Advertisement

Hair Dryer ಬಳಸುವಾಗ ಬೆಂಕಿ: ಪಿಜಿ ಪೀಠೊಪಕರಣಗಳಿಗೆ ಹಾನಿ

03:14 PM Dec 23, 2023 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಯ ಮಹಿಳೆಯರ ಪಿಜಿಯಲ್ಲಿ ಹೇರ್‌ ಡ್ರೈಯರ್‌ನಿಂದ ಶಾರ್ಟ್‌ ಸರ್ಕಿಟ್‌ ಉಂಟಾಗಿ ಪೀಠೊಪಕರಣಗಳು ಬೆಂಕಿಯಿಂದ ಸುಟ್ಟುಹೋಗಿರುವ ಘಟನೆ ನಡೆದಿದೆ.

Advertisement

ಎಲೆಕ್ಟ್ರಾನಿಕ್‌ ಸಿಟಿಯ ನಿವಾಸಿ ಶಾಂಭವಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುವಾರ ಸ್ನಾನ ಮಾಡಿ ಕೆಲಸಕ್ಕೆ ಹೋಗುವ ಮುನ್ನ ಹೇರ್‌ ಡ್ರೈಯರ್‌ ಬಳಸಿ ಕೂದಲು ಒಣಗಿಸುತ್ತಿದ್ದರು.

ಈ ವೇಳೆ ಶಾರ್ಟ್‌ ಸರ್ಕಿಟ್‌ ಉಂಟಾಗಿ ಹೇರ್‌ ಡ್ರೈಯರ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಯು ಶಾಂಭವಿ ಅವರ ಕೂದಲಿಗೆ ತಾಕುತ್ತಿದ್ದಂತೆ ಅದನ್ನು ಅವರು ಬೆಡ್‌ ಮೇಲೆ ಎಸೆದಿದ್ದರು. ಪರಿಣಾಮ ಬೆಂಕಿ ತಗುಲಿ ಬೆಡ್‌ ಸುಟ್ಟು ಹೋಗಿದೆ. ಜೊತೆಗೆ ಪಿಜಿಯಲ್ಲಿದ್ದ ಕೆಲ ವಸ್ತುಗಳಿಗೂ ಹಾನಿಯಾಗಿದೆ.

ಶಾಂಭಾವಿ ನಿರ್ಲಕ್ಷ್ಯದಿಂದ ಪಿಜಿಯ ಪೀಠೊಪಕರಣಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ಪಿಜಿ ಮಾಲೀಕ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next