Advertisement

Fireworks Tragedy: ಅತ್ತಿಬೆಲೆ ಪಟಾಕಿ ದುರಂತ; ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

11:10 AM Oct 10, 2023 | Team Udayavani |

ಬೆಂಗಳೂರು: ಅತ್ತಿಬೆಲೆಯ ಪಟಾಕಿ ದುರಂತ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡ ಬೆನ್ನಲ್ಲೇ ಸೋಮವಾರ ಸಿಐಡಿಯ ನರಹತ್ಯ ಮತ್ತು ಕಳ್ಳತನ ವಿಭಾಗದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೇ ವೇಳೆ ತಾಲೂಕು ಮತ್ತು ಪುರಸಭೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.

Advertisement

ಸಿಐಡಿ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಮತ್ತು ಎಸ್ಪಿ ವೆಂಕಟೇಶ್‌ ನೇತೃತ್ವದ ತಂಡ ಮಧ್ಯಾಹ್ನ 12.30ಕ್ಕೆ ಘಟನಾ ಸ್ಥಳ ಮತ್ತು ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ಆಸ್ಪತ್ರೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿ ರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ವೆಂಕಟೇಶ್‌ ನೇತೃತ್ವದ ತಂಡ ಕೆಲ ತಜ್ಞರ ಜತೆ ಸ್ಫೋಟ ಗೊಂಡ ಸ್ಥಳದಲ್ಲಿ ಒಂದೂವರೆ ಗಂಟೆಗಳ ಕಾಲ ಪರಿಶೀಲಿಸಿತು. ಪಟಾಕಿ ತುಂಬಿದ ಗೋಡೌನ್‌, ಅದರ ಹಿಂಭಾಗದ ಸ್ಥಳ ಮತ್ತು ಅವಶೇಷಗಳ ತುಂಬಿದ್ದ ಸ್ಥಳಗಳಲ್ಲಿ ಪರಿಶೀಲಿಸಿದರು. ಬಳಿಕ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಪಡೆದುಕೊಂಡರು.

ಸಮಗ್ರ ವರದಿ: ಅನಂತರ ಅತ್ತಿಬೆಲೆ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಎಸ್ಪಿ ವೆಂಕಟೇಶ್‌, ಠಾಣಾಧಿಕಾರಿಗಳಿಂದ ಎಫ್ಐಆರ್‌, ಪ್ರಾಥಮಿಕವಾಗಿ ಸಂಗ್ರಹಿಸಿದ ಸಾಕ್ಷ್ಯಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ತಾಂತ್ರಿಕ ತನಿಖೆಯ ವರದಿ ಸೇರಿ ಸಮಗ್ರ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next