾಂ
1972 : ರಷ್ಯಾ – 55 ಗ್ರಾಂ
1976 : ರಷ್ಯಾ – 170 ಗ್ರಾಂ
1999 : ಅಮೆರಿಕ – 1 ಗ್ರಾಂ
2003 : ಜಪಾನ್ – 1 ಗ್ರಾಂ
2014 : ಜಪಾನ್ – 5.4 ಗ್ರಾಂ
2016 : ಅಮೆರಿಕ – 121 ಗ್ರಾಂ
2020 : ಚೀನ – 1.7 ಕಿ.ಗ್ರಾಂ