ದೇವನಹಳ್ಳಿ: ತಾಲೂಕಿನ ಚಪ್ಪರದಕಲ್ಲು ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಅಗ್ನಿ ಸುರಕ್ಷತೆ ಮತ್ತು ತುರ್ತು ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ನಡೆಯಿತು.
101ಕ್ಕೆ ಕರೆ ಮಾಡಿ: ಪ್ರಾದೇಶಿಕ ಅಗ್ನಿ ಶಾಮಕ ದಳದ ಅಧಿಕಾರಿ ನರಸಿಂಹ ಮೂರ್ತಿ ಮಾತನಾಡಿ, ಅಗ್ನಿ ದುರಂತ ನಡೆದಾಗ ಸಾರ್ವಜನಿಕ ವಲಯದಲ್ಲಿ ಏನೇನು ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣವೇ ತುರ್ತು ಸೇವೆ ಪಡೆಯಲು ಅಗ್ನಿಶಾಮಕ ನಂ.101ಕ್ಕೆ ಕರೆ ಮಾಡಿ ಅವಘಡದಿಂದ ಪಾರಾಗಬಹುದು ಎಂದು ಹೇಳಿದರು.
ಪ್ರಾತ್ಯಕ್ಷಿಕೆಯಿಂದ ಮಾಹಿತಿ ಪಡೆಯಿರಿ: ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಮಾತ ನಾಡಿ, ಬೆಂಕಿ ಅನಾಹುತ ಸಂಭವಿಸಿದಾಗ ಬೆಂಕಿ ನಿಂದಿಸುವ ವಿಧಾನಗಳನ್ನು ತಿಳಿದುಕೊಳ್ಳಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಗ್ನಿ ಸುರಕ್ಷತೆ ಮತ್ತು ತುರ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದು, ಅದನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳ ಅಧಿಕಾರಿಗಳಾದ ನಾಗೇಶ್, ಕಿಶೋರ್.ಎಂ.ಎಲ್.,ಡಾ.ವಿನುತಾ, ಜಿಲ್ಲಾ ಮಟ್ಟ ದ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಹಾಜರಿದ್ದರು.
Advertisement
ಬೆಂಕಿ ಅನಾಹುತ ಸಂಭವಿಸಿದಾಗ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳು, ಮನೆಗಳಲ್ಲಿ ಹೊತ್ತಿಕೊಂಡು ಉರಿ ಯುವ ಬೆಂಕಿ ಆರಿಸುವಿಕೆ, ಕಾಡುಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗಿ ಅಗ್ನಿ ಶಾಮಕ ವಾಹನ ಒಳಗಡೆ ಹೋಗಲು ಸಾಧ್ಯವಾಗದಿದ್ದರೆ ಅಲ್ಲಿರುವ ಮರ, ಗಿಡಗಳ ಹಸಿರಾದ ರೆಂಬೆ, ಕೊಂಬೆ, ಎಲೆಗಳಿಂದ ಬೆಂಕಿಯನ್ನು ಆರಿಸುವಿಕೆ, ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕಚೇರಿ ಗಳಲ್ಲಿ ಅಳವಡಿಸಿರುವ ಕಾರ್ಬೋ ಹೈಡ್ರೇಟ್ ಸಪೆಕ್ಸ್ ಬಳಸಿ ಬೆಂಕಿ ಆರಿಸು ವಿಕೆ ಸೇರಿದಂತೆ ವಿವಿಧ ಪ್ರಾಯೋಗಿಕ ತುರ್ತು ಸೇವೆಗಳ ಪ್ರಾತ್ಯಕ್ಷಿಕೆ ನಡೆಯಿತು.
Related Articles
Advertisement