Advertisement
1916 ಶಾಲೆ ಆರಂಭಸಮರ್ಪಕ ಸೌಲಭ್ಯಗಳು, ಐಟಿ ಮತ್ತು ಅಟೋಮೊಬೈಲ್ ಕಲಿಕೆಗೆ ಅವಕಾಶ
Related Articles
1975ರಲ್ಲಿ ಸರಕಾರಕ್ಕೆ ವಹಿಸಿಕೊಡುವ ತನಕ ಬೋರ್ಡಿನ ಅಧೀನದಲ್ಲೇ ಇದ್ದ ಹಿನ್ನೆಲೆಯಲ್ಲಿ ಬೋರ್ಡ್ ಹೈಸ್ಕೂಲ್ ಹೆಸರಿನಲ್ಲೇ ಈ ಶಾಲೆ ಪ್ರಖ್ಯಾತವಾಯಿತು. ರಾಯ ಬಹದ್ದೂರ್ ಎಂ. ರಘುನಾಥ ರಾಯರು ಈ ಶಾಲೆಯ ಮೊದಲ ಮುಖ್ಯೋಪಾಧ್ಯಾಯರು. ಅನಂತರದಲ್ಲಿ ಅನೇಕ ಪ್ರಸಿದ್ಧ ಮುಖ್ಯಶಿಕ್ಷಕರು, ಶಿಕ್ಷಕರು ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ
Advertisement
ತಾಲೂಕು ಕ್ರೀಡಾಂಗಣಶಾಲೆಗೆ ಸಂಬಂಧಪಟ್ಟಂತೆ ವಿಸ್ತಾರದ ತಾಲೂಕು ಕ್ರೀಡಾಂಗಣ ದೊಡ್ಡ ಹೆಸರನ್ನು ಪಡೆದಿದೆ. ಸಾರ್ವಜನಿಕರು ಸರಕಾರ ಹಾಗೂ ತಾಲೂಕು ಅಭಿವೃದ್ಧಿ ಸಮಿತಿ ಒಟ್ಟುಗೂಡಿ 35 ಸಾವಿರ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಸದ್ಯಕ್ಕೆ ಕ್ರೀಡಾಂಗಣ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಅಧೀನದಲ್ಲಿ ತಾಲೂಕು ಕ್ರೀಡಾಂಗಣವಾಗಿ ಗುರುತಿಸಿದ್ದು, ಅದನ್ನು ಮರಳಿ ಶಾಲೆಯ ಸ್ವಾಧೀನಕ್ಕೆ ತರುವ ಪ್ರಯತ್ನಗಳು ನಡೆದಿವೆ. ಆರಂಭದಲ್ಲಿ 236 ವಿದ್ಯಾರ್ಥಿಗಳಿದ್ದ ಶಾಲೆ ಬೆಳ್ಳಿಹಬ್ಬವನ್ನು ಆಚರಿಸುವ ಸಮಯಕ್ಕೆ 400, ಸುವರ್ಣ ಮಹೋತ್ಸವವನ್ನು ಆಚರಿಸುವ ಸಮಯಕ್ಕೆ 800ನ್ನು ಮುಟ್ಟಿತ್ತು. 16 ವರ್ಷಗಳ ಹಿಂದೆ ಈ ಶಾಲೆಯಲ್ಲಿ 2 ಸಾವಿರ ವಿದ್ಯಾರ್ಥಿಗಳು ಎ ಯಿಂದ ಎಚ್ ಸೆಕ್ಷನ್ ತನಕ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗ ಶಾಲೆಯ 8-10 ಪ್ರೌಢಶಾಲಾ ವಿಭಾಗದಲ್ಲಿ 654 ವಿದ್ಯಾರ್ಥಿಗಳು ಹಾಗೂ 16 ಮಂದಿ ಶಿಕ್ಷಕರಿದ್ದಾರೆ.
ಶಾಲೆಯ ಆವರಣಕ್ಕೆ ಸಮರ್ಪಕ ಕಾಂಪೌಂಡ್ ನಿರ್ಮಾಣ ಆಗಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಒಂದು ಭಾಗದ ಕಟ್ಟಡದಲ್ಲಿ ಬಿರುಕು ಬಿಟ್ಟಿದೆ. 650 ಮಕ್ಕಳು ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಆಗಬೇಕು, ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಬೇಕು ಎನ್ನುವುದು ಇಲ್ಲಿನ ಪ್ರಮುಖ ಬೇಡಿಕೆ. ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ, ಶ್ರೇಷ್ಠ ವಿದ್ವಾಂಸ ಡಾ| ಬಿ.ಎ. ವಿವೇಕ್ ರೈ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಂತಹ ಸಾಧಕರೊಂದಿಗೆ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಗೋವಿಂದ ಭಟ್, ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಎನ್. ಮುತ್ತಪ್ಪ ರೈ ಸಹಿತ ಈ ಭಾಗದ ಅನೇಕ ಸಾಧಕರು, ಗಣ್ಯರು ಬೋರ್ಡ್ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದವರು. ಪಾರಂಪರಿಕ ಕಟ್ಟಡ
ಪುತ್ತೂರು ಪರಿಸರದ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ಏಕೈಕ ವಿದ್ಯಾಕೇಂದ್ರವಾಗಿದ್ದ ಶಾಲೆಯ ಕಟ್ಟಡ ಸಾಂಪ್ರದಾಯಿಕ ವಿಶಿಷ್ಟ ವಿನ್ಯಾಸವು ಪಾರಂಪರಿಕೆ ಮಹತ್ವ ಪಡೆದಿದ್ದು, ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಪಾರಂಪರಿಕೆ ಕಟ್ಟಡ ಗೌರವವನ್ನು ನೀಡಿ ಫಲಕವನ್ನು ಅಳವಡಿಸಿದೆ. ಪೊಲೀಸ್ ಕೆಡೆಟ್: ಹೆಗ್ಗಳಿಕೆ
ಶಾಲೆ ಅಕ್ಷರ ದಾಸೋಹ, ಪ್ರಥಮ ಸರಕಾರಿ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್, ಶೌಚಾಲಯ ಸಹಿತ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡಿದೆ. ಐಟಿ ಮತ್ತು ಅಟೋಮೊಬೈಲ್ ವಿಷಯವನ್ನು ಐಚ್ಛಿಕವಾಗಿ ಕಲಿಯುವ ಅವಕಾಶ ಇಲ್ಲಿನ ವಿಶೇಷ. ಇಲಾಖೆಗಳಿಂದ ನಡೆಯುವ ವಿವಿಧ ಇಲಾಖೆ ಪರೀಕ್ಷೆಗಳಿಗೆ ಈ ಶಾಲೆ ಕೇಂದ್ರವಾಗಿದೆ. ಪುತ್ತೂರಿನ ಪ್ರಥಮ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಆರಂಭಿಸಿದ ಹೆಗ್ಗಳಿಕೆ, ಎನ್ಸಿಸಿ ವ್ಯವಸ್ಥೆ ಶಾಲೆಯಲ್ಲಿದೆ. ಸತತ 7 ವರ್ಷಗಳಿಂದ ಎಸೆಸೆಲ್ಸಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆಯ ಸರಕಾರಿ ಪ್ರೌಢ ಶಾಲೆಗಳಲ್ಲೇ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ಆಂಗ್ಲ ಮಾಧ್ಯಮವನ್ನು ಆರಂಭಿಸಿದ ಹೆಗ್ಗಳಿಕೆಯನ್ನು ಈ ಶಾಲೆ ಹೊಂದಿದೆ. ಅನೇಕ ಪ್ರಥಮಗಳ ಹೆಗ್ಗಳಿಕೆಯನ್ನು ಹೊಂದಿದ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್, ಈಗಿನ ಸರಕಾರಿ ಪ್ರೌಢಶಾಲೆ ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದೆ. ರಾಜ್ಯದಲ್ಲಿಯೇ ದ್ವಿತೀಯ ದೊಡ್ಡ ಸರಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಒಂದಷ್ಟು ಸೌಕರ್ಯ, ಶಿಕ್ಷಕರ ನೇಮಕಾತಿ ಆಗಬೇಕಿದೆ.
-ಮರ್ಸಿ ಮಮತಾ ಮೋನಿಸ್
ಮುಖ್ಯ ಶಿಕ್ಷಕರು, ಕೊಂಬೆಟ್ಟು ಸರಕಾರಿ ಪ್ರೌಢಶಾಲೆ ಶತಮಾನದ ಶಾಲೆ ಹೆಗ್ಗಳಿಕೆಯ ಕೊಂಬೆಟ್ಟು ಶಾಲೆ ಅದೇ ರೀತಿಯ ಸಾಧನೆಗಳೊಂದಿಗೆ ಗುರುತಿಸಿಕೊಂಡಿದೆ. ಇಲ್ಲಿನ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಗುರುತಿಸಿಕೊಮಡವರು ಹಾಗೂ ಗುರುತಿಸಿಕೊಳ್ಳುತ್ತಿದ್ದಾರೆ. ಶಾಲೆ ಹಾಗೂ ವಿದ್ಯಾರ್ಥಿಗಳ ಪ್ರಗತಿಯ ನಿಟ್ಟಿನಲ್ಲಿ ಪೂರಕ ಪ್ರಗತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. -ಪಿ.ಜಿ. ಜಗನ್ನಿವಾಸ್ ರಾವ್
ಎಸ್ಡಿಎಂಸಿ ಕಾರ್ಯಾಧ್ಯಕ್ಷರು ಹಾಗೂ ಹಿರಿಯ ವಿದ್ಯಾರ್ಥಿ – ರಾಜೇಶ್ ಪಟ್ಟೆ