Advertisement

2025ರಲ್ಲಿ 200 ಕಮೊವ್‌ ತುಮಕೂರಲ್ಲಿ ಲೋಕಾರ್ಪಣೆ

10:03 AM Feb 08, 2020 | Hari Prasad |

ಲಕ್ನೋ: ಭಾರತ ಮತ್ತು ರಷ್ಯಾದ ಸಹಯೋಗದೊಂದಿಗೆ ತಯಾರಾಗಲಿರುವ ಕಮೊವ್‌ ಹೆಲಿಕಾಪ್ಟರ್‌ಗಳಲ್ಲಿ ಮೊದಲ ಬ್ಯಾಚ್‌ನ ಹೆಲಿಕಾಪ್ಟರ್‌ಗಳು 2025 ರಲ್ಲಿ ಲೋಕಾರ್ಪಣೆಗೊಳ್ಳಲಿವೆ. ಲಕ್ನೋದಲ್ಲಿ ನಡೆಯುತ್ತಿರುವ ‘ಡಿಫೆನ್ಸ್‌ ಎಕ್ಸ್‌ಪೋ-2020’ರ ಸಂದರ್ಭದಲ್ಲಿ ಇಂಡೋ-ರಷ್ಯನ್‌ ಹೆಲಿಕಾಪ್ಟರ್ಸ್‌ ಸಂಸ್ಥೆಯ ಸಿಇಒ ಎನ್‌.ಎಂ. ಶ್ರೀನಾಥ್‌ ತಿಳಿಸಿದ್ದಾರೆ.

Advertisement

ಮೊದಲ ಬ್ಯಾಚ್‌ನಲ್ಲಿ 7,400 ಕೋಟಿ ರೂ. ವೆಚ್ಚದಲ್ಲಿ ಕಮೊವ್‌ನ ‘226 ಟಿ ಮಾದರಿ’ಯ 200 ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ 60 ಹೆಲಿಕಾಪ್ಟರ್‌ಗಳು ಭಾರತಕ್ಕೆ, 140 ಹೆಲಿಕಾಪ್ಟರ್‌ಗಳು ರಷ್ಯಾಕ್ಕೆ ಹಸ್ತಾಂತರಗೊಳ್ಳಲಿವೆ. ರಷ್ಯಾಕ್ಕಾಗಿ ಉತ್ಪಾದನೆಯಾಗುವ ಕಾಪ್ಟರ್‌ಗಳು ತುಮಕೂರಿನಲ್ಲಿರುವ ಉತ್ಪಾದನ ಘಟಕದಲ್ಲೇ ತಯಾರಾಗಲಿವೆ.

ಎಚ್‌ಎಎಲ್‌ಗೆ ನವೀಕರಣ ಪತ್ರ: ‘ಉಡಾನ್‌’ ಯೋಜನೆಗಾಗಿ ಎಚ್‌ಎಎಲ್‌ ಹೊಸದಾಗಿ ತಯಾರಿಸಿದ್ದ ಡಾರ್ನಿಯರ್‌-228 ನಾಗರಿಕ ವಿಮಾನಕ್ಕೆ ‘ನವೀಕರಣ ಪ್ರಮಾಣ ಪತ್ರ’ ಸಿಕ್ಕಿದೆ. ಡಾರ್ನಿಯರ್‌ನ ತೂಕ 6,200 ಕೆ.ಜಿ. ಇದ್ದಿದ್ದರಿಂದ ಅದರ ಹಾರಾಟಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಹಾಗಾಗಿ ಎಚ್‌ಎಲ್‌ಎಲ್‌, ಅದರ ತೂಕವನ್ನು 5,700 ಕೆ.ಜಿ.ಗೆ ಇಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next