Advertisement

ಪಟಾಕಿ ನಿಷೇಧ: ಮಣ್ಣಿನ ದೀಪಕ್ಕೆ ಹೆಚ್ಚಿದ ಬೇಡಿಕೆ

07:59 PM Nov 13, 2020 | Suhan S |

ಚನ್ನರಾಯಪಟ್ಟಣ: ದೀಪಾವಳಿ ಹಿನ್ನೆಲೆಯಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಬಣ್ಣದ ಹಣತೆ ಹಾಗೂ ದೀಪಾಲಂಕಾರ ವಸ್ತುಗಳು ಈಗಾಗಲೇ ಮಾರುಕಟ್ಟೆ ಪ್ರವೇಶಮಾಡಿದ್ದು, ಖರೀದಿ ಜೋರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿ ನಿಷೇಧ ಮಾಡಿದ್ದರಿಂದ ಹೆಣ್ಣು ಮಕ್ಕಳು ಈ ಬಾರಿ ಕೇವಲ ಹಣತೆ ಹಚ್ಚಿ ದೀಪಾವಳಿ ಆಚರಣೆ ಮಾಡಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಎಲ್ಲೆಡೆ ಮಣ್ಣಿನ ದೀಪಕ್ಕೆ ಬೇಡಿಕೆ ಬಂದಿದೆ.

Advertisement

ತಾಲೂಕಿನ ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ ಹೋಬಳಿ ಕೇಂದ್ರ ಹಾಗೂ ಪಟ್ಟಣದ ಪನ್ಸಾರಿ ಅಂಗಡಿಗಳಲ್ಲಿ ಮಣ್ಣಿನಿಂದ ತಯಾರಿಸಿದ ತರಹೇವಾರಿ ದೀಪಗಳು,ಅಲಂಕಾರಿಕವಸ್ತುಗಳುಮಾರಟಕ್ಕೆ ಸಿದ್ಧ ಗೊಂಡಿವೆ. ನರಕ ಚತುರ್ದಶಿ, ದೀಪಾವಳಿಗೆ ಒಂದು ದಿನ ಮುಂಚಿತವಾಗಿಪಟ್ಟಣದಲ್ಲಿ ಸಂತೆನಡೆಯುತ್ತಿದ್ದು,ದೀಪಗಳ ವ್ಯಾಪಾರ ಭರ್ಜರಿಯಾಗಿ ನಡೆಯುವ ನಿರೀಕ್ಷೆ ವರ್ತಕರದ್ದಾಗಿದೆ.

ಹೊರಾಜ್ಯದಿಂದ ಬಂದ ದೀಪಗಳು: ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಭರಾಟೆ ಜೋರಾಗಿರುವ ವೇಳೆಯಲ್ಲಿ ಜೇಡಿಮಣ್ಣಿ ನಿಂದ ತಯಾರಿಸಿದ ದೀಪಗಳು ಆಕರ್ಷಣೆ ಮಾಡುತ್ತಿವೆ. ರಾಜಸ್ಥಾನದ ಜೋಧ್‌ಪುರದಿಂದ ದೀಪಾಲಂಕಾರ ವಸ್ತುಗಳನ್ನು ತಂದು ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ವಿವಿಧ ಬಗೆಯ ದೀಪಗಳು: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ವಿನ್ಯಾಸದಿಂದ ತಯಾರಿಸಿದ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ.ತೆಂಗಿನ ಕಾಯಿ ಮಾದರಿ, ತುಳಸಿಕಟ್ಟೆ,ವೃಂದಾವನ, ತಟ್ಟೆ ಯಲ್ಲಿ ಹಣತೆ, ಗಾಳಿ ಬಂದಾಗ ಆರಿ ಹೋಗ ದಂತೆ ಪುರಾತನ ಮಾದರಿಯ ಲ್ಯಾಂಪ್‌ ರೀತಿಯಲ್ಲಿದೀಪಗಳನ್ನು ಮಾರಾ ಟಕ್ಕೆ ಇಡಲಾಗಿದೆ.

ಕೈಗೆಟಕುವ ದರ: ಮಣ್ಣಿನ ದೀಪಗಳ ಜೊತೆಗೆ ಪಿಂಗಾಣಿ ದೀಪಗಳು, ದೀಪಾವಳಿ ಹಬ್ಬಕ್ಕೆ ಅಗತ್ಯ ಇರುವ ಮನೆಯ ಅಲಂಕಾರಿಕ ವಸ್ತುಗಳು 5 ರೂ. ನಿಂದ ಪ್ರಾರಂಭವಾಗಿ 150 ರೂ.ನಲ್ಲಿ ದೊರೆಯುತ್ತಿವೆ. ಮಧ್ಯಮ ವರ್ಗದವರು, ಅನುಕೂಲಸ್ಥರು ಈಗಾಗಲೇ ಮಣ್ಣಿನ ವಸ್ತು ಖರೀದಿಸಲು ಮುಂದಾಗಿದ್ದಾರೆ.

ಕೋವಿಡ್ ಸೋಂಕಿನ ಪ್ರಭಾವವನ್ನು ತಡೆಯಲು ಸರ್ಕಾರ ಪಟಾಕಿ ನಿಷೇಧ ಮಾಡಿರು ವುದು ಸ್ವಾಗತಾರ್ಹ. ಈ ಬಾರಿಮಕ್ಕಳಿಗೆ ಪಟಾಕಿಬದಲಾಗಿಮಣ್ಣಿನಹಣತೆಬೆಳಗಿಸಿ, ಮನೆ ಮುಂದೆಅಲಂಕಾರಮಾಡಿಸಿ, ಸಂಭ್ರಮದಿಂದ ದೀಪಾವಳಿಆಚರಿಸುತ್ತೇವೆ. ಕೆ.ಪಿ.ಲಕ್ಷ್ಮೀ, ಗೃಹಿಣಿ

Advertisement

ದೀಪಾವಳಿ ಹಬ್ಬದಂದು ಜೇಡಿ ಮಣ್ಣಿನಿಂದ ತಯಾರಿಸಿದ್ದ ಬಣ್ಣ ಬಣ್ಣದ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಣೆ ಮಾಡುತ್ತಿವೆ. ಸ್ವದೇಶಿ ದೀಪ ಖರೀದಿಸಿ ಕುಂಬಾರಿಕೆ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು. -ಎ.ಎನ್‌.ಮಂಜೇಗೌಡ. ತಾ.ಅಧ್ಯಕ್ಷ, ವಿಶ್ವ ಹಿಂದೂ ಪರಿಷದ್‌

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next