Advertisement

Firefly: ಟೀಸರ್‌ ನಲ್ಲಿ ಮಿಂಚಿದ ʼಫೈರ್‌ ಫ್ಲೈʼ

04:17 PM Sep 12, 2024 | Team Udayavani |

ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ “ಫೈರ್‌ ಫ್ಲೈ’ನಿಂದ ಟೀಸರ್‌ ಬಿಡುಗಡೆಯಾಗಿದೆ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್‌ ರಿಲೀಸ್‌ ಆಗಿದ್ದು, ವಿಕ್ಕಿಯಾಗಿ ನಾಯಕ ವಂಶಿ ಕಾಣಿಸಿಕೊಂಡಿದ್ದಾರೆ.

Advertisement

ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್‌ ವಿನ್ನಿಂಗ್‌ ಮ್ಯಾಥ್ಸ್ ಟೀಚರ್‌ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್‌ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ತಮಾಷೆಯಾಗಿ ಕಟ್ಟಿಕೊಡಲಾಗಿದೆ. ಟೀಸರ್‌ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ.

ನಟ ಕಂ ನಿರ್ದೇಶಕ ವಂಶಿ ಮಾತನಾಡಿ, “ಎಲ್ಲರ ಜೀವನದಲ್ಲಿ ಒಂದು ಪಾಯಿಂಟ್‌ ಇರುತ್ತೆ. ನಾವು ಡೆಡ್‌ ಎಂಡ್‌ ಅಂದುಕೊಂಡಿರುತ್ತೇವೆ. ಒಂದು ಭರವಸೆ ಹಾಗೂ ಪ್ರೇರಣೆಗೆ ಕಾಯುತ್ತೇವೆ. ಆ ಟೈಮ್‌ನಲ್ಲಿ ಹೋಪ್‌ ಎಂಬ ಬೆಳಕು ಎಲ್ಲಿಂದಲೋ ಬರಲ್ಲ, ಅದು ನಮ್ಮಿಂದಲೇ ಬರಬೇಕು ಎಂಬುದೇ ಫೈರ್‌ ಫ್ಲೈ. ಅದಕ್ಕೆ ಈ ಟೈಟಲ್‌ ಇಟ್ಟಿದ್ದೇವೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next