Advertisement

Navunda: ಫ್ಯಾನ್ಸಿ ಸ್ಟೋರ್‌ನಲ್ಲಿ ಬೆಂಕಿ ದುರಂತ; 3 ಲಕ್ಷ ರೂ. ಮಿಕ್ಕಿ ನಷ್ಟ

07:38 PM Aug 23, 2024 | Team Udayavani |

ಉಪ್ಪುಂದ: ಬೈಂದೂರು ತಾಲೂಕಿನ ನಾವುಂದ ಜಂಕ್ಷನ್‌ ಪ್ಲಾಜಾ ಗ್ರೋ ಕಾಂಪ್ಲೆಕ್ಸ್‌ನಲ್ಲಿರುವ ಫ್ಯಾನ್ಸಿ ಸ್ಟೋರ್‌ಗೆ ಶುಕ್ರವಾರ(ಆ.23) ಆಕಸ್ಮಿಕವಾಗಿ ಬೆಂಕಿ ತಗಲಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.

Advertisement

ಅರೆಹೊಳೆ ಪ್ರತಿಭಾ ವಿಜೇಂದ್ರ ಟೈಲರಿಂಗ್‌ ಜತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ವಸ್ತುಗಳು ಹಾಗೂ ಸುಮಾರು 5 ಸಾ.ರೂ. ಇತ್ತು.

ಪ್ರತಿಭಾ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬಳಿಕ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು 12.45ರ ಹೊತ್ತಿಗೆ ಹೊಗೆ ತುಂಬಿಕೊಂಡದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬಂದಿ ಹಾಗೂ ಪೊಲೀಸರಿಗೆ ತಿಳಿಸಿದರು. ಅಗ್ನಿ ಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಒಳಗಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದು, 3 ಲಕ್ಷ ರೂ. ಮಿಕ್ಕಿ ನಷ್ಟ ಅಂದಾಜಿಸಲಾಗಿದೆ.

ಬೈಂದೂರು ಪೊಲೀಸರು ಸ್ಥಳಕ್ಕೆ ತೆರಳಿದ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next