Advertisement

ಶಾನಾಡಿಯಲ್ಲಿ ಬೆಂಕಿ ದುರಂತ: ಅಪಾರ ಹಾನಿ

12:30 AM Feb 23, 2019 | |

ತೆಕ್ಕಟ್ಟೆ:  ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾನಾಡಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ನೂರಾರು ಎಕರೆ ಪ್ರದೇಶ ಕರಟಿ ಹೋದ ಘಟನೆ ಫೆ.22ರಂದು ಮಧ್ಯಾಹ್ನ ಸಂಭವಿಸಿದೆ.

Advertisement

ಕೆದೂರಿನ ತೋಟಗಾರಿಕಾ ಇಲಾಖೆ ಎದುರಿನ ಸುಮಾರು 30 ಎಕರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿ ಕೊಂಡಿತ್ತು. ಗಾಳಿಯ ತೀವ್ರತೆ ಹೆಚ್ಚುತ್ತಿದ್ದಂತೆ ಬೆಂಕಿಯು ಸಮೀ ಪದ ಹಿರಿಯ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್‌ ಅವರ ತೋಟಕ್ಕೆ ವ್ಯಾಪಿಸಿತು. ಸುಮಾರು 2.5 ಎಕರೆ ವಿಸ್ತೀರ್ಣದ ತೋಟದಲ್ಲಿ ಬೆಳೆದು ನಿಂತಿದ್ದ 150ಕ್ಕೂ ಅಧಿಕ ಅಡಿಕೆ ಮರ‌ಗಳು, 40 ಅಗರ್‌ ವುಡ್‌ ಗಿಡಗಳು, 45 ಸಾಗುವಾನಿ ಗಿಡ, 55 ಗೇರು ಗಿಡಗಳು, 10 ಹಲಸು, 5 ಶ್ರೀಗಂಧ, ಜೇನು ಪೆಟ್ಟಿಗೆ, ನೂರಕ್ಕೂ ಅಧಿಕ ಬಾಳೆಗಿಡಗಳು, ಅಪರೂಪದ ಔಷಧೀಯ ಸಸ್ಯಗಳು ಸಹಿತ ಪಂಪ್‌ ಶೆಡ್‌ ಹಾಗೂ ಹನಿ ನೀರಾವರಿ ವ್ಯವಸ್ಥೆ ಸುಟ್ಟು ಹೋ ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಪ್ರತಾಪ್‌ ನಗರದ ಪ್ರಕಾಶ್‌ ಅವರ ಸುಮಾರು 5 ಎಕರೆ ವಿಸ್ತೀರ್ಣದಲ್ಲಿದ್ದ ಅಡಿಕೆ  ಹಾಗೂ ಬಾಳೆ ಗಿಡಗಳು, ದನದ ಕೊಟ್ಟಿಗೆ ಮುಂತಾದವು ಭಸ್ಮವಾಗಿವೆ. ಶಾನಾಡಿ ಪ್ರಶಾಂತ್‌ ಶೆಟ್ಟಿಯವರ ಸುಮಾರು 2 ಎಕರೆ ವಿಸ್ತೀರ್ಣದ ರಬ್ಬರ್‌  ತೋಟ,ಗಣೇಶ್‌ ಪುತ್ರನ್‌,ಕೆದೂರು ಪ್ರತಾಪ್‌ ನಗರ ಗುಣಶೀಲ, ಮನೋಹರ್‌, ಪದ್ದು,ಉದಯ ಅವರ ತೋಟಗಳಿಗೂ ಹಾನಿಯಾಗಿದೆ. 

ಸ್ಥಳೀಯರು ಹಾಗೂ ಕುಂದಾಪುರ ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದರು.ಕೆದೂರು ಗ್ರಾ.ಪಂ.ಅಧ್ಯಕ್ಷ ಭುಜಂಗ ಶೆಟ್ಟಿ, ಗ್ರಾ.ಪಂ.ಸದಸ್ಯರು ಹಾಗೂ ಪ್ರಭಾರ ಪಿಡಿಒ ಹೆರಿಯಣ್ಣ ಶೆಟ್ಟಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next