Advertisement
ಕೊಲೆಗೀಡಾದ ರಾಜು ದೊಡ್ಡಬೊಮ್ಮನವರನ ಪತ್ನಿ ಬೆಳಗಾವಿಯ ಕಿರಣ ರಾಜು ದೊಡ್ಡಬೊಮ್ಮನವರ(26), ಹಿಂದವಾಡಿಯ ಶಶಿಕಾಂತ ಪಾಟೀಲ, ಖಾಸಬಾಗದ ಧರಣೇಂದ್ರ ಕಂಠಿ, ಸಂಜಯ ರಜಪೂತ ಹಾಗೂ ವಿಜಯ ಜಾಗೃತ ಎಂಬಾತರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Related Articles
Advertisement
ಎರಡನೇ ಹೆಂಡತಿ ಕಿರಣನೊಂದಿಗೆ ರಾಜು ಆಗಾಗ ಜಗಳ ಮಾಡುತ್ತಿದ್ದನು. ಈಕೆಯನ್ನು ಬಿಟ್ಟು ಮಂಡೋಳಿ ರಸ್ತೆಯಲ್ಲಿರುವ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್ ನಲ್ಲಿ ಇರುತ್ತಿದ್ದನು. ಕೆಲ ತಿಂಗಳಿಂದ ರಾಜುನನ್ನು ಕೊಲೆ ಮಾಡಲು ಕಿರಣ ಪ್ಲ್ಯಾನ್ ಮಾಡಿಕೊಂಡಿದ್ದಳು. ಹೀಗಾಗಿ ಪ್ರಮುಖ ಆರೋಪಿ ಸಂಜಯ ರಜಪೂತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಅದರಂತೆ ಮೊದಲು 5 ಲಕ್ಷ ರೂ. ನಂತರ 5 ಲಕ್ಷ ರೂ. ಹಣ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮಂಡೋಳಿ ರಸ್ತೆಯ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿದ್ದ ರಾಜು ಮಲ್ಲಪ್ಪ ದೊಡ್ಡಬೊಮ್ಮನ್ನವರ(41) ಎಂಬಾತನ ಕಣ್ಣಿಗೆ ಖಾರದ ಪುಡಿ ಎರಚಿ ಮಾ. 15ರಂದು ಬೆಳಗ್ಗೆ 6:30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಮೂರನೇ ಪತ್ನಿಯನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿತ್ತು. ರಕ್ತದ ಮಡವಿನಲ್ಲಿ ಬಿದ್ದು ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದನು. ಪತ್ನಿ ದೀಪಾ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊಲೆಯಾದ ನಾಲ್ಕೈದು ದಿನಗಳಲ್ಲಿಯೇ ಹಂತಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ : ಉರುಸ್ನಲ್ಲಿ ಪ್ರಸಾದ ಸೇವಿಸಿ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗುಡಾಜಿ, ಇನ್ಸಪೆಕ್ಟರ್ ಸುನೀಲಕುಮಾರ ಹಾಗೂ ಪೊಲೀಸರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ರಾಜು ದೊಡ್ಡಬೊಮ್ಮನ್ನವರ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು. ಕೆಲವು ಕಡೆಗೆ ಮನೆ ಕಟ್ಟಿಸಿ ಕೊಡುತ್ತಿದ್ದನು. ಇದರಲ್ಲಿ ಹಲವಾರು ಮನೆಗಳು ಅರ್ಧಂಬರ್ಧ ಆಗಿವೆ. ಗ್ರಾಹಕರು ರಾಜುನ ಬಗ್ಗೆ ಅಸಮಾಧಾನ ಹೊಂದಿದ್ದರು. ಇನ್ನೂ ಕೆಲವರಿಂದ ಹಣ ಪಡೆದು ಜಾಗ ನೀಡುವುದಾಗಿ ಭರವಸೆ ನೀಡಿದ್ದನು. ಆದರೆ ಅನೇಕರಿಗೆ ಜಾಗ ನೀಡಿರಲಿಲ್ಲ ಎಂಬ ಆರೋಪವೂ ರಾಜು ಮೇಲಿದೆ.