Advertisement
ನಗರದಲ್ಲಿ ಪಟಾಕಿಯಿಂದ ತೊಂದರೆಗೆ ಒಳಗಾದವರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಅ.31ರಿಂದ ನ. 4ರವರೆಗೆ 60 ಮಂದಿಗೆ ಕಣ್ಣಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 34 ಮಕ್ಕಳು ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. 26 ಮಂದಿಗೆ ಗಂಭೀರ ಮತ್ತು 34 ಮಂದಿಗೆ ಸಣ್ಣ ಪಮಾಣದ ಗಾಯಗಳಾಗಿವೆ. 6 ಮಂದಿಗೆ ಸರ್ಜರಿ ಮಾಡಲಾಗಿದೆ. ಒಟ್ಟು 14 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಒಟ್ಟು 76 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 10 ವರ್ಷದೊಳಗಿನ 14 ಮಕ್ಕಳು, 18 ವರ್ಷದೊಳಗಿನ 22 ಮಕ್ಕಳು ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದವರಲ್ಲಿ 18ವರ್ಷ ಮೇಲ್ಪಟ್ಟವರು 40 ಹಾಗೂ 18 ವರ್ಷದೊಳಗಿನ 36 ಮಕ್ಕಳು ಇದ್ದಾರೆ. Advertisement
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
01:11 PM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.