Advertisement

ಅಗ್ನಿಶಾಮಕ ಸೇವಾ ಸಪ್ತಾಹ: ಸಂಸ್ಮರಣೆ ಕವಾಯತು

08:23 PM Apr 14, 2019 | Sriram |

ಮಹಾನಗರ: ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು ಅಗ್ನಿಶಮನಕ್ಕಿಂತ ಅಗ್ನಿ ನಿವಾರಣೆ ಉತ್ತಮ ಎಂಬ ಧ್ಯೇಯ ವಾಕ್ಯದೊಂದಿಗೆ 2019ನೇ ಸಾಲಿನ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಎ. 14ರಿಂದ 20ರ ವರೆಗೆ ನಡೆಸಲಿದ್ದು, ಇದರ ಅಂಗವಾಗಿ ವಿದ್ಯಾ ಸಂಸ್ಥೆಗಳು, ಮಾಲ್‌, ಹೊಟೇಲ್‌, ಬ್ಯಾಂಕ್‌ ಹಾಗೂ ಇತರ ಸ್ಥಳಗಳಲ್ಲಿ ಅಗ್ನಿನಿವಾರಣೆ ಮತ್ತು ಅಗ್ನಿಶಾಮಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Advertisement

ಕರ್ತವ್ಯದ ವೇಳೆ ಮರಣ ಹೊಂದಿರುವ ಅಗ್ನಿಶಾಮಕ ಅಧಿಕಾರಿ, ಸಿಬಂದಿಯನ್ನು ನೆನಪಿಸಿಕೊಳ್ಳುವುದು ಅಗ್ನಿಶಾಮಕ ಸೇವಾ ಸಪ್ತಾಹದ ಒಂದು ಭಾಗವಾಗಿರುದರಿಂದ ಎ. 14ರಂದು ನಗರದ ಕುಂಟಿಕಾನ ಬಳಿ ಇರುವ ಕದ್ರಿ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಸಂಸ್ಮರಣೆ ಕವಾಯತು ನಡೆಯಿತು.

ಎ. 20ರಂದು ಬೆಳಗ್ಗೆ 8 ಗಂಟೆಗೆ ನಗರದ ಜ್ಯೋತಿ ವೃತ್ತದಿಂದ ಟೆಲಿಕಾಂ ಹೌಸ್‌ ರಸ್ತೆಯಲ್ಲಿರುವ ಮಂಗಳೂರು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಆವರಣದವರೆಗೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮುಖ್ಯ ಅಗ್ನಿಶಾಮಕ ಅಧಿಕಾರಿ ಅವರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next