ದಕ್ಷಿಣ ಕೊರಿಯಾ 4 ಬಾರಿಯ ಚಾಂಪಿಯನ್ ಎನ್ನುವಾಗ ಭಾರತದ ಗೆಲುವಿನ ಮೌಲ್ಯ ಅರಿವಿಗೆ ಬರುತ್ತದೆ. ಇದೊಂದು ಮಹೋನ್ನತ ಸಾಧನೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಜೇತ ತಂಡವನ್ನು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅಭಿನಂದಿಸಿದ್ದಾರೆ. ತಂಡದ ಎಲ್ಲ ಆಟಗಾರರಿಗೂ ಹಾಕಿ ಇಂಡಿಯಾ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.
Advertisement
ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 22ನೇ ನಿಮಿಷದಲ್ಲಿ ಅನ್ನು ಪೆನಾಲ್ಟಿ ಕಾರ್ನರ್ ಮೂಲಕ ಖಾತೆ ತೆರೆದರು. ಮೂರೇ ನಿಮಿಷದಲ್ಲಿ ಪಾರ್ಕ್ ಸೇ ಯೋನ್ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.
ನಾಯಕಿ ಪ್ರೀತಿ “ಪಂದ್ಯದ ಆಟಗಾರ್ತಿ’ ಗೌರವಕ್ಕೆ ಭಾಜನರಾದರು. ಲೀಗ್ ಹಂತದಲ್ಲಿ ಕೊರಿಯಾ ವಿರುದ್ಧ ಭಾರತ 1-1 ಡ್ರಾ ಫಲಿತಾಂಶ ದಾಖಲಿಸಿತ್ತು. “ಅಲ್ಲಿನ ಕೆಲವು ವೈಫಲ್ಯಗಳನ್ನು ಹೋಗಲಾಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸಿದ್ದೆವು. ಇದು ಯಶಸ್ವಿಯಾಯಿತು. ಇದು ನಮ್ಮ ಬೆಸ್ಟ್ ಗೇಮ್ ಆಗಿತ್ತು’ ಎಂಬುದಾಗಿ ಪ್ರೀತಿ ಪ್ರತಿಕ್ರಿಯಿಸಿದರು.
Related Articles
ಈ ಬಾರಿ ಫೈನಲ್ ಪ್ರವೇಶ ಪಡೆದಾಗಲೇ ಚಿಲಿಯಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಭಾರತ ಅರ್ಹತೆ ಸಂಪಾದಿಸಿತ್ತು.
Advertisement