Advertisement

ಪಾಲಿಕೆ ದಾಳಿಗೆ ಬೆಚ್ಚಿ ದಂಡ, ಶುಲ್ಕ ಪಾವತಿಸಿದ ಟೆಲಿಕಾಂ ಸಂಸ್ಥೆಗಳು

11:48 AM Aug 11, 2017 | Team Udayavani |

ಬೆಂಗಳೂರು: ನಗರದ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಓಎಫ್ಸಿ)ಗಳ ತೆರವಿಗೆ ಬಿಬಿಎಂಪಿ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳಿಗೆ ಹೆದರಿದ ಓಎಫ್ಸಿ ಸೇವಾಸಂಸ್ಥೆಗಳು ಪಾಲಿಕೆಗೆ ದಂಡ ಸಹಿತ ಶುಲ್ಕ ಪಾವತಿಸಿವೆ. 

Advertisement

ಮಂಗಳವಾರದಿಂದ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿನ ಅನಧಿಕೃತ ಓಎಫ್ಸಿ ಕೇಬಲ್‌ ತೆರವು ಕಾರ್ಯಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ನಡುವೆ ಎರಡನೇ ದಿನ ಮೂರು ಟೆಲಿಕಾಂ ಸಂಸ್ಥೆಗಳು 4 ಕೋಟಿ ರೂ. ದಂಡ ಸಹಿತ ಶುಲ್ಕ ಪಾವತಿಸಿವೆ. 

ಮಂಗಳವಾರ ಮತ್ತು ಬುಧವಾರ ಟೆಂಡರ್‌ಶ್ಯೂರ್‌ನಡಿ ಅಭಿವೃದ್ಧಿ ಮಾಡಲಾಗಿರುವ ಕನ್ನಿಂಗ್‌ ಹ್ಯಾಂ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ 4 ಕಿ.ಮೀ. ಉದ್ದದ ಅನಧಿಕೃತ ಕೇಬಲ್‌ ತೆರವುಗೊಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳು, ಕೇಬಲ್‌ಗ‌ಳನ್ನು ಮುಂದಿನ ದಿನಗಳಲ್ಲಿ ಡಕ್ಟ್ಗಳ ಮೂಲಕ ಅಳವಡಿಸುವ ಖಾತರಿಯೊಂದಿಗೆ ಶುಲ್ಕ ಪಾವತಿಗೆ ಮುಂದಾಗಿವೆ. 

ಅನಧಿಕೃತ ಓಎಫ್ಸಿ ಅಳವಡಿಕೆಗೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ರಿಲಾಯನ್ಸ್‌ ಜಿಯೋ, ಎಲ್‌ ಅಂಡ್‌ ಟಿ, 3ಜಿ ಟೆಲಿಕಾಂ ಇನಾ#† ಸಂಸ್ಥೆಗಳು 3.94 ಕೋಟಿ ರೂ. ಓಎಫ್ಸಿ ಶುಲ್ಕ ಹಾಗೂ ದಂಡವನ್ನು ಪಾವತಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿನ ಡಕ್ಟ್ಗಳ ಮೂಲಕವೇ ಕೇಬಲ್‌ ಅಳವಡಿಕೆ ಮಾಡುವ ಭರವಸೆ ನೀಡಿವೆ. 

ಇದರೊಂದಿಗೆ ಭಾರತಿ ಏರ್‌ಟೆಲ್‌, ಸ್ಪೆಕ್ಟ್ರಾ ನೆಟ್‌, ಐಡಿಯಾ ಸೆಲ್ಯೂಲರ್‌ ಸಂಸ್ಥೆಯ ಪ್ರತಿನಿಧಿಗಳು ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡಿ ತಾವು ಪಾವತಿಸಬೇಕಿರುವ ಮೊತ್ತದ ಡಿಮ್ಯಾಂಡ್‌ ನೋಟಿಸ್‌ ಪಡೆದುಕೊಂಡಿದ್ದು, ಸೋಮವಾರದೊಳಗೆ ಹಣ ಪಾವತಿಸದಿದ್ದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. 

Advertisement

ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಅಳವಡಿಸಲಾದ ಅನಧಿಕೃತ ಓಎಫ್ಸಿ ಕೇಬಲ್‌ಗ‌ಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾದ ನಂತರ ಹಲವು ಸಂಸ್ಥೆಗಳು ದಂಡ ಸಹಿತ ಶುಲ್ಕ ಪಾವತಿಸಿವೆ. ಜತೆಗೆ ಕೆಲವೊಂದು ಸಂಸ್ಥೆಗಳು ಹಣ ಪಾವತಿಸಲು ಡಿಮ್ಯಾಂಡ್‌ ನೋಟಿಸ್‌ ಪಡೆದುಕೊಂಡಿವೆ. ಸೋಮವಾರದೊಳಗೆ ಹಣ ಪಾವತಿಸದಿದ್ದರೆ ಕೇಬಲ್‌ಗ‌ಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 
-ಎಂ.ಕೆ.ಗುಣಶೇಖರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

ಅಂಕಿ-ಅಂಶ:
ದಂಡ ಸಹಿತ ಶುಲ್ಕ ಪಾವತಿ 
-ರಿಲಾಯನ್ಸ್‌ ಜಿಯೋ:
3.67 ಕೋಟಿ ರೂ.
-3ಜಿ ಟೆಲಿಕಾಂ ಇನಾ ಇಂಡಿಯಾ: 20.33 ಲಕ್ಷ ರೂ.
-ಎಲ್‌ ಆ್ಯಂಡ್‌ ಟಿ: 6.58 ಲಕ್ಷ ರೂ.
-ಒಟ್ಟು: 3.94 ಕೋಟಿ ರೂ.

ಡಿಮ್ಯಾಂಡ್‌ ನೊಟೀಸ್‌
-ಭಾರತಿ ಏರ್‌ಟೆಲ್‌:
29.29 ಲಕ್ಷ ರೂ.
-ಸ್ಪೆಕ್ಟ್ರಾನೆಟ್‌: 1.09 ಕೋಟಿ ರೂ.
-ಐಡಿಯಾ ಸೆಲ್ಯೂಲರ್‌: 29.56 ಲಕ್ಷ ರೂ.
-ಒಟ್ಟು: 1.68 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next