Advertisement

ಪ್ರಥಮ ಚಿಕಿತ್ಸೆ ಜ್ಞಾನ ಅವಶ್ಯ

09:26 AM Feb 24, 2019 | |

ಸಿಂದಗಿ: ಪ್ರಥಮ ಚಿಕಿತ್ಸೆ ಹೆಚ್ಚಿನ ಅನಾಹುತ ತಪ್ಪಿಸುವ ಕೆಲಸ ಮಾಡುತ್ತದೆ ಎಂದು ಸ್ಥಳೀಯ ಭಾವಿಕಟ್ಟಿ ಆಸ್ಪತ್ರೆ ವೈದ್ಯ ಡಾ| ಸಂಗಮೇಶ ಪಾಟೀಲ ಹೇಳಿದರು.

Advertisement

ಶನಿವಾರ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್‌ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ತಾಲೂಕು ಶಾಖೆ, ಜೆ.ಎಚ್‌. ಪಟೇಲ್‌ ಶಿಕ್ಷಣ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರಥಮ ಚಿಕಿತ್ಸೆ ಕುರಿತು ಅವರು ಉಪನ್ಯಾಸ ನೀಡಿದರು.

ಪ್ರಥಮ ಚಿಕಿತ್ಸೆ ತರಬೇತಿ ಎಲ್ಲರೂ ಪಡೆಯಬೇಕಾಗಿರುವುದು ಅವಶ್ಯವಾಗಿದೆ. ಪ್ರಥಮ ಚಿಕಿತ್ಸೆ ತರಬೇತಿ ಪಡೆದ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಒಂದು ಸಂದರ್ಭದಲ್ಲಿ ಇದು ಸರಳ ಚಿಕಿತ್ಸೆಯಾಗಿರುತ್ತದೆ. ಕೆಲ ಸಂದರ್ಭದಲ್ಲಿ ಜೀವರಕ್ಷಕ ತಂತ್ರವಾಗಿರುತ್ತದೆ ಎಂದರು.

ಯುದ್ಧ ಭೂಮಿಯಲ್ಲಿ ಭಯಾನಕತೆ ಕಂಡು ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಲು ಹೆನ್ರಿ ಡ್ಯುನಾಂಟ್‌ ಅವರು ಪ್ರಾರಂಭಿಸಿದ ರೆಡ್‌ಕ್ರಾಸ್‌ ಸಂಸ್ಥೆಯೊಂದಿಗೆ ಪ್ರಥಮ ಚಿಕಿತ್ಸೆ ಪ್ರಾರಂಭವಾಯಿತು. ಯುದ್ಧ ಭೂಮಿಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಗಾಯಾಳು ಯೋಧರಿಗೆ ಪ್ರಥಮ ಚಿಕಿತ್ಸೆ ಮೂಲಕ ವೈದ್ಯಕೀಯ ಚಿಕಿತ್ಸೆ ನೀಡಿತು ಎಂದು ವಿವರಿಸಿದರು.

ರೋಗಿ ಅಥವಾಗಿ ಅಪಘಾತಕ್ಕಿಡಾದ ವ್ಯಕ್ತಿ ಜೀವ ಉಳಿಸುವುದು, ಆಗಿರುವ ಅವಘಡ ತೀವ್ರವಾಗದಂತೆ ತಡೆಯುವುದು, ಉಂಟಾದ ತೀವ್ರ ರಕ್ತಸ್ರಾವ ತಡೆಗಟ್ಟುವುದು ಪ್ರಥಮ ಚಿಕಿತ್ಸೆ ಉದ್ದೇಶವಾಗಿದೆ ಎಂದರು.

Advertisement

ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಬಿರಾದಾರ, ಅಧ್ಯಕ್ಷತೆ ವಹಿಸಿ ಜೆ.ಎಚ್‌. ಪಟೇಲ್‌ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಬಿ.ಎಂ. ಹುರಕಡ್ಲಿ ಮಾತನಾಡಿ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಸಾಮಾಜಿಕ ಸೇವೆ ಸಲ್ಲಿಸಬೇಕು ಎಂದರು.

ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್‌.ಎ. ಕೆರೂಟಗಿ ನೈಸರ್ಗಿಕ ಆಪತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಭಾರತೀಯ ರೆಡ್‌ಕ್ರಾಸ್‌ ತಾಲೂಕು ಶಾಖೆ ಚೇರಮನ್‌ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಮಾತನಾಡಿದರು. ಪ್ರಾಧ್ಯಾಪಕ ಡಾ| ಅರವಿಂದ ಮನಗೂಳಿ, ಬಿ.ಎ. ಪಾಟೀಲ, ಡಾ| ಎ.ಬಿ. ಸಿಂದಗಿ, ಡಾ| ಬಿ.ಜಿ. ಪಾಟೀಲ, ಡಾ| ಜೆ.ಜಿ. ಜೋಶಿ, ಎಂ.ಜಿ. ಬಿರಾದಾರ, ಜಿ.ಜಿ. ಕಾಂಬಳೆ, ಶಶಿಕಾಂತ ಹೂಗಾರ, ಬಿ.ಡಿ. ಮಾಸ್ತಿ, ಬಿ.ಜಿ. ಮಠ, ಎಂ.ಎಸ್‌. ಹೊಸಮನಿ, ಎಸ್‌.ಎಸ್‌. ಪಾಟೀಲ, ವಿ.ಜಿ. ಇನಾಮದಾರ, ಶೋಭಾ ಪೂಜಾರಿ, ಪ್ರಕಾಶ ಪೂಜಾರಿ, ಆರ್‌.ಪಿ. ಬಿರಾದಾರ,
ವಿ.ಬಿ. ಪಾಟೀಲ ಇದ್ದರು. ಸಿದ್ದಬಸವ ಕುಂಬಾರ ಸ್ವಾಗತಿಸಿದರು. ಅಶೋಕ ಮಾಲಳ್ಳಿ ನಿರೂಪಿಸಿದರು. ಪದ್ಮಾವತಿ ಮಲ್ಲೇದ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next